ಕರ್ನಾಟಕ

karnataka

By

Published : Jun 14, 2023, 7:14 AM IST

ETV Bharat / international

Donald Trump: ಗೌಪ್ಯ ದಾಖಲೆ ಕದ್ದ ಕೇಸಲ್ಲಿ 2ನೇ ಸಲ ಡೊನಾಲ್ಡ್​ ಟ್ರಂಪ್​ ಬಂಧನ, ಬಿಡುಗಡೆ?

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರನ್ನು 2 ನೇ ಬಾರಿಗೆ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ರಹಸ್ಯ ದಾಖಲೆ ಹೊತ್ತೊಯ್ದ ಕೇಸ್​ನಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಡೊನಾಲ್ಡ್​ ಟ್ರಂಪ್​ ಬಂಧನ
ಡೊನಾಲ್ಡ್​ ಟ್ರಂಪ್​ ಬಂಧನ

ನ್ಯೂಯಾರ್ಕ್​:ದೇಶದ ರಹಸ್ಯ ದಾಖಲೆಗಳನ್ನು ಕದ್ದೊಯ್ದ ಆರೋಪ ಎದುರಿಸುತ್ತಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ರನ್ನು ಪೊಲೀಸರು ಮತ್ತೊಮ್ಮೆ ಬಂಧಿಸಿದ್ದಾರೆ. ನಿನ್ನೆ ಸುಪ್ರೀಂಕೋರ್ಟ್​ ಮುಂದೆ ವಿಚಾರಣೆಗೆ ಬಂದಿದ್ದಾಗ ಪೊಲೀಸರು ಕಾನೂನು ಪ್ರಕಾರ ಬಂಧನಕ್ಕೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ, ಪ್ರಕರಣದಲ್ಲಿ ತಮ್ಮದೇನೂ ತಪ್ಪಿಲ್ಲ ಎಂದು ಟ್ರಂಪ್​ ವಾದಿಸಿದ್ದಾರೆ.

ಮಿಯಾಮಿಯ ಫೆಡರಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ಜೊನಾಥನ್ ಗುಡ್‌ಮ್ಯಾನ್ ಅವರ ಮುಂದೆ ವಿಚಾರಣೆ ಎದುರಿಸಿದ ಟ್ರಂಪ್, ತಮ್ಮ ವಿರುದ್ಧ ಕೇಳಿಬಂದ ಕ್ರಿಮಿನಲ್ ಆರೋಪಗಳ ತಪ್ಪೊಪ್ಪಿಕೊಂಡಿಲ್ಲ. ಈ ಪ್ರಕರಣದಲ್ಲಿ ತಮ್ಮನ್ನು ವಿನಾಕಾರಣ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಕೋರ್ಟ್​ ಅವರನ್ನು ಬಂಧನದಿಂದ ಬಿಡುಗಡೆ ಮಾಡಿದ್ದಾರೆ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ:ಮಾರ್ ಎ ಲಾಗೋ ಪೇಪರ್ಸ್ ಪ್ರಕರಣ: ಟ್ರಂಪ್ ಪರ ವಕೀಲರಿಂದ ನ್ಯಾಯಾಂಗ ಇಲಾಖೆ ಅಧಿಕಾರಿಗಳ ಭೇಟಿ

ದಾಖಲೆಗಳನ್ನು ಹೊತ್ತೊಯ್ದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಾಜಿ ಅಧ್ಯಕ್ಷ ವಿಚಾರಣೆ ಎದುರಿಸುವುದಾಗಿ ಹೇಳಿ 2 ಬಾರಿ ಸುಪ್ರೀಂಕೋರ್ಟ್​ ಮುಂದೆ ವಿಚಾರಣೆಗೆ ಒಳಪಟ್ಟಿದ್ದಾರೆ. ಮಂಗಳವಾರ ಕೋರ್ಟ್​ ಎದುರು ವಿಚಾರಣೆಗೆ ಬಂದಾಗ ಅವರನ್ನು ಪೊಲೀಸರು ಬಂಧಿಸಿದರು. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಧ್ಯಕ್ಷರೊಬ್ಬರು 2 ನೇ ಸಲ ಬಂಧನಕ್ಕೆ ಒಳಗಾಗಿದ್ದಾರೆ. ಕ್ರಿಮಿನಲ್​ ಪ್ರಕರಣವನ್ನು ಎದುರಿಸುತ್ತಿರುವ ಮೊದಲ ಅಧ್ಯಕ್ಷರೂ ಎಂಬ ಅಪಖ್ಯಾತಿ ಇವರ ಮೇಲಿದೆ.

ಚುನಾವಣೆ ಸ್ಪರ್ಧೆ ಡೌಟ್​:ರಹಸ್ಯ ದಾಖಲೆಗಳ ಹೊತ್ತೊಯ್ದ ಪ್ರಕರಣದಲ್ಲಿ ಒಂದು ವೇಳೆ ಶಿಕ್ಷೆಗೆ ಒಳಗಾದರೇ ಡೊನಾಲ್ಡ್​ ಟ್ರಂಪ್​ ಅವರು ಮುಂಬರುವ ಅಧ್ಯಕ್ಷೀಯ ಚುನಾವಣೆಯನ್ನು ತಪ್ಪಿಸಿಕೊಳ್ಳಲಿದ್ದಾರೆ. ಕ್ರಿಮಿನಲ್​ ಪ್ರಕರಣ ಇದಾಗಿದ್ದು, ಆರೋಪ ಸಾಬೀತಾದರೆ ಅವರಿಗೆ ಕನಿಷ್ಠ ಅಂದರೂ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಹೀಗಾಗಿ ಅವರು ಚುನಾವಣಾ ಕಣದಿಂದ ಹೊರಬೀಳಲಿದ್ದಾರೆ ಎನ್ನಲಾಗುತ್ತಿದೆ.

ಪ್ರಸಾರ ನಿಷಿದ್ಧ:ಡೊನಾಲ್ಡ್​​ ಟ್ರಂಪ್​ ತನ್ನ ಮೇಲಿನ ಆರೋಪಗಳಿಗೆ 2ನೇ ಬಾರಿಗೆ ಮಿಯಾಮಿ ಕೋರ್ಟ್​ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಇದಕ್ಕೂ ಮೊದಲು ಅವರು ಏಪ್ರಿಲ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ಅಧ್ಯಕ್ಷರಾಗಿದ್ದಾಗ ಮಹಿಳೆಯ ಜೊತೆ ಲೈಂಗಿಕ ಸಂಬಂಧ ಹೊಂದಿ ಯಾರಿಗೂ ಹೇಳದಂತೆ ಹಣದ ಆಮಿಷ ಒಡ್ಡಿದ್ದ ಪ್ರಕರಣದಲ್ಲಿ ಅವರು ವಿಚಾರಣೆ ಎದುರಿಸಿದ್ದರು. ಇನ್ನು, ದೇಶದ ಗೌಪ್ಯ ದಾಖಲೆಗಳನ್ನು ಕದ್ದೊಯ್ದ ಪ್ರಕರಣದಲ್ಲಿ ವಿಚಾರಣೆಗೆ ಒಳಪಟ್ಟ ಟ್ರಂಪ್​ ವಿಚಾರಣೆಗೆ ಒಳಗಾದಾಗ ಅದರ ನೇರಪ್ರಸಾರವನ್ನು ಕಡಿತ ಮಾಡಲಾಗಿತ್ತು.

ಬೆಂಬಲಿಗರಿಂದ ಕೂಗು:ಡೊನಾಲ್ಡ್​ ಟ್ರಂಪ್​ ಮಿಯಾಮಿ ಕೋರ್ಟ್​ ಮುಂದೆ ವಿಚಾರಣೆಗೆ ಒಳಗಾಗುವ ಮುನ್ನ ಅವರ ಬೆಂಬಲಿಗರು ಕೋರ್ಟ್​ ಮುಂದೆ ಹಾಜರಾಗಿ ಘೋಷಣೆ ಕೂಗಿದರು. ಅವರ ವಿರೋಧಿಗಳೂ ನ್ಯಾಯಾಲಯದ ಎದುರು ಘೋಷಣೆ ಕೂಗಿದರು. ಇದಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಚರ್ಚಿತ ವಿಷಯವಾಗಿದೆ.

ಟ್ರಂಪ್​ ವಿರುದ್ಧ ಕೋರ್ಟ್​ಗೆ ಇತ್ತೀಚೆಗಷ್ಟೇ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಅವರ ವಿರುದ್ಧ ಈ ಎಲ್ಲಾ ಆರೋಪಗಳು ಸಾಬೀತಾದಲ್ಲಿ ಮಾಜಿ ಅಧ್ಯಕ್ಷ ದೊಡ್ಡ ಸಮಸ್ಯೆ ಎದುರಿಸಲಿದ್ದಾರೆ.

ಓದಿ:ಡೊನಾಲ್ಡ್​ ಟ್ರಂಪ್​ಗೆ ಸಂಕಷ್ಟ: ಗೌಪ್ಯ ದಾಖಲೆ ಕದ್ದ ಕೇಸಲ್ಲಿ ಕೋರ್ಟ್​ಗೆ ದೋಷಾರೋಪ ಪಟ್ಟಿ ಸಲ್ಲಿಕೆ

ABOUT THE AUTHOR

...view details