ಕೊಲಂಬೊ:ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ದ್ವೀಪ ದೇಶಶ್ರೀಲಂಕಾದ ನೂತನ ಪ್ರಧಾನಿಯಾಗಿ ದಿನೇಶ್ ಗುಣವರ್ಧನೆ ನೇಮಕಗೊಂಡಿದ್ದಾರೆ. ಕೊಲಂಬೊದ ಫ್ಲವರ್ ರಸ್ತೆಯಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ದೇಶದ 8ನೇ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಅಧಿಕಾರವಹಿಸಿದ ಮರುದಿನವೇ ಪ್ರಧಾನಿಯ ಆಯ್ಕೆ ನಡೆದಿದೆ.
1948ರಲ್ಲಿ ಸ್ವಾತಂತ್ರ್ಯ ಪಡೆದ ನಂತರದಲ್ಲಿ ದೇಶ ಇದೀಗ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಇಂದಿನ ದುಸ್ಥಿತಿಗೆ ಕೋವಿಡ್ ಸಾಂಕ್ರಾಮಿಕವೂ ಕಾರಣವಾಗಿದೆ. ತೈಲ ಪೂರೈಕೆಯ ಕೊರತೆಯಿಂದಾಗಿ ಮುಂದಿನ ಸೂಚನೆಯತನಕ ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳನ್ನು ಮುಚ್ಚುವಂತೆ ಈಗಾಗಲೇ ಆದೇಶಿಸಲಾಗಿದೆ. ದೇಶೀಯ ಕೃಷಿ ಉತ್ಪಾದನೆ ಕುಸಿತ, ವಿದೇಶಿ ವಿನಿಮಯ ಸಂಗ್ರಹ ಕುಸಿತ ಮತ್ತು ಸ್ಥಳೀಯ ಕರೆನ್ಸಿಯ ಕುಸಿತದಿಂದಾಗಿ ಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಬಿಗಡಾಯಿಸಿದೆ.