ವಾಷಿಂಗ್ಟನ್: ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷವು ಹೊಸ 'ಪೌರತ್ವ ಮಸೂದೆ'ಯನ್ನು ಪರಿಚಯಿಸಿದೆ. ಇದರ ಪರಿಣಾಮ ಗ್ರೀನ್ ಕಾರ್ಡ್(Green card) ವಿತರಣೆಗಾಗಿ ದೇಶಗಳಿಗೆ ನಿಗದಿಪಡಿಸಿರುವ ಕೋಟಾ ಮಿತಿ ಕೈಬಿಡಲು ಮತ್ತು ಎಚ್ 1ಬಿ ವೀಸಾ ವಿತರಣೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವ ಪ್ರಯತ್ನ ನಡೆಯುತ್ತಿದೆ.
ಯುಎಸ್ ಪೌರತ್ವ ಮಸೂದೆ 2023 ಮಂಡಿಸಿದ ಸಂಸತ್ ಸದಸ್ಯೆ ಲಿಂಡಾ ಸ್ಯಾಂಚೆಜ್ ಅವರು, "ಎಲ್ಲ 11 ಮಿಲಿಯನ್ ದಾಖಲೆರಹಿತ ವಲಸಿಗರು ಪೌರತ್ವ ಪಡೆಯಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಇದು ಒಳಗೊಂಡಿದೆ. ವಲಸಿಗರು, ಟಿಪಿಎಸ್ ಹೊಂದಿರುವವರು ಮತ್ತು ಕೆಲವು ಕೃಷಿ ಕಾರ್ಮಿಕರಿಗೆ ಪೌರತ್ವ ಪಡೆದುಕೊಳ್ಳುವ ಮಾರ್ಗವನ್ನು ಒದಗಿಸುತ್ತದೆ. ಹಾಗೆಯೇ, ಗಡಿಪಾರು ಭಯವಿಲ್ಲದೇ ತೆರಿಗೆಗಳನ್ನು ಪಾವತಿಸುವ ಮೂಲಕ ಐದು ವರ್ಷಗಳ ಕಾಲ ಪೌರತ್ವ ಪಡೆಯುವ ಹಾದಿಯನ್ನು ಇದು ನೀಡುತ್ತದೆ. ದೇಶದ ಕೆಲವು ಮಿತಿಗಳನ್ನು ತೆಗೆದುಹಾಕುವ ಮೂಲಕ ಉದ್ಯೋಗ-ಆಧಾರಿತ ವಲಸೆ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಮಸೂದೆ ಪ್ರಸ್ತಾಪಿಸುತ್ತದೆ" ಎಂದರು.
ಪೌರತ್ವ ಮಸೂದೆಯು ಯುಎಸ್ ವಿಶ್ವವಿದ್ಯಾನಿಲಯಗಳಿಂದ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ) ವಿಷಯಗಳಲ್ಲಿ ಪದವಿ ಹೊಂದಿರುವರು ದೇಶದಲ್ಲೇ ಉಳಿಯಲು ಸುಲಭವಾಗುವಂತೆ ಮಾಡಲು ಪ್ರಯತ್ನಿಸುತ್ತದೆ. ಕಡಿಮೆ ವೇತನದ ಉದ್ಯಮಗಳಲ್ಲಿನ ಕಾರ್ಮಿಕರಿಗೆ ಹಸಿರು ಕಾರ್ಡ್‌ಗಳ ಪ್ರವೇಶವನ್ನು ಸುಧಾರಿಸುತ್ತದೆ. H-1B ಹೊಂದಿರುವವರಿಗೆ ಕೆಲಸ ನೀಡುತ್ತದೆ ಎಂದಿದ್ದಾರೆ.
ಇದನ್ನೂ ಓದಿ :ಜೂನ್ 22 ರಂದು ಮೋದಿ ಅಮೆರಿಕಕ್ಕೆ : ಶ್ವೇತಭವನದಲ್ಲಿ ಜೋ ಬೈಡನ್ ಅದ್ಧೂರಿ ಔತಣಕೂಟ