ಪೋರ್ಟ್ ಮೊರೆಸ್ಬಿ (ಪಾಪುವಾ ನ್ಯೂಗಿನಿ): ಪಪುವಾ ನ್ಯೂಗಿನಿ ದೇಶದ ರಾಜಧಾನಿ ಪೋರ್ಟ್ ಮೊರೆಸ್ಬಿಯಲ್ಲಿ ರಿಕ್ಟರ್ ಮಾಪಕದಲ್ಲಿ 7.2 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಪೋರ್ಟ್ ಮೊರೆಸ್ಬಿ ಎಂಬ ನಗರವು ಓಷಿಯಾನಿಯಾದ ಪಪುವಾ ನ್ಯೂಗಿನಿ ರಾಜಧಾನಿ. ರಾಜಧಾನಿಯಲ್ಲಿ ನಿನ್ನೆ, ಭಾರತೀಯ ಕಾಲಮಾನ ಮಧ್ಯರಾತ್ರಿ 11:34ಕ್ಕೆ 80 ಕಿಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ.
ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೇ (USGS) ಹೇಳಿಕೆಯ ಪ್ರಕಾರ, ಕಳೆದ ತಿಂಗಳ ಆರಂಭದಲ್ಲಿ, ನ್ಯೂಜಿಲೆಂಡ್‌ನ ಉತ್ತರದಲ್ಲಿರುವ ಕೆರ್ಮಾಡೆಕ್ ದ್ವೀಪಗಳ ಪ್ರದೇಶದಲ್ಲಿ 7 ಮತ್ತು 5 ರ ತೀವ್ರತೆಯ ಎರಡು ಭೂಕಂಪಗಳು ಜರುಗಿದ್ದವು. M7ನ (Major) ಮೊದಲ ಭೂಕಂಪ ಉಂಟಾಗಿದ್ದರೆ ಮತ್ತೆ ಐವತ್ತು ನಿಮಿಷಗಳ ನಂತರ ನ್ಯೂಜಿಲೆಂಡ್‌ನ ಜನವಸತಿಯಿಲ್ಲದ ದ್ವೀಪಗಳಲ್ಲಿ 5 ತೀವ್ರತೆಯಲ್ಲಿ ಮತ್ತೊಂದು ಭೂಕಂಪ ಉಂಟಾಗಿತ್ತು. ಇದನ್ನು USGS ಕೂಡ ದಾಖಲಿಸಿದೆ.