ಕರ್ನಾಟಕ

karnataka

ETV Bharat / international

ಸಿಂಗಾಪುರದಲ್ಲಿ ಕಟ್ಟಡ ಅವಶೇಷಗಳಡಿ ಭಾರತೀಯ ಕಾರ್ಮಿಕನ ಶವ ಪತ್ತೆ - ಫ್ಯೂಜಿ ಜೆರಾಕ್ಸ್ ಟವರ್ಸ್

ಸಿಂಗಾಪುರದಲ್ಲಿ ಭಾರತೀಯ ಕಾರ್ಮಿಕನೊಬ್ಬ ಕಟ್ಟಡ ಅವಶೇಷಗಳಡಿ ಶವವಾಗಿ ಪತ್ತೆಯಾಗಿದ್ದಾನೆ.

Singapore
ಭಾರತೀಯ ಕಾರ್ಮಿಕನ ಶವ ಪತ್ತೆ

By

Published : Jun 16, 2023, 2:16 PM IST

ಸಿಂಗಾಪುರ : ಕಟ್ಟಡ ಕುಸಿತದ ವೇಳೆ ಸಾವನ್ನಪ್ಪಿದ 20 ವರ್ಷದ ಭಾರತೀಯ ಪ್ರಜೆಯ ಮೃತದೇಹವನ್ನು ಆರು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ, ಅವಶೇಷಗಳಿಂದ ಹೊರತೆಗೆಯಲಾಗಿದೆ ಎಂದು ಸಿಂಗಾಪುರದ ಮಾಧ್ಯಮವೊಂದು ತಿಳಿಸಿದೆ. ಗುರುವಾರ ತಂಜಾಂಗ್ ಪಗರ್‌ನಲ್ಲಿರುವ ಫ್ಯೂಜಿ ಜೆರಾಕ್ಸ್ ಟವರ್ಸ್ ಕಟ್ಟಡದ ಒಂದು ಭಾಗವನ್ನು ಕೆಡವುವ ವೇಳೆ ಭಾರತೀಯ ಮೂಲದ ಕಾರ್ಮಿಕ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾನೆ ಎಂದು ಅಲ್ಲಿನ ಸುದ್ದಿಸಂಸ್ಥೆಯೊಂದು ವರದಿ ಮಾಡಿತ್ತು.

ಕಾಂಕ್ರೀಟ್ ಸ್ಲ್ಯಾಬ್‌ನ ತೂಕವು ಕನಿಷ್ಠ 50 ಟನ್‌ಗಳು ಎಂದು ಅಂದಾಜಿಸಲಾಗಿದೆ, ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಅವಶೇಷಗಳನ್ನು ಕತ್ತರಿಸಿ, ಒಡೆದು, ಅಗೆದು ರಾತ್ರಿ 9.45ರ ಸುಮಾರಿಗೆ ಮೃತದೇಹವನ್ನು ಪತ್ತೆಹಚ್ಚಲಾಯಿತು. ಮೊದಲು ಕೆಲಸಗಾರ ಕಾಣೆಯಾಗಿದ್ದಾನೆ ಎಂದು ಅಂದಾಜಿಸಲಾಯಿತು. ಬಳಿಕ ಕುಸಿದ ಬಲವರ್ಧಿತ ಕಾಂಕ್ರೀಟ್ ರಚನೆಯ ಅಡಿ ಸಿಲುಕಿರುವುದು ತಿಳಿದುಬಂದಿದ್ದು, ಆತನ ನಾಡಿಮಿಡಿತ ನಿಂತು ಹೋಗಿತ್ತು ಎಂದು ಸಿಂಗಾಪುರ್ ಸಿವಿಲ್ ಡಿಫೆನ್ಸ್ ಫೋರ್ಸ್ (SCDF) ತಿಳಿಸಿದೆ.

ಇನ್ನು ಕಟ್ಟಡ ದುರಂತದ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್‌ಸಿಡಿಎಫ್ ಅಧಿಕಾರಿಗಳು ಆಗಮಿಸಿದರು. ಅಗ್ನಿಶಾಮಕ ಸಿಬ್ಬಂದಿ, ರಕ್ಷಣಾ ಕಾರ್ಯಕರ್ತರು ಮತ್ತು ತುರ್ತು ವೈದ್ಯಕೀಯ ಕಾರ್ಯಕರ್ತರು ಸೇರಿದಂತೆ ಕಾರ್ಮಿಕನನ್ನು ಪತ್ತೆಹಚ್ಚಲು ಹನ್ನೊಂದು ತುರ್ತು ವಾಹನಗಳು ಮತ್ತು 70 ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು.

ಇದನ್ನೂ ಓದಿ :BJP Leader Killed: ಹೆದ್ದಾರಿಯ ಬಳಿ ಬಿಜೆಪಿ ನಾಯಕಿಯ ಮೃತದೇಹ ಪತ್ತೆ.. ಕೊಲೆ ಮಾಡಿ ಬಿಸಾಡಿರುವ ಶಂಕೆ

ಬೆಂಗಳೂರಿನಲ್ಲಿ ಯುವತಿ ಶವ ಪತ್ತೆ: ಕಳೆದ ಜೂನ್​ 6ನೇ ತಾರೀಖಿನಂದು ಜೀವನ್ ಭೀಮಾ ನಗರ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವತಿಯೊಬ್ಬರ ಶವ ಪತ್ತೆಯಾಗಿತ್ತು. ನೇಣು ಬಿಗಿದ ಸ್ಥಿತಿಯಲ್ಲಿ ಹೈದರಾಬಾದ್ ಮೂಲದ ಆಕಾಂಕ್ಷಾ (23) ಎಂಬುವರ ಶವ ಪತ್ತೆಯಾಗಿದ್ದು, ಆಕೆಯ ಪ್ರಿಯಕರ ಅರ್ಪಿತ್ ಎಂಬಾತನನೇ ಕೊಲೆ ಮಾಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿತ್ತು.

ಇದನ್ನೂ ಓದಿ :ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಹರಿದು ಹೆಡ್ ಕಾನ್ಸ್​ಟೇಬಲ್ ಸಾವು - ಕೊಲೆ ಶಂಕೆ

ಆಕಾಂಕ್ಷಾ ಮತ್ತು ಅರ್ಪಿತ್ ಇಬ್ಬರೂ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅರ್ಪಿತ್ ಪ್ರಮೋಷನ್ ಪಡೆದು ಹೈದರಾಬಾದ್​ಗೆ ತೆರಳಿದ್ದ. ಆಕಾಂಕ್ಷಾ ತನ್ನ ಸ್ನೇಹಿತೆಯೊಂದಿಗೆ ಜೀವನ್ ಭೀಮಾ ನಗರ ವ್ಯಾಪ್ತಿಯ ಕೋಡಿಹಳ್ಳಿಯ‌ ಖಾಸಗಿ ಅಪಾರ್ಟ್‌ಮೆಂಟ್​ನಲ್ಲಿ ವಾಸವಿದ್ದರು. ಹೈದರಾಬಾದ್​ನಿಂದ ಆಗಾಗ ಬಂದು ಆಕಾಂಕ್ಷಾಳನ್ನು ಅರ್ಪಿತ್ ಭೇಟಿಯಾಗುತ್ತಿದ್ದ. ಈ ನಡುವೆ ಇಬ್ಬರ ಮಧ್ಯೆ ಜಗಳ ಕೂಡ ನಡೆಯುತ್ತಿದ್ದು, ಬೇರೆಯಾಗಬೇಕು ಎಂದು ಗಲಾಟೆ ಮಾಡಿಕೊಂಡಿದ್ದರು. ಆಕಾಂಕ್ಷಾ ವಾಸವಿದ್ದ ಮನೆಗೆ ಬಂದಿದ್ದ ಅರ್ಪಿತ್, ಆಕೆಯ ಉಸಿರು ಗಟ್ಟಿಸಿ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ :ಬೆಂಗಳೂರಲ್ಲಿ ಹೈದರಾಬಾದ್ ಮೂಲದ ಯುವತಿ ಶವ ಪತ್ತೆ : ಪ್ರಿಯಕರ ನಾಪತ್ತೆ

ಕಳೆದ 4 ದಿನಗಳ ಹಿಂದೆ (ಜೂನ್​ 12 ರಂದು) ಅಸ್ಸೋಂದ ಗೋಲ್ಪಾರಾ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿಯೊಬ್ಬರ ಮೃತದೇಹ ರಾಷ್ಟ್ರೀಯ ಹೆದ್ದಾರಿಯ ಬಳಿ ಪತ್ತೆಯಾಗಿತ್ತು. ಜೋನಾಲಿ ನಾಥ್ ಎಂಬುವರನ್ನು ಕೊಲೆ ಮಾಡಿ ಶವ ಬಿಸಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಬಿಜೆಪಿ ನಾಯಕರು ರಾಜ್ಯ ಪೊಲೀಸರನ್ನು ಒತ್ತಾಯಿಸಿದ್ದಾರೆ.

ABOUT THE AUTHOR

...view details