ಬಿಜೀಂಗ್: ಚೀನಾದಲ್ಲಿ ಮತ್ತೆ ಕೋವಿಡ್ ಅಬ್ಬರ ಶುರುವಾಗಿದ್ದು ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ದೇಶದಲ್ಲಿ ಸೋಂಕು ಹರಡುವುದನ್ನು ತಡೆಯಲು ಲಾಕ್ಡೌನ್, ಸಮೂಹಿಕ ಪರೀಕ್ಷೆ ಮತ್ತು ಪ್ರವಾಸ ನಿರ್ಬಂಧ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ.
ಬುಧವಾರ 31,454 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 22,517 ಲಕ್ಷಣರಹಿತ ಸೋಂಕಿತರಿದ್ದಾರೆ ಎಂದು ನ್ಯಾಷನಲ್ ಹೆಲ್ತ್ ಬ್ಯೂರೋ ತಿಳಿಸಿದೆ. ಚೀನಾದ 1.4 ಬಿಲಿಯನ್ ಜನಸಂಖ್ಯೆಗೆ ಹೋಲಿಕೆ ಮಾಡಿ ನೋಡಿದಾಗ ಈ ಪ್ರಕರಣಗಳ ಸಂಖ್ಯೆ ಗಣನೀಯವಾಗಿದೆ. ಬೀಜಿಂಗ್ನಲ್ಲಿ ಶೂನ್ಯ ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಒಂದು ಪ್ರಕರಣ ಕಂಡು ಬಂದರೂ ಇಡೀ ನಗರವನ್ನು ಮುಚ್ಚಲಾಗುತ್ತಿದೆ. ಜೊತೆಗೆ ಸೋಂಕಿತರು ಪತ್ತೆಯಾದ ಪ್ರದೇಶವನ್ನು ಸಂಪೂರ್ಣವಾಗಿ ಸೀಜ್ ಮಾಡಿ ಜನರನ್ನು ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದೆ.