ನ್ಯೂಯಾರ್ಕ್ (ಅಮೆರಿಕ) :ಚೀನಾ ದೇಶದ ಎರಡನೇ ಅತಿದೊಡ್ಡ ಪ್ರಾಪರ್ಟಿ ಡೆವಲಪರ್ ಹಾಗೂ ರಿಯಲ್ ಎಸ್ಟೇಟ್ ದೈತ್ಯ "ಎವರ್‌ಗ್ರಾಂಡೆ ಗ್ರೂಪ್" ಗುರುವಾರ ನ್ಯೂಯಾರ್ಕ್‌ನಲ್ಲಿ ದಿವಾಳಿತನದ ವಿರುದ್ದ ರಕ್ಷಣೆ ಕೋರಿ ಅರ್ಜಿಯನ್ನು ಸಲ್ಲಿಸಿದೆ. ಚೀನೀ ಆರ್ಥಿಕತೆಯಲ್ಲಿ ಭಾರಿ ಆಸ್ತಿ ಬಿಕ್ಕಟ್ಟು ಮತ್ತು ಸಾಲವನ್ನು ಎದುರಿಸಿದ ಬಳಿಕ ಎವರ್‌ಗ್ರಾಂಡೆ ಗ್ರೂಪ್ ಸಂಕಷ್ಟಕ್ಕೆ ಸಿಲುಕಿದೆ. ಹಾಗೆಯೇ, 2021 ರಲ್ಲಿ ತನ್ನ ಹಣಕಾಸಿನ ಹೊಣೆಗಾರಿಕೆಗಳನ್ನು ಡೀಫಾಲ್ಟ್ ಮಾಡಿದ ನಂತರ ಸಂಸ್ಥೆಯು ಹೆಚ್ಚಿನ ತೊಂದರೆ ಅನುಭವಿಸಿದೆ.
ಅಮೆರಿಕ ದಿವಾಳಿತನ ಸಂಹಿತೆಯ ಅಧ್ಯಾಯ 15 ರ ಅಡಿಯಲ್ಲಿ ಕಂಪನಿ ರಕ್ಷಣೆ ನೀಡುವಂತೆ ಕೋರಿದೆ. ಚೀನೀ ಹೋಮ್‌ಬಿಲ್ಡರ್‌ನ ಅಧ್ಯಾಯ 15 ಅರ್ಜಿಯು ಹಾಂಕಾಂಗ್ ಮತ್ತು ಕೇಮನ್ ದ್ವೀಪಗಳಲ್ಲಿ ಪುನಾರಚನೆ ಪ್ರಕ್ರಿಯೆಗಳನ್ನು ನಡೆಸುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಹಾಗೆಯೇ, ಈ ಪ್ರಕರಣವು ಇತರ ದೇಶಗಳ ನ್ಯಾಯಾಲಯಗಳ ನಡುವಿನ ಸಹಕಾರವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ :ಭಾರತದ ಆತಿಥ್ಯ ಉದ್ಯಮದಲ್ಲಿನ ಹೂಡಿಕೆಗಳು ಶತಕೋಟಿ ಮೀರುವ ಸಾಧ್ಯತೆ : CBRE
2021 ರಲ್ಲಿ ಎವರ್‌ಗ್ರಾಂಡೆ ಗ್ರೂಪ್ ಹೆಚ್ಚಿನ ಸಾಲದ ಹೊರೆಯಿಂದ ಬಳಲುತ್ತಿದೆ ಎಂಬುದಾಗಿ ವರದಿ ಮಾಡಲಾಗಿತ್ತು. ಮೊದಲು ಬಾಂಡ್‌ಗಳ ಡೀಫಾಲ್ಟ್ ಸಂಭವಿಸಿತು. ಇದರ ಬೆನ್ನಲ್ಲೇ ಕೋವಿಡ್ -19 ವೈರಸ್ ಸಾಂಕ್ರಾಮಿಕ ರೋಗ ಹೊಡೆತ ನೀಡಿದ್ದು, ಇದರಿಂದ ಇತರ ಬಿಲ್ಡರ್‌ಗಳ ಡೀಫಾಲ್ಟ್ ನಷ್ಟಕ್ಕೆ ಕಾರಣವಾಯಿತು. ಪ್ರಮುಖ ಡೆವಲಪರ್‌ಗಳು ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ವಿಫಲರಾಗಿದ್ದು, ಇದರಿಂದ ಮನೆ ಖರೀದಿದಾರರು ಪ್ರತಿಭಟನೆ ನಡೆಸಿದ್ದರು. ಕಂಪನಿಯು 2021 ಮತ್ತು 2022 ರಲ್ಲಿ ಷೇರುದಾರರ ಹಣ 81 ಬಿಲಿಯನ್ ಡಾಲರ್ ಕಳೆದುಕೊಂಡಿದೆ ಎಂದು ಕಳೆದ ತಿಂಗಳು ಸ್ಟಾಕ್ ಮಾರ್ಕೆಟ್ ಫೈಲಿಂಗ್‌ನಲ್ಲಿ ವರದಿ ಮಾಡಿದೆ.