ಕೈರೋ: ಪತ್ನಿಯನ್ನು ಕೊಂದ ನ್ಯಾಯಾಧೀಶರಿಗೆ ಈಜಿಪ್ಟ್ ನ್ಯಾಯಾಲಯ ಮಂಗಳವಾರ ಮರಣದಂಡನೆ ವಿಧಿಸಿದೆ ಎಂದು ನ್ಯಾಯಾಂಗ ಅಧಿಕಾರಿಗಳು ಹೇಳಿದ್ದಾರೆ. ಎರಡು ತಿಂಗಳಲ್ಲಿ ದೇಶದಲ್ಲಿ ನಡೆದ ಮೂರನೇ ಉನ್ನತ ಸ್ತ್ರೀ ಹತ್ಯೆ ಪ್ರಕರಣ ಇದಾಗಿದೆ.
ಈಜಿಪ್ಟ್ ಕೋರ್ಟ್ ಮೂಲಗಳ ಪ್ರಕಾರ, ಕೈರೋ ಬಳಿಯ ಗಿಜಾದಲ್ಲಿನ ಕ್ರಿಮಿನಲ್ ನ್ಯಾಯಾಲಯವು ಉದ್ದೇಶಪೂರ್ವಕ ಕೊಲೆಗಾಗಿ ನ್ಯಾಯಾಧೀಶ ಐಮನ್ ಹಗ್ಗಾಗ್ ಮತ್ತು ಸಹಚರನಿಗೆ ಮರಣದಂಡನೆ ವಿಧಿಸಿದೆ.
ಕ್ರಿಮಿನಲ್ ಕೋರ್ಟ್ ಈ ಪ್ರಕರಣವನ್ನು ಈಜಿಪ್ಟ್‌ನ ಗ್ರಾಂಡ್ ಮುಫ್ತಿ ಅವರಿಗೆ ಅಂತಿಮ ಆದೇಶಕ್ಕಾಗಿ ವರ್ಗಾಯಿಸಿದೆ. ಮುಂದಿನ ವಿಚಾರಣೆ ಸೆಪ್ಟೆಂಬರ್ 11 ಕ್ಕೆ ನಿಗದಿಪಡಿಸಲಾಗಿದೆ, ಈ ವೇಳೆ ಗ್ರಾಂಡ್ ಮುಫ್ತಿಯಿಂದ ಮರಣದಂಡನೆಯ ಅನುಮೋದನೆ ಘೋಷಿಸಲಾಗುತ್ತದೆ.
ಜೂನ್ ಅಂತ್ಯದಲ್ಲಿ, ಈಜಿಪ್ಟ್‌ನ ಕೌನ್ಸಿಲ್ ಆಫ್ ಸ್ಟೇಟ್‌ನ ನ್ಯಾಯಾಧೀಶರಾದ ಐಮನ್ ಹಗ್ಗಾಗ್ ಅವರು ತಮ್ಮ ಪತ್ನಿ ಶೈಮಾ ಗಮಾಲ್ (42) ಅವರ ಕಣ್ಮರೆಯಾದ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಜುಲೈನಲ್ಲಿ ಪ್ರಾಸಿಕ್ಯೂಟರ್‌ಗಳು ಹಗ್ಗಾಗ್ ಮತ್ತು ಸಹಚರನನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಅಲ್ಲದೇ ಅವರನ್ನು ಸಮಾಧಿ ಮಾಡಿದ ಸ್ಥಳವನ್ನು ಸಹ ತೋರಿಸಿದ್ದರು.