ಕರ್ನಾಟಕ

karnataka

ETV Bharat / international

5.8 ತೀವ್ರತೆಯ ಭೂಕಂಪ: ಬೆಚ್ಚಿಬಿದ್ದ ಇಂಡೋನೇಷ್ಯಾ ಜನ - ಮಾಂಡೌಸ್ ಚಂಡಮಾರುತ

ಇಂಡೋನೇಷ್ಯಾದಲ್ಲಿ ಭೂಕಂಪನ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಮತ್ತು ಗಾಸಿ ಆಗಿಲ್ಲ ಎಂದು ವರದಿಯಾಗಿದೆ.

Etv Bharat
5.8 ತೀವ್ರತೆಯ ಭೂಕಂಪನ

By

Published : Dec 8, 2022, 8:44 AM IST

ಜಕಾರ್ತ:ಇಂಡೋನೇಷ್ಯಾದ ರಾಜಧಾನಿ ಮತ್ತು ಮುಖ್ಯ ದ್ವೀಪ ಜಾವಾದ ಇತರ ಭಾಗಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಆದರೆ ಯಾವುದೇ ಸಾವು ನೋವುಗಳ ಬಗ್ಗೆ ವರದಿಗಳಾಗಿಲ್ಲ.

ಪಶ್ಚಿಮ ಜಾವಾ ಪ್ರಾಂತ್ಯದ ಸಿರಂಜಾಂಗ್ ಹಿಲ್​ ವಾಯುವ್ಯಕ್ಕೆ 14 ಕಿಮೀ ದೂರದಲ್ಲಿ 123.7 ಕಿಲೋಮೀಟರ್ ಆಳದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ನವೆಂಬರ್ 21 ರಂದು ಸಿಯಾಂಜೂರ್ ನಗರದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿ ಸುಮಾರು 334 ಜನರು ಮೃತಪಟ್ಟಿದ್ದರು ಮತ್ತು 600 ಜನ ಗಾಯಗೊಂಡಿದ್ದರು.

2018ರಲ್ಲಿ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಿಂದ ಸುಲಾವೆಸಿಯಲ್ಲಿ ಸುಮಾರು 4,340 ಜನ ಸಾವನ್ನಪ್ಪಿದ್ದರು. ಇದು ಇಂಡೋನೇಷ್ಯಾದ ಮಹಾ ದುರಂತಗಳಲ್ಲಿ ಒಂದಾಗಿದೆ.

ಇದನ್ನೂ ಓದಿ:ಮಾಂಡೌಸ್ ಚಂಡಮಾರುತ: ತಮಿಳುನಾಡಿನಲ್ಲಿ ಭಾರಿ ಮಳೆ ಸಾಧ್ಯತೆ.. ಎನ್‌ಡಿಆರ್‌ಎಫ್ ಸನ್ನದ್ಧ

ABOUT THE AUTHOR

...view details