ಟೆಹ್ರಾನ್ (ಇರಾನ್): ವಾಯುವ್ಯ ಇರಾನ್‌ನ ಖೋಯ್ ನಗರದಲ್ಲಿ ಭೂಕಂಪನ ಸಂಭವಿಸಿದ್ದು, ಇದುವರೆಗೆ ಏಳು ಮಂದಿ ಸಾವನ್ನಪ್ಪಿದ್ದಾರೆ. 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ಮಾಧ್ಯಮಗಳು ವರದಿ ಮಾಡಿವೆ. ಖೋಯ್ ನಗರದಲ್ಲಿ ಶನಿವಾರ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.9 ದಾಖಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ.
ಇರಾನ್ನಲ್ಲಿ 5.9 ತೀವ್ರತೆಯ ಭೂಕಂಪನ: 7 ಸಾವು, 400ಕ್ಕೂ ಹೆಚ್ಚು ಮಂದಿಗೆ ಗಾಯ - ಅಜೆರ್‌ಬೈಜಾನ್‌ನ ಪ್ರಾಂತೀಯ ರಾಜಧಾನಿಯಾದ ತಬ್ರಿಜ್
ಇರಾನ್‌ನ ಖೋಯ್ ನಗರದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದೆ.
ಭೂಕಂಪನ
ಶನಿವಾರ ರಾತ್ರಿ 11:44 ರ ಸುಮಾರಿಗೆ ಘಟನೆ ನಡೆದಿದೆ. ಭೂಕಂಪನ ಕೇಂದ್ರಬಿಂದು ಸುಮಾರು 10 ಕಿ.ಮೀ ಆಳದಲ್ಲಿತ್ತು. ಒಟ್ಟು 14 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿ ನಡುಗಿದ ಅನುಭವವಾಗಿದೆ ಎಂದು ತಿಳಿದುಬಂದಿದೆ. ಇರಾನ್‌ನ ಸುದ್ದಿ ಸಂಸ್ಥೆ, IRNA ಪ್ರಕಾರ, ಭೂಕಂಪನದ ನಡುಕ ಪ್ರಬಲವಾಗಿತ್ತು. ಇರಾನ್‌ನ ಪಶ್ಚಿಮ ಭಾಗದ ಅಜೆರ್ಬೈಜಾನ್ ಪ್ರಾಂತ್ಯದ ಹಲವು ಪ್ರದೇಶಗಳಲ್ಲಿ ಕಂಪನವಾಗಿದೆ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ:ಜೆರುಸಲೇಂನಲ್ಲಿ ಭೀಕರ ಗುಂಡಿನ ದಾಳಿ.. 8 ಜನರ ನೆತ್ತರು ಹರಿಸಿದ ಭಯೋತ್ಪಾದಕ