ಅತಿ ಹೆಚ್ಚು ಕಾಲ ಜೀವಿಸುವ ಮೂಲಕ ಒಂಟೆಯೊಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ನಲ್ಲಿ ತನ್ನ ಹೆಸರು ದಾಖಲಿಸಿದೆ.1996ರ ಜನವರಿಯಲ್ಲಿ ಅಮೆರಿಕದಲ್ಲಿ ಹುಟ್ಟಿದ ಇದರ ಹೆಸರು ದಲೈ ಲಾಮಾ. 27 ವರ್ಷದ ಒಂಟೆ ಅಮೆರಿಕ, ಮೆಕ್ಸಿಕೊದ ಅಲ್ಬುಕ್ಯುರೆುಕ್ಯೂನ ಸಂತತಿಯಲ್ಲಿ ಹಳೆಯ ಜೀವಿ ಎಂಬ ಹೆಗ್ಗಳಿಕೆ ಪಡೆದಿದೆ. ಈ ಸಂಬಂಧ ಪಶುಸಂಗೋಪನೆ ವೈದ್ಯರು ಸರ್ಟಿಫಿಕೇಟ್ ನೀಡಿದ್ದಾರೆ.
ಒಂಟೆಯ ವಯಸ್ಸು ಸರಿಯಾಗಿ 27 ವರ್ಷ 1 ದಿನ. ತನ್ನ ಸಂತತಿಯಲ್ಲೇ ಹೆಚ್ಚು ಕಾಲ ಬದುಕಿದ ಜೀವಿ. ಪ್ರಾಣಿ ತಜ್ಞರ ಪ್ರಕಾರ, ಸಾಮಾನ್ಯವಾಗಿ ಒಂಟೆಗಳ ಜೀವಿತಾವಧಿ 20 ವರ್ಷ. ಈ ದಾಖಲೆಯನ್ನು ದಲೈ ಲಾಮಾ ಮುರಿದಿದೆ. 2007ರಿಂದ ಆಂಡ್ರ್ಯೂ ಥಾಮಸ್ ಕುಟುಂಬ ತಮ್ಮ ಮಗಳು ಸ್ಯಾಮಿಗಾಗಿ ಒಂಟೆಯನ್ನು ಸಾಕುತ್ತಿದ್ದಾರೆ. 14 ವರ್ಷಗಳ ಹಿಂದೆ ಈ ಕುಟುಂಬ ಸೇರಿದ್ದ ಲಾಮಾಗೆ ಇದಕ್ಕೂ ಮುನ್ನ ಡಿಎಂ ಟಾಮಿ ಟ್ಯೂನ್ ಎಂದು ಹೆಸರಿಡಲಾಗಿತ್ತು. 2007ರ ಬಳಿಕ ಕುಟುಂಬದ ಸದಸ್ಯನಾಗಿದ್ದು ಹೊಸ ಹೆಸರಿಡಲಾಗಿದೆ.