ಕರ್ನಾಟಕ

karnataka

ETV Bharat / international

ಕೆನಡಾದಲ್ಲಿ ಪಂಜಾಬಿಗಳ ಪ್ರಾಬಲ್ಯ... ಅಲ್ಬೆರ್ಟಾ ರಾಜ್ಯ ವಿಧಾನಸಭೆಯಲ್ಲಿ ನಾಲ್ವರು ಸಿಖ್​ ಶಾಸಕರು ಆಯ್ಕೆ! - election of four punjabis for alberta

ಕೆನಡಾದಲ್ಲಿ ಪಂಜಾಬಿಗಳು ಹಾಗೂ ಸಿಖ್​ರ ಸಂಖ್ಯೆ ಹೆಚ್ಚುತ್ತಿದೆ. ಪರಿಣಾಮ ಅಲ್ಲಿನ ರಾಜಕೀಯದಲ್ಲಿ ಸಿಖ್ಖರು ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಅಲ್ಲಿನ ಚುನಾವಣೆಯಲ್ಲಿ ಒಟ್ಟು 12 ಭಾರತೀಯರ ಪೈಕಿ ನಾಲ್ವರು ಶಾಸಕರಾಗಿ ಆಯ್ಕೆ ಆಗುವಲ್ಲಿ ಯಶಸ್ವಿಯಾಗಿದ್ದಾರೆ.

election-of-four-punjabis-for-alberta-state-assembly-elections
ಕೆನಡಾದಲ್ಲಿ ಪಂಜಾಬಿಗಳ ಪ್ರಾಬಲ್ಯ... ಅಲ್ಬೆರ್ಟಾ ರಾಜ್ಯ ವಿಧಾನಸಭೆಯಲ್ಲಿ ನಾಲ್ವರು ಸಿಖ್​ ಶಾಸಕರು ಆಯ್ಕೆ!

By

Published : Jun 1, 2023, 6:59 PM IST

ಚಂಡೀಗಢ( ಪಂಜಾಬ್​​): ಕೆನಡಾದ ಅಲ್ಬರ್ಟಾ ರಾಜ್ಯ ವಿಧಾನಸಭೆ ಚುನಾವಣೆಗೆ ನಾಲ್ವರು ಪಂಜಾಬಿಗಳು ಆಯ್ಕೆಯಾಗಿದ್ದಾರೆ. ಒಟ್ಟು 15 ಪಂಜಾಬಿಗಳು ಕ್ಯಾಲ್ಗರಿ ಮತ್ತು ಎಡ್ಮಂಟನ್ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ಈ ಸ್ಥಾನಗಳಿಗೆ ನಡೆದ ಚುನಾವಣೆ ಸಾಕಷ್ಟು ಪೈಪೋಟಿಯಿಂದ ಕೂಡಿತ್ತು. ಪ್ರಸ್ತುತ ಯುನೈಟೆಡ್ ಕನ್ಸರ್ವೇಟಿವ್ ಪಾರ್ಟಿ (ಯುಸಿಪಿ) ಸಂಪುಟ ದರ್ಜೆ ಸಚಿವರಾಗಿದ್ದ ರಾಜನ್ ಸಾಹ್ನಿ ಕ್ಯಾಲ್ಗರಿ ನಾರ್ತ್ ವೆಸ್ಟ್‌ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಆಯ್ಕೆ ಆಗಿದ್ದಾರೆ.

ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಎಲೆಕ್ಷನ್: ಸಾವ್ನಿ ನ್ಯೂ ಡೆಮಾಕ್ರಟಿಕ್ ಪಾರ್ಟಿಯ (ಎನ್‌ಡಿಪಿ) ಮೈಕೆಲ್ ಲಿಸ್ಬೋವಾ - ಸ್ಮಿತ್ ಅವರನ್ನು ಸೋಲಿಸಿ ಎಲೆಕ್ಷನ್​​ನಲ್ಲಿ ಭರ್ಜರಿ ಜಯ ಗಳಿಸಿದ್ದಾರೆ. ಮೈಕಲ್​ ಲಿಸ್ಟೋವಾ ಪಕ್ಷವಾದ UCP ಮತ್ತೊಮ್ಮೆ ಆಲ್ಬರ್ಟಾದಲ್ಲಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ, ಎಡ್ಮಂಟನ್ ಮೆಡೋಸ್‌ನ ಹಾಲಿ ಎನ್‌ಡಿಪಿ ಶಾಸಕ ಜಸ್ವೀರ್ ಡಿಯೋಲ್ ಚುನಾವಣೆಯಲ್ಲಿ ಮತ್ತೊಮ್ಮೆ ಗೆದ್ದು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಯುಸಿಪಿಯ ಅಮೃತಪಾಲ್ ಸಿಂಗ್ ಮಥಾರು ಅವರನ್ನು ಸೋಲಿಸಿ, ಈ ಗೆಲುವು ಸಾಧಿಸಿದ್ದಾರೆ. ಎನ್‌ಡಿಪಿಯ ಪರ್ಮೀತ್ ಸಿಂಗ್ ಬೋಪರಾಯ್ ಅವರು ಕ್ಯಾಲ್ಗರಿ ಫಾಲ್ಕನ್ರಿಯಿಂದ ಹಾಲಿ ಯುಸಿಪಿ ಶಾಸಕ ಡೇವಿಂದರ್ ತೂರ್ ಅವರನ್ನು ಸೋಲಿಸಿದ್ದಾರೆ. ಕ್ಯಾಲ್ಗರಿ ಈಶಾನ್ಯದಲ್ಲಿ, NDP ಯ ಗುರಿಂದರ್ ಬ್ರಾರ್ UCP ಯ ಇಂದರ್ ಗ್ರೆವಾಲ್ ಅವರನ್ನು ಮಣಿಸಿ ಶಾಸಕರಾಗಿ ಆಯ್ಕೆ ಆಗುವಲ್ಲಿ ಯಶಸ್ವಿಯಾಗಿದ್ದಾರೆ.

ಪರಾಭವಗೊಂಡ ಭಾರತೀಯ ಮೂಲದವರು:ಕ್ಯಾಲ್ಗರಿ-ಭುಲ್ಲರ್-ಮೆಕ್‌ಲಾಲ್‌ನಿಂದ ಅಮನ್‌ಪ್ರೀತ್ ಸಿಂಗ್ ಗಿಲ್, ಎಡ್ಮಂಟನ್ ಮಿಲ್ ವುಡ್ಸ್‌ನಿಂದ ರಮಣ್ ಅಥ್ವಾಲ್, ಎಡ್ಮಂಟನ್ ಎಲ್ಲರ್ಸ್ಲೀಯಿಂದ ಆರ್ ಸಿಂಗ್ ಬಾತ್, ಕ್ಯಾಲ್ಗರಿ - ಕ್ರಾಸ್‌ನಿಂದ ಗುರಿಂದರ್ ಸಿಂಗ್ ಗಿಲ್, ಡ್ರೇಟನ್ ವ್ಯಾಲಿ-ಡೆವಾನ್‌ನಿಂದ ಹ್ಯಾರಿ ಸಿಂಗ್, ಕ್ಯಾಲ್ಗರಿ-ಕ್ರಾಸ್ ಸ್ಯಾಂಡ್‌ಹುದಿಂದ ಅಮನ್ ಇನ್ಫಿಸಿಲ್-ಸಿಲ್ವಾನ್ ಲೇಕ್‌ನಿಂದ ಮಂಗಾಟ್ ಮತ್ತು ಸಿಲ್ವಾನ್ ಲೇಕ್ ಮತ್ತು ಲೆಥ್‌ಬ್ರಿಡ್ಜ್-ವೆಸ್ಟ್‌ನಿಂದ ಬ್ರಹಮ್ ಲಡ್ಡು ಚುನಾವಣೆಯಲ್ಲಿ ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದಾರೆ.

ನಾಲ್ಕು ನಗರಗಳಲ್ಲಿ ಸಿಖ್ಖರ ಪ್ರಾಬಲ್ಯ: 2021 ರ ಜನಗಣತಿಯ ಪ್ರಕಾರ, ಕೆನಡಾದ ಅರ್ಧಕ್ಕಿಂತ ಹೆಚ್ಚು ಸಿಖ್ಖರು ಈ ನಾಲ್ಕು ನಗರಗಳಲ್ಲಿದ್ದಾರೆ. ಪ್ರಮುಖ ನಗರಗಳೆಂದರೆ ಬ್ರಾಂಪ್ಟನ್ ಸುಮಾರು 1,63,260 ಜನರಿದ್ದರೆ, ಸರ್ರೆ 1,54,415 ಹಾಗೂ ಕ್ಯಾಲ್ಗರಿ ನಗರದಲ್ಲಿ 49,465 ಮತ್ತು ಎಡ್ಮಂಟನ್ 41,385 ಜನ ಪಂಜಾಬಿಗಳಿದ್ದಾರೆ.

ಕೆನಡಾ ರಾಜಕೀಯದಲ್ಲಿ ಪಂಜಾಬಿಗಳ ಪ್ರಭಾವ: ಕೆನಡಾ ರಾಜಕೀಯದಲ್ಲಿ ಪಂಜಾಬ್ ಮೂಲದ ಜನರ ಪ್ರಭಾವ ಹೆಚ್ಚುತ್ತಿದೆ. ರಾಜಕೀಯದಲ್ಲಿ ಮಾತ್ರವಲ್ಲ, ವ್ಯಾಪಾರದಿಂದ ಹಿಡಿದು ಸಾರಿಗೆಯವರೆಗೂ ಪಂಜಾಬಿ ಮೂಲದವರು ಕೆನಡಾದಲ್ಲಿ ಪ್ರವರ್ದ ಮಾನಕ್ಕೆ ಬರುತ್ತಿದ್ದಾರೆ. ಜಗ್ಮೀತ್ ಸಿಂಗ್ ಅವರು ಮೇ 2017 ರಲ್ಲಿ ನ್ಯೂ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷರಾಗಲು ತಮ್ಮ ಪ್ರಚಾರ ಪ್ರಾರಂಭಿಸಿದ್ದರು. ಅಕ್ಟೋಬರ್‌ನಲ್ಲಿ ಅವರು ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಅಲ್ಪಸಂಖ್ಯಾತ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಕೆನಡಾದಲ್ಲಿ ಪಕ್ಷಕ್ಕೆ ಯಾರು ಹೆಚ್ಚು ದೇಣಿಗೆ ಸಂಗ್ರಹಿಸುವ ಸಾಮರ್ಥ್ಯ ಹೊಂದಿರುತ್ತಾರೋ ಅಂತಹ ಅಭ್ಯರ್ಥಿಯನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗುತ್ತದೆ.

ಇದನ್ನು ಓದಿ:ಮ್ಮ ಐಫೋನ್​ನಲ್ಲಿ "ಹಲೋ ಮಿಸ್ಟರ್ ಮೋದಿ" ಎಂದ ರಾಹುಲ್​ ಗಾಂಧಿ: ಯಾಕೆ ಗೊತ್ತಾ?

ABOUT THE AUTHOR

...view details