ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟರ್‌ನ ಬಾಟಮ್ ಲೈನ್ ಸುಧಾರಿಸಲು ಅದರ ಅಧಿಕಾರ ವಹಿಸಿಕೊಂಡ ಕೂಡಲೇ ಉದ್ಯೋಗಗಳನ್ನು ಕಡಿತಗೊಳಿಸಲು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಬ್ಯಾಂಕ್ಗಳೊಂದಿಗಿನ ಚರ್ಚೆ ವೇಳೆ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ದಕ್ಷತೆ ಕಾಪಾಡಲು ಉದ್ಯೋಗ ಕಡಿತವೂ ಅಗತ್ಯ ಎಂದು ಬ್ಯಾಂಕರ್ಗಳೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಟ್ವಿಟರ್ ಅಥವಾ ಸಿಇಒ ಪರಾಗ್ ಅಗರವಾಲ್ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಮಯದಲ್ಲಿ ಯಾವುದೇ ಕಡಿತಗಳಿರುವುದಿಲ್ಲ ಎಂದು ಈ ಹಿಂದೆ ಅಗರವಾಲ್ ಉದ್ಯೋಗಿಗಳಿಗೆ ಹೇಳಿದ್ದರು. ವರದಿಗಳ ಪ್ರಕಾರ, ಕಂಪೆನಿಯ ನೀತಿ ವಿಭಾಗದಲ್ಲಿ ಮಸ್ಕ್ ಉದ್ಯೋಗ ಕಡಿತ ಮಾಡುವ ಸಾಧ್ಯತೆ ಇದೆ. ಕ್ಯಾಪಿಟಲ್ ಹಿಲ್ ಹಿಂಸಾಚಾರದ ಹಿನ್ನೆಲೆಯಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರ ಮಗ ಹಂಟರ್ ಅವರ ಲ್ಯಾಪ್‌ಟಾಪ್‌ಗೆ ಸಂಬಂಧಿಸಿದ ವಿಶೇಷ ಕಥೆಗಳನ್ನು ಸೆನ್ಸಾರ್ ಮಾಡುವ ಕುರಿತು ಈ ವಾರ ಟ್ವಿಟರ್‌ನ ನೀತಿ ಮುಖ್ಯಸ್ಥ ವಿಜಯ ಗಡ್ಡೆ ಅವರ ಟೀಕೆಯಲ್ಲಿ ಮಸ್ಕ್ ಅವರ ಅಸಮಾಧಾನ ವ್ಯಕ್ತಗೊಂಡಿದೆ.
$44 ಬಿಲಿಯನ್‌ಗೆ ಟ್ವಿಟರ್ ಅನ್ನು ಮಸ್ಕ್ ಯಶಸ್ವಿಯಾಗಿ ಸ್ವಾಧೀನಪಡಿಸಿಕೊಂಡಿದ್ದು, ನಾನು ಹಾಗೂ ಕಂಪನಿಯ ಇಡೀ ತಂಡ ಟ್ವಿಟರ್ ಅನ್ನು ಇನ್ನೂ ಚೆನ್ನಾಗಿ ರೂಪಿಸಲು ಕೆಲಸ ಮಾಡುತ್ತೇವೆ ಎಂದು ಅಗರ್ವಾಲ್ ಹೇಳಿದ್ದಾರೆ. ಟ್ವಿಟರ್ ಅನ್ನು ಇನ್ನಷ್ಟು ಉತ್ತಮಗೊಳಿಸಲು, ಅಗತ್ಯವಿರುವಲ್ಲಿ ಸೇವೆಯನ್ನು ಸರಿಪಡಿಸಿ, ಬಲಪಡಿಸಲು ಈ ಕೆಲಸವನ್ನು ನಾನು ಆಯ್ದುಕೊಂಡಿದ್ದೇನೆ. ಈ ಎಲ್ಲ ಗದ್ದಲದ ನಡುವೆಯೂ ಗಮನವಿಟ್ಟು ತುರ್ತು ಕೆಲಸಗಳನ್ನು ಮುಂದುವರಿಸುತ್ತಿರುವ ನಮ್ಮ ಕೆಲಸಗಾರರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಗುರುವಾರ ಅಗರ್ವಾಲ್ ಟ್ವೀಟ್ ಮಾಡಿದ್ದಾರೆ.
ಮಸ್ಕ್ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಅಗರವಾಲ್ ಉದ್ಯೋಗಿಗಳೊಂದಿಗೆ ಮಾತನಾಡಿರುವ ಆಡಿಯೋ ಒಂದು ಸೋರಿಕೆಯಾಗಿದ್ದು, ಆ ಆಡಿಯೋ ಕ್ಲಿಪ್ನಲ್ಲಿ, ಮಸ್ಕ್ ಶೀಘ್ರದಲ್ಲೇ ಕೆಲಸಗಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಒಮ್ಮೆ ಒಪ್ಪಂದದ ಕೆಲಸಗಳು ಮುಕ್ತಾಯಗೊಂಡರೆ, ವಿಭಿನ್ನ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಅದರ ಬಗ್ಗೆ ತಿಳಿದುಕೊಂಡು, ಸಾಧ್ಯವಾದಷ್ಟು ಬೇಗ ಎಲಾನ್ ನಿಮ್ಮ ಜೊತೆ ಮಾತನಾಡಲು ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದಾರೆ.