ಕರ್ನಾಟಕ

karnataka

ETV Bharat / international

ಭಾರತ - ಕೆನಡಾ ವಿವಾದದ ಕುರಿತು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದೇನು? - India Canada row

ಭಾರತ ಮತ್ತು ಕೆನಡಾ ನಡುವೆ ಉಂಟಾಗಿರುವ ಉದ್ವಿಗ್ನತೆಗೆ ಸಂಬಂಧಿಸಿದಂತೆ ಉಭಯ ಸರ್ಕಾರಗಳು ಪರಸ್ಪರ ಮಾತನಾಡಬೇಕು ಎಂದು ವಿದೇಶಾಂಗ ಸಚಿವ ಜೈಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

jaishankar
ವಿದೇಶಾಂಗ ಸಚಿವ ಜೈಶಂಕರ್

By PTI

Published : Sep 30, 2023, 7:35 AM IST

ವಾಷಿಂಗ್ಟನ್ (ಅಮೆರಿಕ) : ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ ನಿಜ್ಜರ್ ಹತ್ಯೆ ಬಳಿಕ ಭಾರತ ಮತ್ತು ಕೆನಡಾ ನಡುವೆ ಉದ್ವಿಗ್ನತೆ ಮುಂದುವರೆದಿದೆ. ಈ ಸಂದರ್ಭದಲ್ಲಿ ಕೆನಡಾ ಜತೆಗಿನ ವಿವಾದ ಮತ್ತು ರಾಜತಾಂತ್ರಿಕ ಸಂಬಂಧಗಳ ಬಗ್ಗೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಮುಕ್ತವಾಗಿ ಮಾತನಾಡಿದ್ದಾರೆ.

ವಾಷಿಂಗ್ಟನ್ ಡಿಸಿಯಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಮತ್ತು ಕೆನಡಾ ಸರ್ಕಾರಗಳು ಪರಸ್ಪರ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಬೇಕು. ಖಲಿಸ್ತಾನಿ ಪ್ರತ್ಯೇಕತಾವಾದಿ ಸಾವಿನ ಕುರಿತು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲು ಅನುಮತಿ ನೀಡಬೇಕು. ಕೆನಡಾದ ಆರೋಪಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಲು ಭಾರತ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೆನಡಾದೊಂದಿಗಿನ ಪ್ರಸ್ತುತ ಉದ್ವಿಗ್ನತೆಯನ್ನು ಸ್ಟ್ಯಾಂಡ್‌ಆಫ್ ಎಂದು ಕರೆಯಲಾಗುವುದಿಲ್ಲ. ಅಲ್ಲಿ ವಿಜೃಂಭಿಸುತ್ತಿರುವ ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸಾಚಾರದ ಬಗ್ಗೆ ಕೆನಡಾ ಸರ್ಕಾರದ ಸಹನೆಯೇ ಕಾರಣ. ಈ ಬಾರಿ ಕೆನಡಾ ಇಂತಹ ಆರೋಪ ಮಾಡಿರುವುದರಿಂದ ನಾನು ಡೆಡ್‌ಲಾಕ್ ಎಂದು ಕರೆಯಬೇಕೇ ಅಥವಾ ಬೇಡವೇ ಎಂದು ನನಗೆ ತಿಳಿದಿಲ್ಲ. ಇದು ಭಾರತ ಸರ್ಕಾರದ ನೀತಿ ಅಲ್ಲ ಎಂದು ನಾವು ಅವರಿಗೆ ಹೇಳಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರವು ನಮ್ಮೊಂದಿಗೆ ಮಾಹಿತಿಯನ್ನು ಹಂಚಿಕೊಂಡರೆ ಅದನ್ನು ಪರಿಗಣಿಸಲು ಸಿದ್ಧರಿದ್ದೇವೆ. ಕೆನಡಾದಲ್ಲಿ ನಡೆಯುತ್ತಿರುವ ಸಮಸ್ಯೆಗೆ ಕೆನಡಾ ಸರ್ಕಾರದ ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸಾಚಾರದ ಸಹಿಷ್ಣುತೆಯೇ ಕಾರಣ ಎಂದರು.

ಇದನ್ನೂ ಓದಿ :ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯಿಂದ ವಿವಿಧ ರಾಜ್ಯಗಳಲ್ಲಿ ಶಾರ್ಪ್ ಶೂಟರ್‌ಗಳ ನೇಮಕ : ಎನ್‌ಐಎ

ಕೆನಡಾದ ಪ್ರಸ್ತುತ ಪರಿಸ್ಥಿತಿಯನ್ನು ಸಾಮಾನ್ಯ ಎಂದು ಕರೆಯಲಾಗುವುದಿಲ್ಲ. ಅಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಗಮನ ಹರಿಸುವುದು ಮುಖ್ಯ. ಕಾನ್ಸುಲೇಟ್ ಎದುರು ಹಿಂಸಾಚಾರ ನಡೆಯುತ್ತಿದೆ. ನಮ್ಮ ಜನರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ನಡೆಸಲಾಗುತ್ತಿದೆ. ಜೊತೆಗೆ ನಮ್ಮ ರಾಜತಾಂತ್ರಿಕರನ್ನು ಬೆದರಿಸಲಾಗುತ್ತಿದೆ. ಇದು ಸ್ವೀಕಾರಾರ್ಹ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ :'ರಾಜಕೀಯಕ್ಕಾಗಿ ಭಯೋತ್ಪಾದನೆಗೆ ಅವಕಾಶ ನೀಡಬೇಡಿ' : ಕೆನಡಾಕ್ಕೆ ಪರೋಕ್ಷವಾಗಿ ತಿವಿದ ಜೈಶಂಕರ್

ಏನಿದು ವಿವಾದ :ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದಲ್ಲಿ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ಬಿಕ್ಕಟ್ಟು ಉದ್ಭವಿಸಿದೆ. ನಿಜ್ಜರ್​ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದಾರೆ. ಆದರೆ, ಕೆನಡಾದ ಆರೋಪಗಳನ್ನು ಭಾರತ ಅಸಂಬದ್ಧ ಹಾಗೂ ಪ್ರೇರಿತ ಎಂದು ತಿರಸ್ಕರಿಸಿದೆ. ಇನ್ನೊಂದೆಡೆ, ಉಭಯ ದೇಶಗಳ ನಡುವೆ ಹಿಂದಿನಿಂದಲೂ ಕಾದಾಟ ನಡೆಯುತ್ತಿದ್ದು, ಈಗಿನ ಉದ್ವಿಗ್ನತೆ ಭಯೋತ್ಪಾದನೆ ಉಗ್ರವಾದಕ್ಕೆ ಸಂಬಂಧಿಸಿದೆ.

ಇದನ್ನೂ ಓದಿ :ಭಾರತ - ಕೆನಡಾ ಬಿಕ್ಕಟ್ಟಿನ ನಡುವೆ ಜಾಗತಿಕ ಬೆಳವಣಿಗೆ ಬಗ್ಗೆ ಚರ್ಚಿಸಿದ ಜೈಶಂಕರ್, ಬ್ಲಿಂಕೆನ್

ABOUT THE AUTHOR

...view details