ಟೊರೊಂಟೊ (ಕೆನಡಾ): ಕೆನಡಾ ದೇಶವು ಜಗತ್ತಿನಲ್ಲಿ ಸುರಕ್ಷಿತವಾದ ಸ್ಥಳವಾಗಿದ್ದು, ಇಲ್ಲಿ ಅಪರಾಧ ಪ್ರಕರಣಗಳು ಕಡಿಮೆ ದಾಖಲಾಗುತ್ತದೆ. ಇಲ್ಲಿ ಕಟ್ಟು ನಿಟ್ಟಾದ ಬಂದೂಕು ನಿಯಂತ್ರಣ ಕಾನೂನುಗಳು ಇವೆ. ಇದರಿಂದ ಕೆನಡಿಯನ್ನರು ಉತ್ತಮ ಗುಣಮಟ್ಟದ ಜೀವನ ನಡೆಸುತ್ತಾರೆ. ಆದರೆ ನಿನ್ನೆ ಬುಧವಾರದಂದು ಕೆನಡಾ ವಿಶ್ವವಿದ್ಯಾಲಯವೊಂದರಲ್ಲಿ ಚೂರಿ ದಾಳಿ ನಡೆದಿದೆ.
ಕೆನಡಾದ ವಾಟರ್‌ಲೂ ನಗರದ ವಿಶ್ವವಿದ್ಯಾನಿಲಯದ ತರಗತಿಯೊಂದರಲ್ಲಿ ವ್ಯಕ್ತಿಯೊಬ್ಬ ಮೂವರಿಗೆ ಇರಿದಿದ್ದು ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಟರ್‌ಲೂ ವಿಶ್ವವಿದ್ಯಾಲಯದ ಹೇಗಿ ಹಾಲ್‌ನಲ್ಲಿ ಬುಧವಾರ ಘಟನೆ ನಡೆದಿದ್ದು, ಚೂರಿ ಇರಿತದ ದಾಳಿಯಲ್ಲಿ ಗಾಯಗೊಂಡವರ ಸ್ಥಿತಿಯ ಬಗ್ಗೆ ತಕ್ಷಣದ ಮಾಹಿತಿ ತಿಳಿದಿಲ್ಲ.
ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಹಾಗೆ ಸದ್ಯಕ್ಕೆ ಓರ್ವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ದಾಳಿಯ ಉದ್ದೇಶವನ್ನು ಪೊಲೀಸ್ ಅಧಿಕಾರಿಗಳು ಇನ್ನು ತಿಳಿಸಿಲ್ಲ. ಜೊತೆಗೆ ಈ ಕುರಿತು ಹೆಚ್ಚಿನ ವಿವರಗಳು ಲಭ್ಯವಾದ ನಂತರ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಘಟನೆ ಕುರಿತು ವಾಟರ್‌ಲೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂಸುಫ್ ಕೇಮಕ್ ಹೇಳಿಕೆ ನೀಡಿದ್ದು, ಲಿಂಗ ಅಧ್ಯಯನ ತರಗತಿ ಸಮಯದಲ್ಲಿ ಈ ದಾಳಿ ನಡೆದಿದೆ. ದಾಳಿ ನಡೆಸಿದ ವ್ಯಕ್ತಿ ತರಗತಿ ಒಳಗೆ ಬಂದನು, ತರಗತಿಯಲ್ಲಿ ಶಿಕ್ಷಕರು ನೀವು ಪ್ರಾಧ್ಯಾಪಕರೇ ಎಂದು ಕೇಳಿದಾಗ ಹೌದು ಎಂದ ಆತ ನಂತರ ಒಂದು ಚಾಕುವನ್ನು ಹೊರಗೆ ತೆಗೆದನು.