ಕರ್ನಾಟಕ

karnataka

ETV Bharat / international

ಗಾಜಾದ ಆಸ್ಪತ್ರೆ ಜನರೇಟರ್​ಗಳಿಗೆ ಇಂಧನ ಕೊರತೆ; ಇನ್ಕ್ಯುಬೇಟರ್​ನಲ್ಲಿ ಅಪಾಯಕ್ಕೆ ಸಿಲುಕಿಕೊಂಡಿರುವ ನವಜಾತ ಶಿಶುಗಳು - ಈಟಿವಿ ಭಾರತ ಕನ್ನಡ

ಗಾಜಾದ ಆಸ್ಪತ್ರೆಗಳ ಜನರೇಟರ್​ಗಳಲ್ಲಿ ಇಂಧನ ಖಾಲಿಯಾಗುತ್ತಿರುವುದರಿಂದ ಇನ್ಕ್ಯುಬೇಟರ್​ನಲ್ಲಿರುವ ನವಜಾತ ಶಿಶುಗಳು ಅಪಾಯವನ್ನು ಎದುರಿಸುತ್ತಿದೆ.

dwindling-fuel-supplies-for-gazas-hospital-generators-put-premature-babies-in-incubators-at-risk
ಗಾಜಾದ ಆಸ್ಪತ್ರೆ ಜನರೇಟರ್​ಗಳಿಗೆ ಇಂಧನದ ಕೊರತೆ; ಇನ್ಕ್ಯುಬೇಟರ್​ನಲ್ಲಿ ಅಪಾಯ ಎದುರಿಸುತ್ತಿರುವ ನವಜಾತ ಶಿಶುಗಳು

By PTI

Published : Oct 23, 2023, 7:40 AM IST

ದೇರ್ ಅಲ್ ಬಲಾಹ್ (ಗಾಜಾ ಪಟ್ಟಿ​):ಗಾಜಾ ಪಟ್ಟಿಯಲ್ಲಿರುವ ಅಲ್​-ಅಕ್ಸಾ ಆಸ್ಪತ್ರೆ ಜನರೇಟ್​ಗಳಿಗೆ ಇಂಧನ ಪೂರೈಕೆ ಕಡಿಮೆಯಾಗುತ್ತಿರುವುದರಿಂದ ನವಜಾತ ಶಿಶುಗಳ ವಾರ್ಡ್​ನಲ್ಲಿ ನವಜಾತ ಶಿಶುಗಳು ಗಾಜಿನ ಇನ್ಕ್ಯುಬೇಟರ್​ನಲ್ಲಿ ಅಪಾಯ ಎದುರಿಸುತ್ತಿದೆ. ಒಂದು ವೆಂಟಿಲೇಟರ್​ ಮಗುವಿಗೆ ಉಸಿರಾಡಲು ಸಹಾಯ ಮಾಡುತ್ತಿದೆ. ಆಸ್ಪತ್ರೆಯು ಜನರೇಟ್​ಗಳಿಗೆ ಹೆಚ್ಚಿನ ಇಂಧನ ಪೂರೈಕೆ ಸಾಧ್ಯವಾಗಿಸದ ಕಾರಣ, ಈಗಿರುವ ಇಂಧನ ಖಾಲಿಯಾಗುವ ಅಪಾಯ ಎದುರಿಸುತ್ತಿದೆ.

ಒಮ್ಮೆ ಜನರೇಟರ್​ಗಳು ಸ್ಥಗಿತಗೊಂಡಲ್ಲಿ, ವಾರ್ಡ್​ನಲ್ಲಿರುವ ಶಿಶುಗಳು ಉಸಿರಾಡಲು ಸಾಧ್ಯವಾಗದೇ ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ಆಸ್ಪತ್ರೆಯ ನಿರ್ದೇಶಕ ಇಯಾದ್​ ಅಬು ಜಹರ್​ ಭಯಪಡುತ್ತಿದ್ದಾರೆ. ನಮ್ಮ ಮೇಲೆ ಅತಿ ದೊಡ್ಡ ಜವಾಬ್ದಾರಿ ಇದೆ ಎಂದು ಅವರು ಹೇಳಿದ್ದಾರೆ. ಗಾಜಾ ಪಟ್ಟಿಯಲ್ಲಿ ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡುತ್ತಿರುವ ಎಲ್ಲ ವೈದ್ಯರು ಇದೇ ಭಯವನ್ನು ಎದುರಿಸುತ್ತಿದ್ದಾರೆ. ಆರು ನವಜಾತ ಶಿಶು ಘಟಕಗಳಲ್ಲಿ ಕನಿಷ್ಠ 130 ನವಜಾತ ಶಿಶುಗಳು ಗಂಭೀರ ಅಪಾಯದಲ್ಲಿವೆ ಎಂದು ಸಹಾಯಕ ಕೆಲಸಗಾರರು ಹೇಳಿದ್ದಾರೆ.

ಅಕ್ಟೋಬರ್​ 7ರಂದು ಹಮಾಸ್​ ಉಗ್ರಗಾಮಿಗಳು ಇಸ್ರೇಲಿ ಪಟ್ಟಣದ ಮೇಲೆ ದಾಳಿ ಮಾಡಿತು. ಇದು ಗಾಜಾದ ಮೇಲೆ ಹೆಚ್ಚಿನ ಪರಿಣಾಮ ಬೀರಿದ್ದರಿಂದ ಅಪಾಯಕಾರಿ ಇಂಧನ ಕೊರತೆ ಉಂಟಾಗಿದೆ. ಗಾಜಾದಲ್ಲಿ ಕನಿಷ್ಠ 50,000 ಗರ್ಭಿಣಿಯರು ಅಗತ್ಯ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಸುಮಾರು 5,500 ಮಂದಿ ಮಹಿಳೆಯರು ಮುಂದಿನ ತಿಂಗಳು ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ನಿರಂತರವಾಗಿ ಇಸ್ರೇಲಿನಲ್ಲಿ ನಡೆಯುತ್ತಿರುವ ಮುಷ್ಕರಗಳಿಂದ ಉಂಟಾಗುತ್ತಿರುವ ಹಾನಿ, ವಿದ್ಯುತ್​, ನೀರು, ಇತರ ಸರಬರಾಜುಗಳ ಕೊರತೆಯಿಂದಾಗಿ ಸುಮಾರು 30 ಆಸ್ಪತ್ರೆಗಳಲ್ಲಿ ಕನಿಷ್ಠ 7 ಆಸ್ಪತ್ರೆಗಳನ್ನು ಮುಚ್ಚಲು ಒತ್ತಾಯಿಸಲಾಗಿದೆ. ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆ ಏಜೆನ್ಸಿಯು ನಿರ್ಣಾಯಕ ಅಗತ್ಯಗಳನ್ನು ಪೂರೈಸಲು ಮೂರು ದಿನಗಳವರೆಗೆ ಸಾಕಾಗುವಷ್ಟು ಇಂಧನವನ್ನು ಹೊಂದಿದೆ ಎಂದು ಭಾನುವಾರ ಹೇಳಿದೆ. ಗಾಜಾದೊಳಗಿನ ಸೀಮಿತ ಇಂಧನ ಪೂರೈಕೆಗಳನ್ನು ಆಸ್ಪತ್ರೆ ಜನರೇಟರ್‌ಗಳಿಗೆ ಕಳುಹಿಸಲಾಗುತ್ತಿದೆ.

ಇದನ್ನೂ ಓದಿ:ಲಂಡನ್​ನಿಂದಲೇ ಹಮಾಸ್​ ಮುನ್ನಡೆಸುತ್ತಿದ್ದಾನೆ 'ಮಾಸ್ಟರ್​ಮೈಂಡ್​' ಸವಾಲ್ಹಾ!

ಗಡಿಯ ಗಾಜಾ ಭಾಗದಲ್ಲಿರುವ ವಿಶ್ವಸಂಸ್ಥೆ ಡಿಪೋದಿಂದ ಏಳು ಟ್ಯಾಂಕರ್‌ಗಳು ಇಂಧನವನ್ನು ತೆಗೆದುಕೊಂಡಿವೆ. ಆದರೆ, ಅದರಲ್ಲಿ ಯಾವುದಾದರೂ ಆಸ್ಪತ್ರೆಗಳಿಗೆ ಪೂರೈಕೆಯಾಗಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಹಾಗಂತ, ಹೆಚ್ಚಿನದ್ದನ್ನು ಪೂರೈಸಲು ಅವಕಾಶ ಇರದೇ ಹೋದಲ್ಲಿ ಈಗಿರುವ ಇಂಧನ ಖಾಲಿ ಆಗಲಿದೆ.

WHO ವಕ್ತಾರರಾದ ತಾರಿಕ್ ಜಸರೆವಿಕ್ ಅವರು, ಗಾಜಾದ ಐದು ಮುಖ್ಯ ಆಸ್ಪತ್ರೆಗಳಲ್ಲಿ ಮೂಲ ಸೇವೆಗಳನ್ನು ನೀಡಲು 1,50,000 ಲೀಟರ್ ಇಂಧನದ ಅಗತ್ಯವಿದೆ. ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಮುಂಬರುವ ಕೆಲವೇ ಗಂಟೆಗಳಲ್ಲಿ ಜನರೇಟರ್ ಸ್ಥಗಿತಗೊಂಡರೆ, ತೀವ್ರ ನಿಗಾ ಘಟಕದಲ್ಲಿರುವ ಇನ್‌ಕ್ಯುಬೇಟರ್‌ಗಳು ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿರುತ್ತವೆ ಎಂದು ಹೇಳಿದ್ದಾರೆ.

ವೈದ್ಯಕೀಯ ಸಂಯೋಜಕ ಗಿಲ್ಲೆಮೆಟ್ ಥಾಮಸ್ ಪ್ರಕಾರ, ಜನರೇಟರ್​ ಸ್ಥಗಿತಗೊಂಡಲ್ಲಿ ಕೆಲವು ಶಿಶುಗಳು ಕೆಲವೇ ಗಂಟೆಗಳಲ್ಲಿ ಸಾಯಬಹುದು. ಇನ್ನು ಕೆಲವು ಶಿಶುಗಳು ಕೆಲವು ದಿನಗಳ ನಂತರ ಅಗತ್ಯ ಚಿಕಿತ್ಸೆ, ಔಷಧಗಳು ಸಿಗದೇ ಸಾಯಬಹುದು. ಒಟ್ಟಿನಲ್ಲಿ ಶಿಶುಗಳು ಮಾತ್ರ ಅಪಾಯದಲ್ಲಿದೆ ಎಂದು ಅವರು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದರು.

ಈ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ನಿರ್ದೇಶಕ ಅಹ್ಮದ್ ಮುಹನ್ನಾ, ಅಲ್​-ಅಕ್ಸಾ ಆಸ್ಪತ್ರೆಯಲ್ಲಿ ಪ್ರತಿದಿನ 50 ಮಕ್ಕಳು ಜನಿಸುತ್ತವೆ. ನಾವು ತುರ್ತು ಔಷಧಗಳು, ಇತರ ವೈದ್ಯಕೀಯ ಸರಬರಾಜುಗಳಲ್ಲಿ ದೊಡ್ಡ ಕೊರತೆಯನ್ನು ಎದುರಿಸುತ್ತಿದ್ದೇವೆ. ಅಲ್​-ಅಕ್ಸಾದಲ್ಲಿ ನಾಲ್ಕು ದಿನಕ್ಕೆ ಸಾಕಾಗುವಷ್ಟು ಇಂಧನವಿದೆ. ಸ್ಪತ್ರೆಗಳಿಗೆ ಇಂಧನ ಪೂರೈಸುವಂತೆ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ, ವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಮಾಡಿದ್ದೇವೆ, ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ತೋಡಿಕೊಂಡರು.

ಇದನ್ನೂ ಓದಿ:ಫ್ರಾನ್ಸ್, ಸ್ಪೇನ್ ಮತ್ತು ನೆದರ್ಲ್ಯಾಂಡ್ಸ್ ನಾಯಕರಿಗೆ ಹಮಾಸ್ ದಾಳಿ ಬಗ್ಗೆ ಮಾಹಿತಿ ನೀಡಿದ ಇಸ್ರೇಲ್ ಪಿಎಂ

ABOUT THE AUTHOR

...view details