ಸರ್ಫ್‌ಸೈಡ್ ಬೀಚ್:ಟೆಕ್ಸಾಸ್‌ನ ಬೀಚ್ ಸೈಡ್ ನಗರದಲ್ಲಿ ಗುರುವಾರ ಎಲಿವೇಟೆಡ್ ವಾಕ್‌ವೇಯ ಒಂದು ಭಾಗ ಕುಸಿದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಕನಿಷ್ಠ ಐದು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಡೌನ್‌ಟೌನ್ ಹೂಸ್ಟನ್‌ನಿಂದ ದಕ್ಷಿಣಕ್ಕೆ ಸುಮಾರು 60 ಮೈಲಿ (97 ಕಿಲೋಮೀಟರ್) ದೂರದಲ್ಲಿರುವ ಗಲ್ಫ್ ಆಫ್ ಮೆಕ್ಸಿಕೊದಲ್ಲಿರುವ ಸಣ್ಣ ನಗರವಾದ ಸರ್ಫ್‌ಸೈಡ್ ಬೀಚ್‌ನಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ.
ಸರ್ಫ್‌ಸೈಡ್ ಬೀಚ್ ಸ್ವಯಂಸೇವಕ ಅಗ್ನಿಶಾಮಕ ವಿಭಾಗದ ಸಹಾಯಕ ಮುಖ್ಯಸ್ಥ ಜಸ್ಟಿನ್ ಮಿಲ್ಸ್ ಪ್ರತಿಕ್ರಿಯಿಸಿ " ಗಂಭೀರವಾಗಿ ಗಾಯಗೊಂಡ ಕನಿಷ್ಠ ಐದು ಮಂದಿ ಸಂತ್ರಸ್ತರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ಸಾಗಿಸಲಾಯಿತು. ಘಟನೆಯಲ್ಲಿ ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಈವರೆಗೆ ಗಾಯಾಳುಗಳ ಆರೋಗ್ಯ ಸ್ಥಿತಿ ನನಗೆ ತಿಳಿದಿಲ್ಲ" ಎಂದು ಮಿಲ್ಸ್ ಹೇಳಿದರು. ಸರ್ಫ್‌ಸೈಡ್ ಬೀಚ್ ಅಗ್ನಿಶಾಮಕ ದಳದವರು ಮಧ್ಯಾಹ್ನ 12:34ಕ್ಕೆ ಕರೆಗೆ ಪ್ರತಿಕ್ರಿಯಿಸಿದರು. ಆಸ್ಪತ್ರೆ ಹೆಲಿಕಾಪ್ಟರ್‌ಗಳಿಗೆ ಲ್ಯಾಂಡಿಂಗ್ ವಲಯ ಸ್ಥಾಪಿಸುವ ಜವಾಬ್ದಾರಿಯನ್ನು ಇಲಾಖೆ ವಹಿಸಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು.
"ಟೆಕ್ಸಾಸ್‌ನ ಬೀಚ್ ಸೈಡ್ ನಗರದಲ್ಲಿ ಗುರುವಾರ ಎತ್ತರದ ವಾಕ್‌ವೇ ಕುಸಿದಾಗ ಬೇಸಿಗೆ ಶಿಬಿರಕ್ಕೆ ಬಂದಿದ್ದ 20ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದು, ಐವರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಯಾರ ಜೀವಕ್ಕೂ ಅಪಾಯವಿಲ್ಲ" ಎಂದು ಬ್ರಜೋರಿಯಾ ಕೌಂಟಿ ಅಧಿಕಾರಿಗಳು ತಿಳಿಸಿದ್ದಾರೆ. ಡೌನ್‌ಟೌನ್ ಹೂಸ್ಟನ್‌ನಿಂದ ದಕ್ಷಿಣಕ್ಕೆ ಸುಮಾರು 60 ಮೈಲಿ ದೂರದಲ್ಲಿರುವ ಮೆಕ್ಸಿಕೋ ಕೊಲ್ಲಿಯಲ್ಲಿರುವ ಸಣ್ಣ ನಗರವಾದ ಸರ್ಫ್‌ಸೈಡ್ ಬೀಚ್‌ನಲ್ಲಿ ವಾಕ್‌ವೇ ಕುಸಿತದ ಕಾರಣ ತನಿಖೆಯಲ್ಲಿದೆ.