ಹೈದರಾಬಾದ್:ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಇದೀಗ ಮತ್ತೆ ಪ್ರಚಲಿತದಲ್ಲಿದ್ದಾನೆ. ತಮ್ಮದೇ ಆದ ಕೈಲಾಸ ದೇಶದಲ್ಲಿ ನೆಲೆಸಿರುವ ನಿತ್ಯಾನಂದ ಕಳೆದ ಮೂರು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲನಾಗಿದ್ದಾರೆ. ಕಳೆದೆರಡು ದಿನಗಳ ಹಿಂದೆ ತಮ್ಮ ಕೈಲಾಸ ದೇಶದ ಪ್ರತಿನಿಧಿ ಮಾ ವಿಜಯಪ್ರಿಯ ನಿತ್ಯಾನಂದ ಜಿನಿವಾದಲ್ಲಿ ನಡೆದ ವಿಶ್ವ ಸಂಸ್ಥೆಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಡಿಯೋ ಹಂಚಿಕೊಂಡಿದ್ದರು. ಇದೀಗ ಈ ಕೈಲಾಸ ದೇಶಕ್ಕೆ ಹೋಗುವವರಿಗೆ ಇ- ಪೌರತ್ವ ನೀಡಲು ಮುಂದಾಗಿರುವುದಾಗಿ ನಿತ್ಯಾನಂದ ಘೋಷಣೆ ಹೊರಡಿಸಿದ್ದಾರೆ.
ಕ್ಯೂ ಆರ್ ಕೋಡ್ ಮೂಲಕ ಪಡೆಯಬಹುದು ಪೌರತ್ವ:ಈ ಹಿಂದೆಯೇ ತಮ್ಮ ಕೈಲಾಸ ದೇಶಕ್ಕೆ ಬರುವ ಕುರಿತು ಮುಕ್ತ ಆಹ್ವಾನ ನೀಡಿದ್ದ ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಪತಿಯಂತೆ ಬಿಂಬಿಸಿಕೊಂಡಿರುವ ನಿತ್ಯಾನಂದ ಇದೀಗ ಮತ್ತೆ ತಮ್ಮ ದೇಶಕ್ಕೆ ಜನರಿಗೆ ಆಹ್ವಾನ ನೀಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಸಂಬಂಧ ಪೋಸ್ಟ್ ಮಾಡಿರುವ ನಿತ್ಯಾನಂತ ಯುನೈಟೆಡ್ ಸ್ಟೇಟ್ ಆಫ್ ಕೈಲಾಸಕ್ಕೆ ಉಚಿತ ಪೌರತ್ವಕ್ಕೆ ಅರ್ಜಿ ಆಹ್ವಾನಿಸಿದ್ದಾರೆ. ಯುನೈಟೆಡ್ ಸ್ಟೇಟ್ ಆಫ್ ಕೈಲಾಸದ ಉಚಿತ ಪೌರತ್ವಕ್ಕೆ ಅರ್ಜಿ ಸಲ್ಲಿಸಿ ಎಂಬ ಟ್ಯಾಗ್ ಲೈನ್ ಅಡಿ ಟ್ವೀಟ್ ಮಾಡಿದ್ದು, ಇದಕ್ಕೆ ಕ್ಯೂಆರ್ ಕೋಡ್ ಅನ್ನು ನೀಡಿದ್ದು, ಇದನ್ನು ಸ್ಕಾನ್ ಮಾಡಿ ಅರ್ಜಿ ಸಲ್ಲಿಸುವಂತೆ ಮಾಹಿತಿ ನೀಡಿದ್ದಾನೆ. ಇಂಗ್ಲಿಷ್ ಮತ್ತು ತಮಿಳು ಭಾಷೆಯಲ್ಲಿ ಈ ಟ್ವೀಟ್ ಅನ್ನು ಪ್ರಟಿಸಿದ್ದು, ಎರಡರಲ್ಲೂ ಕ್ಯೂ ಆರ್ ಕೋಡ್ ಅನ್ನು ನೀಡಲಾಗಿದೆ.
ಈ ಕ್ಯೂ ಆರ್ ಕೋಡ್ ಅನ್ನು ಒಮ್ಮೆ ಸ್ಕಾನ್ ಮಾಡಿದರೆ, ಅದು ನೇರವಾಗಿ ನಿತ್ಯಾನಂದನ Kailaasa.org ಜಾಲತಾಣದ ಪೌರತ್ವ ವಿಭಾಗದ ದಾಖಲಾತಿಗೆ ಕರೆದೊಯ್ಯಲಿದೆ. ಇದರಲ್ಲಿ ನೀವು ನಿಮ್ಮ ಹೆಸರು, ಇಮೇಲ್ ವಿಳಾಸ ಸೇರಿದಂತೆ ಇನ್ನಿತರ ಮಾಹಿತಿಯನ್ನು ಭರ್ತಿ ಮಾಡಬೇಕಿದೆ.