ನ್ಯೂಯಾರ್ಕ್, ಅಮೆರಿಕ:ಇತ್ತಿಚೇಗೆ ಅಷ್ಟೇ ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದ ಮಾಜಿ ಅಮೆರಿಕ ಅಧ್ಯಕ್ಷರಿಗೆ ಮತ್ತೊಂದು ತಲೆ ಬಿಸಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಅವರು ಸಲ್ಲಿಸಿರುವ ವಂಚನೆ ಮೊಕದ್ದಮೆ ಅವರ ಮೇಲಿದ್ರೂ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂಬ ಆರೋಪ ಅವರ ಮೇಲಿದ್ದು, ಈ ಸಂಬಂಧ ನ್ಯಾಯಾಲಯದಲ್ಲಿ ಅವರನ್ನು ಪ್ರಶ್ನಿಸಲಿದ್ದಾರೆ. ವಂಚನೆ ಪ್ರಕರಣದ ಹಿನ್ನೆಲೆ ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ನ್ಯೂಯಾರ್ಕ್‌ಗೆ ಮರಳಿದ್ದಾರೆ.
ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಅವರು ಡೊನಾಲ್ಡ್ ಟ್ರಂಪ್ ಮತ್ತು ಅವರ ಮೂವರು ಮಕ್ಕಳ ವಿರುದ್ಧ ಮೊಕದ್ದಮೆ ಹೂಡಿದ್ದರು. ಅವರನ್ನು ದಿಗ್ಭ್ರಮೆಗೊಳಿಸುವ ವಂಚಕರು ಎಂದು ಕರೆದಿದ್ದಾರೆ. ಇದಲ್ಲದೇ ಮಾಜಿ ಅಧ್ಯಕ್ಷರ ವಿರುದ್ಧ ಪ್ರತ್ಯೇಕ 34 ಕ್ರಿಮಿನಲ್ ಆರೋಪಗಳನ್ನು ಕಳೆದ ವಾರ ಬಹಿರಂಗಪಡಿಸಿದ್ದರು.
ಟ್ರಂಪ್, ಅವರ ಕುಟುಂಬದ ವ್ಯವಹಾರ ಮತ್ತು ಅವರ ಮೂವರು ಮಕ್ಕಳ ಮೇಲೆ ಸಿವಿಲ್ ಆಕ್ಷನ್‌ನಲ್ಲಿ ಜೇಮ್ಸ್ ವಂಚನೆಯ ದೂರನ್ನು ಸಲ್ಲಿಸಿದ್ದಾರೆ. ಈ ಪ್ರಕರಣವನ್ನು ಸೆಪ್ಟೆಂಬರ್‌ನಲ್ಲಿ ಸಲ್ಲಿಸಲಾಗಿತ್ತು. ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ತಮ್ಮ ಆಸ್ತಿಯನ್ನು ಶತಕೋಟಿ ಡಾಲರ್‌ಗಿಂತಲೂ ಅಧಿಕ ಮೌಲ್ಯೀಕರಿಸಿದ್ದಾರೆ ಎಂದು ಜೇಮ್ಸ್ ಆರೋಪಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಗುರುವಾರ ಟ್ರಂಪ್ ಅವರ ವಕೀಲರಲ್ಲಿ ಒಬ್ಬರಾದ ಅಲೀನಾ ಹಬ್ಬಾಗೆ ಪ್ರಶ್ನೆಗಳಿಗೆ ಉತ್ತರಿಸುವಂತೆ ನ್ಯಾಯಾಲಯ ಬಲವಾಗಿ ಸೂಚಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಕೀಲ, ಅಧ್ಯಕ್ಷ ಟ್ರಂಪ್ ಅವರು ಅಟಾರ್ನಿ ಜನರಲ್ ಮುಂದೆ ಸಾಕ್ಷಿ ಹೇಳಲು ಸಿದ್ಧರಿದ್ದಾರೆ. ನನ್ನಲ್ಲಿ ಮುಚ್ಚಿಡಲು ಏನೂ ಇಲ್ಲ ಎಂದು ಅವರು ದೃಢಪಡಿಸಿದ್ದಾರೆ. ಅವರು ತಮ್ಮ ಬಹುಕೋಟಿ ಡಾಲರ್ ಕಂಪನಿಯ ಅಪಾರ ಯಶಸ್ಸಿನ ಬಗ್ಗೆ ಅಟಾರ್ನಿ ಜನರಲ್ಗೆ ಶಿಕ್ಷಣ ನೀಡಲು ಎದುರು ನೋಡುತ್ತಿದ್ದಾರೆ ಎಂದು ವಕೀಲ ಅಲೀನಾ ಹಬ್ಬಾ ಮಾಧ್ಯಮಕ್ಕೆ ತಿಳಿಸಿದರು.