ವೆಲ್ಲಿಂಗ್ಟನ್, ನ್ಯೂಜಿಲ್ಯಾಂಡ್: ರೆಸ್ಟೋರೆಂಟ್‌ಗಳಲ್ಲಿ ರಾತ್ರಿ ಭೋಜನ ಮಾಡುತ್ತಿದ್ದವರ ಮೇಲೆ ವ್ಯಕ್ತಿಯೊಬ್ಬ ಕೊಡಲಿಯಿಂದ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ನಾಲ್ವರು ಗಾಯಗೊಂಡಿರುವುದಾಗಿ ಅಲ್ಲಿನ ಪೊಲೀಸ್ ಇಲಾಖೆ ಖಚಿತ ಪಡಿಸಿದೆ.
ಏನಿದು ಘಟನೆ?:ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಮೂರು ನೆರೆಯ ಚೀನಾದ ರೆಸ್ಟೋರೆಂಟ್‌ಗಳಲ್ಲಿ ರಾತ್ರಿ ಊಟ ಸೇವಿಸುತ್ತಿದ್ದವರ ಮೇಲೆ ಭೀಕರವಾಗಿ ದಾಳಿ ಮಾಡಿದ್ದಾನೆ. ಈ ದಾಳಿಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಲ್ಬನಿಯ ಉತ್ತರ ಆಕ್ಲೆಂಡ್ ಉಪನಗರದಲ್ಲಿ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ 24 ವರ್ಷದ ಶಂಕಿತ ಆರೋಪಿ ಮೂರು ಚೀನಾ ರೆಸ್ಟೋರೆಂಟ್‌ಗಳಿಗೆ ನುಗ್ಗಿ ದಾಳಿ ಆರಂಭಿಸಿದ್ದನು. ಈ ಬಗ್ಗೆ ಮಾಹಿತಿ ಬಂದಾಕ್ಷಣ ನಾವು ಘಟನಾ ಸ್ಥಳಕ್ಕೆ ತೆರಳಿ ಆರೋಪಿ ಬಂಧಿಸಿದ್ದೇವೆ. ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಗಾಯಗೊಂಡವರಲ್ಲಿ ಒಬ್ಬರು ಚೇತರಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಲಾಗಿದೆ ಮತ್ತು ಮೂವರ ಸ್ಥಿತಿ ಸ್ಥಿರವಾಗಿದ್ದು, ಅವರ ಮೇಲೆ ಗಮನ ಹರಿಸಲಾಗಿದೆ ಎಂದು ನಾರ್ತ್ ಶೋರ್ ಮತ್ತು ಆಕ್ಲೆಂಡ್ ಆಸ್ಪತ್ರೆಯ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.
ಝಾಂಗ್ಲಿಯಾಂಗ್ ಮಾಲ್ಟಾಂಗ್, ಯುಸ್ ಡಂಪ್ಲಿಂಗ್ ಕಿಚನ್ ಮತ್ತು ಮಾಯಾ ಹಾಟ್‌ಪಾಟ್ ಎಂಬ ಮೂರು ಚೈನೀಸ್ ರೆಸ್ಟೋರೆಂಟ್‌ಗಳಿಗೆ ತೆರಳಿದ ವ್ಯಕ್ತಿ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಕೊಡಲಿಯಿಂದ ಯಾದೃಚ್ಛಿಕವಾಗಿ ಜನರ ಮೇಲೆ ದಾಳಿ ಮಾಡಲು ಆರಂಭಿಸಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.