ಕಾಬೂಲ್ (ಅಫ್ಘಾನಿಸ್ತಾನ):ಅಫ್ಘಾನಿಸ್ತಾನದಲ್ಲಿ ಶುಕ್ರವಾರ 4.6 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ಮಾಹಿತಿ ನೀಡಿದೆ. ಈ ವಾರ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ. ಇತ್ತೀಚೆಗಷ್ಟೇ 6.3 ರ ತೀವ್ರತೆ ಭೂಕಂಪದಿಂದ 2 ಸಾವಿರಕ್ಕಿಂತಲೂ ಹೆಚ್ಚು ಜನರು ಮೃತಪಟ್ಟಿದ್ದರು.
ಎನ್‌ಸಿಎಸ್ ಪ್ರಕಾರ, ಶುಕ್ರವಾರ ಬೆಳಗ್ಗೆ 6.39ಕ್ಕೆ (IST) 50 ಕಿಲೋಮೀಟರ್ ಭೂಮಿಯ ಆಳದಲ್ಲಿ ಭೂಮಿ ಕಂಪಿಸಿದೆ. "ಭೂಕಂಪನ ತೀವ್ರತೆ: 4.6, 13-10-2023, 06:39:30 ಭಾರತೀಯ ಕಾಲಮಾನ, ಅಕ್ಷಾಂಶ: 35.86 ಮತ್ತು ರೇಖಾಂಶ: 68.64, ಆಳ: 50 ಕಿಮೀ, ಸ್ಥಳ: ಅಫ್ಘಾನಿಸ್ತಾನ್," ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಎನ್‌ಸಿಎಸ್ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಭೂಕಂಪದಲ್ಲಿ ಈವರೆಗೆ ಯಾವುದೇ ಸಾವು, ನೋವುಗಳ ವರದಿಯಾಗಿಲ್ಲ.
ಅಕ್ಟೋಬರ್ 11 ರಂದು ಅಫ್ಘಾನಿಸ್ತಾನದಲ್ಲಿ 6.1ರ ತೀವ್ರತೆಯ ಭೂಕಂಪ ಸಂಭವಿತ್ತು ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರವು ಮಾಹಿತಿ ನೀಡಿದೆ. ಭೂಕಂಪವು ಬೆಳಗ್ಗೆ 6.11ಕ್ಕೆ (IST) 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಎನ್‌ಸಿಎಸ್ ತಿಳಿಸಿದೆ.
"ಭೂಕಂಪನ ತೀವ್ರತೆ: 6.1, 11-10-2023 ರಂದು ಸಂಭವಿಸಿದೆ. 06:11:56 ಭಾರತೀಯ ಕಾಲಮಾನ, ಅಕ್ಷಾಂಶ: 34.71 ಮತ್ತು ರೇಖಾಂಶ: 62.13, ಆಳ: 10 ಕಿಮೀ, ಸ್ಥಳ: ಅಫ್ಘಾನಿಸ್ತಾನ್" ಎಂದು ಎನ್‌ಸಿಎಸ್ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ''ಹೆರಾತ್ ಪ್ರಾಂತ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪವು 4,000 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಸಾವಿರಾರು ವಸತಿ ಕಟ್ಟಡಗಳನ್ನು ನಾಶವಾಗಿವೆ ಎಂದು ತಾಲಿಬಾನ್ ನೇತೃತ್ವದ ಸಚಿವಾಲಯವನ್ನು ಉಲ್ಲೇಖಿಸಿ ಖಾಮಾ ಪ್ರೆಸ್ ವರದಿ ಮಾಡಿದೆ.
ವಿಶ್ವಸಂಸ್ಥೆಯ ಅಂಕಿ - ಅಂಶಗಳ ಪ್ರಕಾರ, 1,294 ಮಂದಿ ಸಾವು:ಹೆರಾತ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಕಳೆದ ಶನಿವಾರ 6.3 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಭೂಕಂಪದಲ್ಲಿ ಸಾವನ್ನಪ್ಪಿದ ಮೃತರಲ್ಲಿ ಶೇ. 90ಕ್ಕಿಂತ ಹೆಚ್ಚು ಮಕ್ಕಳು ಹಾಗೂ ಮಹಿಳೆಯರೇ ಆಗಿದ್ದಾರೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದರು.
ಹೆರಾತ್ ಪ್ರಾಂತ್ಯದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ 2,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಅಧಿಕಾರಿಗಳು ಹೇಳಿದ್ದರು. ವಿಶ್ವಸಂಸ್ಥೆಯ ಅಂಕಿ - ಅಂಶಗಳ ಪ್ರಕಾರ, 1,294 ಮಂದಿ ಸಾವನ್ನಪ್ಪಿದ್ದು, 1,688 ಜನರು ಗಾಯಗೊಂಡಿದ್ದಾರೆ. ಅಲ್ಲಿನ ಪ್ರತಿ ಒಂದು ಮನೆಯೂ ನಾಶವಾಗಿದೆ. ಇಲ್ಲಿರುವ ಝೆಂಡಾ ಜಾನ್ ಜಿಲ್ಲೆಯು ಭೂಕಂಪನದ ಕೇಂದ್ರ ಬಿಂದುವಾಗಿತ್ತು.
ಇದನ್ನೂ ಓದಿ:ಅಫ್ಘಾನಿಸ್ತಾನ ಭೂಕಂಪ: ಸಾವನ್ನಪ್ಪಿದರಲ್ಲಿ ಶೇಕಡಾ 90 ರಷ್ಟು ಮಕ್ಕಳು, ಮಹಿಳೆಯರೇ: ವಿಶ್ವಸಂಸ್ಥೆ