ಕಠ್ಮಂಡು:ನೆರೆ ರಾಷ್ಟ್ರ ನೇಪಾಳದ ಕಠ್ಮಂಡುವಿನಲ್ಲಿ ಪ್ರಬಲ ಭೂಕಂಪ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ 6.0 ರಷ್ಟು ತೀವ್ರತೆ ದಾಖಲಾಗಿದೆ. ಕಠ್ಮಂಡುವಿನ ಪೂರ್ವ-ಆಗ್ನೇಯಕ್ಕೆ 147 ಕಿ.ಮೀ ದೂರದಲ್ಲಿನ ಧಿತುಂಗ್‌ನಲ್ಲಿ ಇಂದು ಬೆಳಗಿನ ಜಾವ 6.07ರ ಸುಮಾರಿಗೆ ಘಟನೆ ವರದಿಯಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.
ಈ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದರಿಂದ ಬೆಳಗ್ಗೆ 8 ಗಂಟೆ ಸುಮಾರಿಗೆ ಬಿಹಾರದ ಸೀತಾಮರ್ಹಿ, ಮುಜಾಫರ್‌ಪುರ ಮತ್ತು ಭಾಗಲ್‌ಪುರದಲ್ಲಿಯೂ ಭೂಕಂಪನದ ಅನುಭವವಾಗಿದೆ. ಇದರಿಂದ ಜನರು ಭಯಭೀತರಾಗಿದ್ದಾರೆ. ನೇಪಾಳದ ಧಿತುಂಗ್ ಭಾರತದ ಮುಜಾಫರ್‌ಪುರದಿಂದ ಈಶಾನ್ಯಕ್ಕೆ 170 ಕಿ.ಮೀ ದೂರದಲ್ಲಿದೆ. ಯಾವುದೇ ಪ್ರಾಣಹಾನಿ ಸಂಭವಿಸಿದ ವರದಿಯಾಗಿಲ್ಲ.