ಕರ್ನಾಟಕ

karnataka

ETV Bharat / international

'ಯೇ ದೋಸ್ತಿ ಹಮ್ ನಹೀ ತೋಡೆಂಗೆ..': ಶೋಲೆ ಸಿನಿಮಾದ ಹಿಂದಿ ಗೀತೆ ಹಾಡಿ ಪ್ರಧಾನಿ ಮೋದಿ ಸ್ವಾಗತಿಸಿದ ಈಜಿಪ್ಟ್​ ಯುವತಿ!- ನೋಡಿ

ಸೀರೆಯುಟ್ಟು, ಥೇಟ್​ ಭಾರತೀಯರಂತೆ ಸಿಂಗಾರಗೊಂಡಿದ್ದ ಈಜಿಪ್ಟ್​ ಯುವತಿಯರು ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಅದರಲ್ಲಿ ಒಬ್ಬಾಕೆ ಶೋಲೆ ಸಿನಿಮಾದ ಪ್ರಸಿದ್ಧ ಯೇ ದೋಸ್ತಿ ಹಮ್ ನಹಿ ತೋಡೆಂಗೆ ಹಾಡು ಹಾಡಿ ಮನಗೆದ್ದರು.

ಹಿಂದಿ ಗೀತೆ ಹಾಡಿದ ಈಜಿಪ್ಟ್​ ಯುವತಿ
ಹಿಂದಿ ಗೀತೆ ಹಾಡಿದ ಈಜಿಪ್ಟ್​ ಯುವತಿ

By

Published : Jun 25, 2023, 10:46 AM IST

Updated : Jun 25, 2023, 10:57 AM IST

ಕೈರೋ (ಈಜಿಪ್ಟ್):ನಾಲ್ಕು ದಿನಗಳ ಅಮೆರಿಕ ಪ್ರವಾಸ ಮುಗಿಸಿ ಈಜಿಪ್ಟ್​ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಲ್ಲಿನ ಪ್ರಧಾನಿ ಅದ್ಧೂರಿಯಾಗಿ ಬರಮಾಡಿಕೊಂಡರು. ಇದೇ ವೇಳೆ ಈಜಿಪ್ಟ್​ ಯುವತಿಯೊಬ್ಬರು ಬಾಲಿವುಡ್​ನ ಪ್ರಸಿದ್ಧ ಗೀತೆಯನ್ನು ಹಾಡುವ ಮೂಲಕ ಪ್ರಧಾನಿಯನ್ನು ತಮ್ಮ ದೇಶಕ್ಕೆ ಸ್ವಾಗತಿಸಿದರು.

ಸೀರೆಯುಟ್ಟು, ಭಾರತೀಯ ಸಾಂಪ್ರದಾಯಿಕ ಆಭರಣಗಳನ್ನು ಧರಿಸಿದ್ದ ಈಜಿಪ್ಟ್​ ಯುವತಿಯರು ಪ್ರಧಾನಿ ಮೋದಿ ಬರುವಿಕೆಯನ್ನು ಕಾಯುತ್ತಿದ್ದರು. ಮೋದಿ ಆಗಮಿಸುತ್ತಿದ್ದಂತೆ ಯುವತಿ ಜೆನಾ ಎಂಬಾಕೆ, ಭಾರತೀಯ ಚಿತ್ರರಂಗದಲ್ಲಿಯೇ ಅತಿ ಯಶಸ್ವಿ ಚಿತ್ರವಾದ ಶೋಲೆಯ 'ಯೇ ದೋಸ್ತಿ ಹಮ್ ನಹೀ ತೋಡೆಂಗೆ' ಹಾಡನ್ನು ಹಾಡಲು ಶುರು ಮಾಡಿದರು. ಇದನ್ನು ಕಂಡ ಮೋದಿ ಅಲ್ಲಿಯೇ ನಿಂತು ಹಾಡು ಆಲಿಸಿದರು. ಯುವತಿ ಹಾಡು ಪೂರ್ಣಗೊಳಿಸಿದ ಬಳಿಕ 'ವಾಹ್​..!' ಎಂದು ಉದ್ಗರಿಸಿದ ಮೋದಿ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಡಿಯೋ ವೈರಲ್​:ಪ್ರಧಾನಿ ಮೋದಿ ಅವರ ಎದುರು ಈಜಿಪ್ಟ್​ನ ಜೆನಾ ಹಿಂದಿ ಗೀತೆಯನ್ನು ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನೆಟ್ಟಿಗರು ಈಜಿಪ್ಟ್​ ಯುವತಿಯ ಈ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ವಿದೇಶಿಯಾಗಿದ್ದರೂ ಭಾರತದ ಹಾಡನ್ನು ಹಾಡಿದ್ದನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಬಾಲಿವುಡ್​ ಗೀತೆ ಹಾಡುವ ಮೂಲಕ ಜೆನಾ ಭಾರತೀಯರ ಪ್ರೀತಿಗೆ ಪಾತ್ರರಾಗಿದ್ದಾರೆ.

ಜೆನಾ ಖುಷ್​ ಹೋಗಯಾ:ಇದಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಜೆನಾ, ಬಾಲಿವುಡ್ ಹಾಡುಗಳ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದಾರೆ. "ನಾನು ಭಾರತಕ್ಕೆ ಎಂದೂ ಭೇಟಿ ನೀಡಿಲ್ಲ. 6 ವರ್ಷದ ಪ್ರಾಯದಿಂದ ಭಾರತೀಯ ಹಾಡುಗಳನ್ನು ಹಾಡುತ್ತಿದ್ದೇನೆ. 12 ವರ್ಷಗಳಿಂದ ಇದನ್ನು ಮಾಡಿಕೊಂಡು ಬಂದಿದ್ದೇನೆ. ಪ್ರಧಾನಿ ಮೋದಿಯವರನ್ನು ಇದೇ ಮೊದಲ ಬಾರಿಗೆ ಭೇಟಿಯಾದೆ. ತುಂಬಾ ಖುಷಿಯಾಯಿತು. ಮೋದಿ ಎದುರು ಗೀತೆ ಹಾಡಿದ್ದು ಸಂತದ ದುಪ್ಪಟ್ಟು ಮಾಡಿತು ಎಂದು ಹೇಳಿದರು.

ಮೋದಿ ಅವರು ನಮ್ಮನ್ನು ಕಂಡು ನೀವು ಭಾರತೀಯರ ಹಾಗೇ ಕಾಣುತ್ತಿದ್ದೀರಿ. ಭಾರತೀಯ ಹೆಣ್ಣು ಮಕ್ಕಳಂತೆಯೇ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದರು. ಇದು ಉತ್ತಮವಾದ ಅನುಭವ. ನಾನು ಹಾಡುವಾಗ ಅವರು ನಗುತ್ತಿದ್ದರು. ಇದು ಅವರಿಗೆ ಇಷ್ಟವಾಯಿತು ಎಂದು ಭಾವಿಸುತ್ತೇನೆ. ಈ ಭೇಟಿ ನನಗೆ ತುಂಬಾ ಗೌರವ ತಂದಿದೆ ಎಂದು ಜೆನಾ ಸಂಸತ ಹಂಚಿಕೊಂಡರು.

ಈಜಿಪ್ಟ್​ಗೆ 2 ದಿನಗಳ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಹಲವಾರು ಭಾರತೀಯ ಸಮುದಾಯದವರು ರಿಟ್ಜ್ ಕಾರ್ಲ್ಟನ್ ಹೋಟೆಲ್‌ಗೆ ಆಗಮಿಸಿದ್ದರು. ಭಾರತೀಯ ವಲಸಿಗರು ತ್ರಿವರ್ಣ ಧ್ವಜವನ್ನು ಹಾರಾಡಿಸುತ್ತಾ, "ಮೋದಿ ಮೋದಿ" ಮತ್ತು "ವಂದೇ ಮಾತರಂ" ಘೋಷಣೆಗಳನ್ನು ಕೂಗಿ ತಮ್ಮ ಉತ್ಸಾಹವನ್ನು ಪ್ರದರ್ಶಿಸಿದರು. ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಅನೇಕ ಜನರು ಭಾರತೀಯ ಹಾಡುಗಳನ್ನು ಹಾಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.

ಸೀರೆಯಲ್ಲಿ ಈಜಿಪ್ಟ್ ನಾರಿಯರು:ಇದನ್ನು ಅಮಿತ್​ ಮಾಳವಿಯಾ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, 'ಈಜಿಪ್ಟ್​ನ ಕೈರೋದಲ್ಲಿ ಪ್ರಧಾನಿಯನ್ನು ಸ್ವಾಗತಿಸುತ್ತಿರುವ ಈ ಸೀರೆಯುಟ್ಟ ಹುಡುಗಿಯರು ಭಾರತೀಯರಲ್ಲ, ಈಜಿಪ್ಟಿನವರು. ಅವರಲ್ಲಿ ಒಬ್ಬರು ಸುಮಧುರವಾದ ಹಿಂದಿ ಹಾಡನ್ನೂ ಹಾಡಿದ್ದಾರೆ. ಆತಿಥೇಯರು ದೇಶದ ಸಾಂಸ್ಕೃತಿಕ ಸಂವೇದನೆಗಳನ್ನು ಪ್ರತಿಬಿಂಬಿಸಲು ತೋರಿದ ಹೆಚ್ಚುವರಿ ಪ್ರೀತಿಯಾಗಿದೆ. ಇದು ನಮ್ಮ ದೇಶದ ಉದಯೋನ್ಮುಖ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಭಾರತದ ರಾಷ್ಟ್ರಗೀತೆ ಹಾಡಿದ ಬಳಿಕ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಅಮೆರಿಕ ಗಾಯಕಿ ಮೇರಿ ಮಿಲ್ಬೆನ್- ವಿಡಿಯೋ

Last Updated : Jun 25, 2023, 10:57 AM IST

ABOUT THE AUTHOR

...view details