ಕರ್ನಾಟಕ

karnataka

ETV Bharat / international

ಪಾಕಿಸ್ತಾನದಲ್ಲಿ ಟಿಟಿಪಿ, ಐಎಸ್‌ ಸಂಘಟನೆಯ ಎಂಟು ಶಂಕಿತ ಉಗ್ರರ ಹತ್ಯೆ - ಆತ್ಮಹತ್ಯಾ ದಾಳಿ

ನಿಷೇಧಿತ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಹಾಗೂ ಪಾಕ್​ ಸರ್ಕಾರ ನಡುವಿನ ಕದನ ವಿರಾಮವು ಕಳೆದ ನವೆಂಬರ್‌ನಲ್ಲಿ ಕೊನೆಗೊಂಡಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ (ಕೆಪಿ) ಹಾಗೂ ಬಲೂಚಿಸ್ತಾನ್‌ನಲ್ಲಿ ಭಯೋತ್ಪಾದಕ ಚಟುವಟಿಕೆಯಲ್ಲಿ ಹೆಚ್ಚಳವಾಗಿವೆ. ಬಲೂಚಿಸ್ತಾನದ ಕ್ವೆಟ್ಟಾ ಮತ್ತು ವಾಶುಕ್ ಜಿಲ್ಲೆಗಳಲ್ಲಿ ಎರಡು ಕಾರ್ಯಾಚರಣೆಗಳಲ್ಲಿ ನಿಷೇಧಿತ ಟಿಟಿಪಿ ಮತ್ತು ಐಎಸ್​ ಸಂಘಟನೆಗಳ ಕನಿಷ್ಠ ಎಂಟು ಶಂಕಿತ ಸದಸ್ಯರನ್ನು ಹತ್ಯೆ ಮಾಡಲಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

Eight suspected members of TTP, IS terror outfits killed in Pakistan's Balochistan
ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಟಿಟಿಪಿ, ಐಎಸ್‌ ಸಂಘಟನೆಯ ಎಂಟು ಶಂಕಿತ ಉಗ್ರರ ಹತ್ಯೆ...

By ETV Bharat Karnataka Team

Published : Sep 4, 2023, 1:31 PM IST

ಇಸ್ಲಾಮಾಬಾದ್ (ಪಾಕಿಸ್ತಾನ):ಬಲೂಚಿಸ್ತಾನದ ಕ್ವೆಟ್ಟಾ ಮತ್ತು ವಾಶುಕ್ ಜಿಲ್ಲೆಗಳಲ್ಲಿ ಶನಿವಾರ ನಡೆಸಿದ ಎರಡು ಕಾರ್ಯಾಚರಣೆಗಳಲ್ಲಿ ನಿಷೇಧಿತ ತೆಹ್ರೀಕ್-ಇ ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಮತ್ತು ಐಎಸ್ ಸಂಘಟನೆಗಳ ಎಂಟು ಶಂಕಿತ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಹೇಳಿಕೊಂಡಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಕಾರ್ಯಾಚರಣೆಯ ಸಮಯದಲ್ಲಿ, ಸಿಟಿಡಿ ಅಧಿಕಾರಿಗಳು ಉಗ್ರಗಾಮಿಗಳ ಅಡಗುತಾಣದಿಂದ ಅಪಹರಣಕ್ಕೊಳಗಾದ ವ್ಯಕ್ತಿಯನ್ನು ವಶಕ್ಕೆ ಪಡೆದರು. ಒಂದು ತಿಂಗಳ ಹಿಂದೆ ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಕಬ್ಬಿಣದ ಸರಪಳಿಯಿಂದ ಕೈಕಾಲು ಕಟ್ಟಿ ಕೊಠಡಿಯೊಂದರಲ್ಲಿ ಇರಿಸಲಾಗಿತ್ತು ಎಂದು ಡಾನ್ ಭಾನುವಾರ ವರದಿ ಮಾಡಿದೆ.

ಸ್ಥಳದಲ್ಲಿ ಸಬ್‌ಮಷಿನ್ ಗನ್‌ಗಳು, ಹ್ಯಾಂಡ್ ಗ್ರೆನೇಡ್‌ಗಳು, 9 ಎಂಎಂ ಪಿಸ್ತೂಲ್‌ಗಳು, ಸ್ಫೋಟಿಸುವ ಹಗ್ಗಗಳು ಮತ್ತು ಸ್ಫೋಟಕಗಳನ್ನು ಒಳಗೊಂಡಂತೆ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಸಿಟಿಡಿ ವಕ್ತಾರರ ಹೇಳಿಕೆ ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ನಿಷೇಧಿತ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನದ (ಟಿಟಿಪಿ) ಹಾಗೂ ಸರ್ಕಾರದ ನಡುವೆ ಕಳೆದ ವರ್ಷದ ನವೆಂಬರ್‌ನಲ್ಲಿ ಕದನ ವಿರಾಮ ಕೊನೆಗೊಂಡಿತ್ತು. ಇದರ ಹಿನ್ನೆಲೆಯಲ್ಲಿ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ (ಕೆಪಿ) ಮತ್ತು ಬಲೂಚಿಸ್ತಾನ್‌ನಲ್ಲಿ ಭಯೋತ್ಪಾದಕ ಚಟುವಟಿಕೆಯಲ್ಲಿ ಹೆಚ್ಚಳವಾಗಿದೆ. ಆಗಸ್ಟ್ ತಿಂಗಳಿನಲ್ಲಿ ಮಾತ್ರ, ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ಶೇ 83ರಷ್ಟು ಏರಿಕೆ ಕಂಡಿದೆ ಎಂದು ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಫಾರ್ ಕಾನ್‌ಫ್ಲಿಕ್ಟ್ ಅಂಡ್ ಸೆಕ್ಯುರಿಟಿ ಸ್ಟಡೀಸ್ (ಪಿಐಸಿಎಸ್‌ಎಸ್) ಸಂಗ್ರಹಿಸಿದ ವರದಿಯನ್ನು ಝಿಯೋ ನ್ಯೂಸ್ ಉಲ್ಲೇಖಿಸಿದೆ.

ಆಗಸ್ಟ್ ತಿಂಗಳಿನಲ್ಲಿ ಪಾಕಿಸ್ತಾನದ ದೇಶದಾದ್ಯಂತ ಭಯೋತ್ಪಾದಕ ದಾಳಿಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಇದುವರೆಗೆ 99 ಭಯೋತ್ಪಾದಕ ಘಟನೆಗಳು ದಾಖಲಾಗಿವೆ. ಡೇಟಾ ಪ್ರಕಾರ, ನವೆಂಬರ್ 2014 ರಿಂದ ಒಂದೇ ತಿಂಗಳಲ್ಲಿ ದಾಖಲಾದ ಗರಿಷ್ಠ ಸಂಖ್ಯೆ ಇದಾಗಿದೆ. ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್‌ನಲ್ಲಿ 54 ದಾಳಿಗಳು ನಡೆದಿದ್ದು, ಶೇಕಡ 83 ರಷ್ಟು ಏರಿಕೆಯಾಗಿದೆ ಎಂದು ದತ್ತಾಂಶ ತಿಳಿಸಿದೆ.

ಪಾಕಿಸ್ತಾನವು 22 ಆತ್ಮಹತ್ಯಾ ದಾಳಿಗಳು, 227 ಜನರು ಸಾವು: ಪಿಸಿಎಸ್​ಎಸ್​ ವರದಿಯು ನಾಲ್ಕು ಆತ್ಮಹತ್ಯಾ ದಾಳಿಗಳನ್ನು ಉಲ್ಲೇಖಿಸಿದೆ. ಮೂರು ಕೆಪಿಯ ಬುಡಕಟ್ಟು ಜಿಲ್ಲೆಗಳಲ್ಲಿ ಮತ್ತು ಒಂದು ಪ್ರಾಂತ್ಯದ ಮುಖ್ಯಭೂಮಿಯಲ್ಲಿ ನಡೆದಿದೆ. ಅವುಗಳಲ್ಲಿ ಎಷ್ಟು ನಿಷೇಧಿತ ಸಂಘಟನೆಯಾದ ಟಿಟಿಪಿಯಿಂದ ದಾಳಿಗಳು ಜರುಗಿವೆ. ಆದರೆ ಇನ್ನೂ ಪಾಕಿಸ್ತಾನ ನಾಗರಿಕರ ಮೇಲೆ ಮತ್ತು ಅಧಿಕಾರಿಗಳ ಮೇಲೆ ಹಲವಾರು ದಾಳಿಗಳು ನಡೆದಿವೆ. ಇದೇ ವೇಳೆ ಜುಲೈ ತಿಂಗಳಲ್ಲಿ ಐದು ಆತ್ಮಹತ್ಯಾ ದಾಳಿಗಳು ಜರುಗಿದ್ದು, ಇದು ಒಂದು ವರ್ಷದಲ್ಲಿ ಅತಿ ಹೆಚ್ಚು ದಾಳಿಗಳನ್ನು ನಡೆದಿದೆ. ಒಟ್ಟಾರೆಯಾಗಿ, 2023 ರ ಮೊದಲ ಎಂಟು ತಿಂಗಳಲ್ಲಿ ಪಾಕಿಸ್ತಾನವು 22 ಆತ್ಮಹತ್ಯಾ ದಾಳಿಗಳು ನಡೆದಿವೆ. ಇದರಲ್ಲಿ 227 ಜನರು ಸಾವನ್ನಪ್ಪಿದ್ದಾರೆ ಮತ್ತು 497 ಜನರು ಗಾಯಗೊಂಡಿದ್ದಾರೆ.

ಉಗ್ರಗಾಮಿ ಬೆದರಿಕೆಗೆ ಭದ್ರತಾ ಪಡೆಗಳು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಿವೆ. ಕನಿಷ್ಠ 24 ಉಗ್ರರನ್ನು ಕೊಲ್ಲು ಮುಳಕ ಅನೇಕ ದಾಳಿಗಳನ್ನು ತಪ್ಪಿಸಿವೆ. ದೇಶಾದ್ಯಂತ ವಿವಿಧ ಕಾರ್ಯಾಚರಣೆಗಳಲ್ಲಿ 69 ಇತರರನ್ನು ಬಂಧಿಸಲಾಗಿದೆ ಎಂದು ಪಿಐಸಿಎಸ್​ಎಸ್​ ದತ್ತಾಂಶ ತೋರಿಸುತ್ತದೆ ಎಂದು ಝಿಯೋ ನ್ಯೂಸ್ ವರದಿ ಮಾಡಿದೆ. ವರದಿಯ ಪ್ರಕಾರ, ಆಗಸ್ಟ್‌ನಲ್ಲಿ ಭಯೋತ್ಪಾದಕ ಚಟುವಟಿಕೆಯಿಂದ ಬಲೂಚಿಸ್ತಾನ್ ಮತ್ತು ಬುಡಕಟ್ಟು ಪ್ರದೇಶಗಳು ಹೆಚ್ಚು ಹಾನಿಗೊಳಗಿವೆ. (ಎಎನ್​ಐ)

ಇದನ್ನೂ ಓದಿ:ಪಾಕ್​ನಿಂದ ಪೂರೈಸಿದ ಫೈಟರ್ ಜೆಟ್‌ಗಳು ಕಾರ್ಯಾಚರಣೆಗೆ ಅನರ್ಹವಾಗಿವೆ ಎಂದು ಮ್ಯಾನ್ಮಾರ್​ ಆರೋಪ: ವರದಿ

ABOUT THE AUTHOR

...view details