ವಾಷಿಂಗ್ಟನ್: ವಿಶ್ವ ಸಮರ 2ರ ಸಮಯದಲ್ಲಿ ಫಿಲಿಪ್ಪಿನ್ಸ್ ಸಮುದ್ರದಲ್ಲಿ US ಮತ್ತು ಜಪಾನಿನ ನೌಕಾಪಡೆಗಳ ನಡುವೆ ದೊಡ್ಡ ಪ್ರಮಾಣದ ‘ಲ್ಯಾಟೆ ಕದನ’ ನಡೆಯಿತು. 1944 ರಲ್ಲಿ ಯುಎಸ್ ನೌಕಾಪಡೆಯು ಫಿಲಿಪ್ಪಿನ್ಸ್ ಅನ್ನು ಜಪಾನಿನ ಆಕ್ರಮಣದಿಂದ ಮುಕ್ತಗೊಳಿಸಲು ತೀವ್ರವಾಗಿ ಹೋರಾಡಿತು. ಇದೇ ಸಂದರ್ಭದಲ್ಲಿ ಅಕ್ಟೋಬರ್ 25ರಂದು ಸಮ್ಮರ್ ಐಲ್ಯಾಂಡ್ ಮೇಲೆ ನಡೆದ ದಾಳಿಯ ವೇಳೆ ಸೂಪರ್ ಪವರ್ಗೆ ಸೇರಿದ ನಾಲ್ಕು ಯುದ್ಧನೌಕೆಗಳು ಮುಳುಗಿದವು. ಅದರಲ್ಲಿ ಒಂದು ‘ಯುಎಸ್ಎಸ್ ಸ್ಯಾಮ್ಯುಯೆಲ್ ಬಿ. ರಾಬರ್ಟ್ಸ್ ಎಂಬ ಯುದ್ಧ ನೌಕೆಯೂ ನೀರು ಪಾಲಾಗಿತ್ತು.
ಓದಿ:ಕಪ್ಪು ಸಮುದ್ರದಲ್ಲಿ ಮುಳುಗಿದ ರಷ್ಯಾದ ಯುದ್ಧನೌಕೆ
ಅಮೆರಿಕದ ಟೆಕ್ಸಾಸ್‌ನಲ್ಲಿರುವ ಜಲಾಂತರ್ಗಾಮಿ ತಂತ್ರಜ್ಞಾನ ಕಂಪನಿ ಕ್ಯಾಲ್ಡನ್ ಓಷಿಯಾನಿಕ್ ಎಂಟು ದಿನಗಳಿಂದ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಸಮುದ್ರದಡಿ ಸ್ಯಾಮ್ಯುಯೆಲ್ ಬಿ ಯುದ್ಧ ನೌಕೆ ಪತ್ತೆಯಾಗಿದೆ. ಹಡಗು ಫೋಟೋಗಳು ಮತ್ತು ವಿಡಿಯೋಗಳನ್ನು ಸೆರೆಹಿಡಿದಿದೆ. ಹಡಗು ಉಪಕರಣಗಳು, ಟಾರ್ಪಿಡೊ ಲಾಂಚರ್‌ಗಳು, ಗನ್ ಮೌಂಟ್‌ಗಳು ಇತ್ಯಾದಿ ವಸ್ತುಗಳು ಅದರಲ್ಲಿ ಕಂಡುಬಂದಿವೆ.
‘ಹಡಗು 6,895 ಮೀಟರ್ ಆಳದಲ್ಲಿ ಇರುವುದು ಕಂಪನಿ ಪತ್ತೆ ಹಚ್ಚಿದೆ. ಇಲ್ಲಿಯವರೆಗೆ ಅನ್ವೇಷಿಸಿದಲ್ಲಿ ಇದು ಅತ್ಯಂತ ಆಳದಲ್ಲಿ ಸಿಲುಕಿರುವ ಹಡಗು ಆಗಿದೆ ಎಂದು ಕಂಪನಿಯ ಸಂಸ್ಥಾಪಕ ವಿಕ್ಟರ್ ವೆಸ್ಕೋವೊ ಟ್ವೀಟ್ ಮಾಡಿದ್ದಾರೆ. ಈ ಯುದ್ಧ ನೌಕೆ ಜಪಾನಿನ ಪಡೆಗಳೊಂದಿಗೆ ಕೊನೆಯವರೆಗೂ ಹೋರಾಡಿದೆ ಎಂದು ಹೇಳಿದರು.
ಓದಿ:ಐಎನ್ಎಸ್ ಖಂಡೇರಿ ಸಬ್ ಮೆರಿನ್ ಮೂಲಕ ರಕ್ಷಣಾ ಸಚಿವರ ಸಮುದ್ರಯಾನ
US ನೌಕಾಪಡೆಯ ದಾಖಲೆಗಳ ಪ್ರಕಾರ, 'ಸ್ಯಾಮ್ಯುಯೆಲ್ ಬಿ' ಸಮುದ್ರದಲ್ಲಿ ಮುಳುಗುವ ಭೀತಿ ಎದುರಿಸುತ್ತಿದ್ದಾಗ ನೌಕೆಯಲ್ಲಿರುವ ಸಿಬ್ಬಂದಿ ಸಹಾಯಕ್ಕಾಗಿ ಸುಮಾರು ಮೂರು ದಿನಗಳ ಕಾಲದವರೆಗೆ ಕಾಯ್ದಿದ್ದರು. ಒಟ್ಟು 224 ಸಿಬ್ಬಂದಿಯಲ್ಲಿ 89 ಮಂದಿ ಸಾವನ್ನಪ್ಪಿದ್ದಾರೆ. ಗಾಯಾಳುಗಳು ಮತ್ತು ಶಾರ್ಕ್ ದಾಳಿಯಿಂದ ಅನೇಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
USS ಜಾನ್‌ಸ್ಟನ್ ಎಂಬ ಇನ್ನೊಂದು ಹಡಗನ್ನು ವೆಸ್ಕೋ 2021ರಲ್ಲಿ ಸುಮಾರು 6,500 ಮೀಟರ್ ಆಳದಲ್ಲಿ ಪತ್ತೆ ಮಾಡಿದೆ. 7,000 ಮೀಟರ್‌ಗಿಂತಲೂ ಹೆಚ್ಚು ಆಳದಲ್ಲಿ ಮತ್ತೊಂದು ಯುದ್ಧನೌಕೆ 'ಯುಎಸ್ಎಸ್ ಗಾಂಬಿಯರ್ ಬೇ’ಗಾಗಿ ಹುಡುಕಾಟ ನಡೆಸಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. 'ಯುಎಸ್ಎಸ್ ಹೊಯೆಲ್' ಎಲ್ಲಿ ಮುಳುಗಿತು ಎಂಬ ನಿಖರ ಮಾಹಿತಿ ಇಲ್ಲದ ಕಾರಣ ಶೋಧಿಸಲು ಸಾಧ್ಯವಾಗಲಿಲ್ಲ. ಐತಿಹಾಸಿಕ ಟೈಟಾನಿಕ್ ಅವಶೇಷಗಳು ಸುಮಾರು ನಾಲ್ಕು ಸಾವಿರ ಮೀಟರ್ ಆಳದ ನೀರಿನಲ್ಲಿ ಪತ್ತೆಯಾಗಿದ್ದವು.