ಬೀಜಿಂಗ್(ಚೀನಾ): ಚೀನಾದಲ್ಲಿ ಕಟ್ಟುನಿಟ್ಟಾದ ಕೋವಿಡ್ ನಿಯಮಗಳನ್ನು ದಿಢೀರ್ ತೆಗೆದುಹಾಕಲಾಗಿದ್ದು, ಸಾವಿನ ಸಂಖ್ಯೆಯಲ್ಲೀಗ ಏರಿಕೆಯಾಗಿದೆ. ಮಾರಕ ಸೋಂಕಿನಿಂದ 2023ರ ಅಂತ್ಯಕ್ಕೆ ಡ್ರ್ಯಾಗನ್ ದೇಶದಲ್ಲಿ 10 ಲಕ್ಷಕ್ಕಿಂತಲೂ ಅಧಿಕ ಸಾವು ಸಂಭವಿಸಬಹುದು ಎಂದು ಯುಎಸ್ ಮೂಲದ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್ಸ್ ಆ್ಯಂಡ್ ಇವಾಲ್ಯುಯೇಶನ್(ಐಎಚ್ಎಂಇ) ವರದಿ ಮಾಡಿದೆ. ಮುಂದಿನ ವರ್ಷದ ಏಪ್ರಿಲ್ 1 ರ ಸುಮಾರಿಗೆ ಸೋಂಕು ಪ್ರಕರಣಗಳು ಜಾಸ್ತಿಯಾಗಲಿದ್ದು, ಸಾವಿನ ಸಂಖ್ಯೆ ಕೂಡಾ 3,22,000 ತಲುಪಲಿದೆ ಎಂದು ಎಚ್ಚರಿಸಿದೆ.
ಚೀನಾದಲ್ಲಿ ಕೋವಿಡ್ ನಿರ್ಬಂಧ ಸಡಿಲಿಕೆ; ಹೆಚ್ಚುತ್ತಿದೆ ಸಾವಿನ ಸಂಖ್ಯೆ - etv bharat kannada
2023 ರ ಅಂತ್ಯಕ್ಕೆ ಚೀನಾದಲ್ಲಿ 10 ಲಕ್ಷಕ್ಕಿಂತಲೂ ಅಧಿಕ ಕೋವಿಡ್ ಸಾವು ಸಂಭವಿಸಬಹುದು ಎನ್ನುವುದು ಹೊಸ ಅಂದಾಜು.!
ಚೀನಾದಲ್ಲಿ ಕೋವಿಡ್‌ಗೆ ಕಡಿವಾಣ ಹಾಕಲು ಅಲ್ಲಿನ ಸರ್ಕಾರ ಅತ್ಯಂತ ಕಠಿಣ ನಿರ್ಬಂಧಗಳನ್ನು ಈ ಮೊದಲು ವಿಧಿಸಿತ್ತು. ಇದರಿಂದ ಜನರು ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ್ದರು. ಅಲ್ಲದೇ ರಾಷ್ಟ್ರಾಧ್ಯಕ್ಷ ಕ್ಸಿ ಜಿನ್ಪಿಂಗ್ ರಾಜೀನಾಮೆಗೂ ಆಗ್ರಹಿಸಿದ್ದರು. ಸಾವಿರಾರು ಮಂದಿ ಪ್ರತಿಭಟನಾಕಾರರು ಪೊಲೀಸರನ್ನೂ ಲೆಕ್ಕಿಸದೇ ಪ್ರತಿಭಟನೆ ನಡೆಸಿದ್ದು, ತೀವ್ರ ಸ್ವರೂಪ ಪಡೆದಿತ್ತು. ಇದನ್ನರಿತ ಸರ್ಕಾರ ಇಂತಿಷ್ಟು ನಿರ್ಬಂಧಗಳನ್ನು ಸಡಿಲಿಸಿದೆ. ಹೀಗಾಗಿಯೇ ಸಾವಿನ ಸಂಖ್ಯೆ ಒಮ್ಮೆಲೆ ಏರಿಕೆಯಾಗಿದ್ದು, 24 ಗಂಟೆಗಳ ಕಾಲ ಶವವನ್ನು ಸುಡುವ ಪರಿಸ್ಥಿತಿ ಬಂದೊದಗಿದೆ.
ಇದನ್ನೂ ಓದಿ:ಕೋವಿಡ್ ಲಾಕ್‌ಡೌನ್: ಚೀನಾದಲ್ಲಿ ತೀವ್ರಗೊಂಡ ಪ್ರತಿಭಟನೆ, ಅಧ್ಯಕ್ಷರ ರಾಜೀನಾಮೆಗೆ ಒತ್ತಾಯ