ಸಿಯೋಲ್: ವ್ಯವಹಾರಿಕ ಭಾಷೆಯಾಗಿರುವ ಇಂಗ್ಲಿಷ್ ಇಂದು ಅನಿವಾರ್ಯ ಮತ್ತು ಅಗತ್ಯವಾಗಿದೆ. ಈ ಹಿನ್ನೆಲೆ ಅನೇಕ ಇಂಗ್ಲಿಷ್ ಪ್ರಭಾವ ಹೊಂದಿರದ ದೇಶಗಳು ಇಂಗ್ಲಿಷ್ ಕಲಿಕೆಗೆ ಒತ್ತು ನೀಡುತ್ತಿವೆ. ಇದೇ ಕಾರಣಕ್ಕೆ ಒಂದು ಹೆಜ್ಜೆ ಮುಂದಾಗಿರುವ ಸಿಯೋಲ್ ಪ್ರಾಥಮಿಕ ಮತ್ತು ಮಧ್ಯಮಿಕ ಶಾಲಾ ಹಂತದಲ್ಲೇ ಮಕ್ಕಳ ಇಂಗ್ಲಿಷ್ ಕಲಿಕೆ ಸುಧಾರಣೆಗಾಗಿ ಇಂಗ್ಲೀಷ್ ಟ್ಯೂಟರ್ (ಕಲಿಕೆ) ರೋಬೋಟ್ಗಳನ್ನು ಪರಿಚಯಿಸಲು ಮುಂದಾಗಿದೆ. ಈ ರೋಬೋಟ್ಗಳು ಮಕ್ಕಳ ಜೊತೆಗೆ ಒನ್ ಟು ಒನ್ ಇಂಗ್ಲಿಷ್ ಸಂಪರ್ಕ ಬೆಳೆಸಲಿದ್ದು, ಅವರ ಭಾಷಾ ಕಲಿಕೆಯನ್ನು ಹೆಚ್ಚಿಸಲಿವೆ ಎಂದು ಮುನ್ಸಿಪಲ್ ಶಿಕ್ಷಣ ಕಚೇರಿ ತಿಳಿಸಿದೆ.
ಸಿಯೋಲ್ ಮೆಟ್ರೋಪಾಲಿಟನ್ ಆಫೀಸ್ ಆಫ್ ಎಜುಕೇಷನ್, ಸಣ್ಣ ಮಕ್ಕಳ ಇಂಗ್ಲಿಷ್ ಶಿಕ್ಷಣ ಕಲಿಕೆಗೆ ನೆರವಾಗಲು ರೋಬೋಟ್ ಬಳಕೆಗೆ ಮುಂದಾಗಿದೆ ಎಂದು ಯೊನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಈ ಟ್ಯೂಟರ್ ರೋಬೋಟ್ ಅನ್ನು ಖಾಸಗಿ ಕಂಪನಿ ಅಭಿವೃದ್ಧಿ ಪಡಿಸಿದ್ದು, ಮುಂದಿನ ವರ್ಷ ಮಾರ್ಚ್ನಿಂದ ರಾಜಧಾನಿಯ ಐದು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಪರೀಕ್ಷಾರ್ಥ ಪ್ರಯೋಗದ ಅಂಗವಾಗಿ ಪರಿಚಯಿಸಲಿದೆ ಎಂದು ಕಚೇರಿ ತಿಳಿಸಿದೆ.
ಕೃತಕ ಬುದ್ಧಿಮತ್ತೆ ಆಧಾರಿತ ಈ ಟ್ಯೂಟರ್ ರೋಬೋಟ್ಗಳು ರೆಸ್ಟೋರೆಂಟ್ನಲ್ಲಿ ಸರ್ವೀಸ್ ಮಾಡುವ ರೋಬೋಟ್ನಂತೆ ಇರಲಿವೆ. ಇವು ವಿದ್ಯಾರ್ಥಿಗಳ ಜೊತೆಗೆ ನೇರವಾಗಿ ಸಂಪರ್ಕ ನಡೆಸುವ ಸಾಮರ್ಥ್ಯವನ್ನು ಹೊಂದಿವೆ. ಇವು ಕ್ಲಾಸ್ ರೂಂನಲ್ಲಿ ಸಹಾಯಕ ಶಿಕ್ಷಕಿಯರಂತೆ ಕಾರ್ಯ ನಿರ್ವಹಿಸಲಿವೆ.