ಕರ್ನಾಟಕ

karnataka

ETV Bharat / international

ಗೃಹಬಂಧನ ವದಂತಿ ಮಧ್ಯೆಯೇ ಸಾರ್ವಜನಿಕವಾಗಿ ಕಾಣಿಸಿಕೊಂಡ ಚೀನಾ ಅಧ್ಯಕ್ಷ

ಕ್ಸಿ ಜಿನ್​ಪಿಂಗ್​ ಪದಚ್ಯುತಿಗೊಳಿಸಿ ಗೃಹಬಂಧನ ವಿಚಾರವಾಗಿ ಎದ್ದಿದ್ದ ವದಂತಿಗಳ ಮಧ್ಯೆಯೇ ಚೀನಾ ಅಧ್ಯಕ್ಷ ಸಾರ್ವಜನಿಕವಾಗಿ ಕಾಣಿಸಿಕೊಂಡು ಊಹಾಪೋಹಗಳಿಗೆ ಇತಿಶ್ರೀ ಹಾಡಿದ್ದಾರೆ.

chinese-president-xi-jinping-appeared-in-public
ಸಾರ್ವಜನಿಕವಾಗಿ ಕಾಣಿಸಿಕೊಂಡ ಚೀನಾ ಅಧ್ಯಕ್ಷ

By

Published : Sep 28, 2022, 4:06 PM IST

ಬೀಜಿಂಗ್​, ಚೀನಾ:ಪದಚ್ಯುತಿ, ಗೃಹಬಂಧನ, ಚೀನಾದಲ್ಲಿ ಕ್ಷಿಪ್ರಕ್ರಾಂತಿ ನಡೆಯುತ್ತಿದೆ ಎಂಬ ವದಂತಿಗಳ ಮಧ್ಯೆಯೇ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್​ 16 ರಂದು ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ನಂತರ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇರುವುದು ವಿವಿಧ ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿತ್ತು.

ಚೀನಾದಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕಲು ಕ್ಸಿ ಜಿನ್​ಪಿಂಗ್​ ತನ್ನ ವಿರೋಧಿ ರಾಜಕಾರಣಿಗಳು ಮತ್ತು ಮಂತ್ರಿಗಳಿಗೆ ಗಲ್ಲು ಶಿಕ್ಷ ವಿಧಿಸಿದ್ದರು. ಇದಾದ ಬಳಿಕ ದೇಶದಲ್ಲಿ ಕ್ಷಿಪ್ರಕ್ರಾಂತಿ ನಡೆಯುತ್ತಿದ್ದು, ಅದರ ಭಾಗವಾಗಿ ಜಿನ್​ಪಿಂಗ್​ರನ್ನು ಗೃಹಬಂಧನಕ್ಕೆ ಒಳಪಡಿಸಲಾಗಿದೆ ಎಂದು ಸುದ್ದಿ ಹರಿದಾಡಿತ್ತು.

ಇದಲ್ಲದೇ, ಜಿನ್‌ಪಿಂಗ್ ಅವರನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಅಥವಾ ಪಿಎಲ್‌ಎ ಮುಖ್ಯಸ್ಥ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ದಿಢೀರ್​ ಆಗಿ ಜಿನ್​ಪಿಂಗ್​ ಟಿವಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅದೆಲ್ಲಾ ಊಹಾಪೋಹಳಿಗೆ ತೆರೆ ಎಳೆದಿದ್ದಾರೆ.

ಜಿನ್‌ಪಿಂಗ್ ಬಗ್ಗೆ ವದಂತಿ ಯಾಕಾಗಿತ್ತು?:ಭ್ರಷ್ಟಾಚಾರದ ಆರೋಪದ ಮೇಲೆ ಇಬ್ಬರು ಮಾಜಿ ಮಂತ್ರಿಗಳಿಗೆ ಮರಣದಂಡನೆ ಮತ್ತು ನಾಲ್ಕು ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆಯನ್ನು ಕ್ಸಿ ಸರ್ಕಾರ ವಿಧಿಸಿತು. ಈ ಆರು ಮಂದಿ ಜಿನ್​ಪಿಂಗ್​ರ ರಾಜಕೀಯ ವಿರೋಧಿ ಬಣದಲ್ಲಿದ್ದರು. ಕಮ್ಯುನಿಸ್ಟ್ ಸರ್ಕಾರ ದೇಶಾದ್ಯಂತ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ನಡೆಸುತ್ತಿದೆ. ಮಂತ್ರಿಗಳು ಮತ್ತು ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿದ್ದನ್ನು ವಿರೋಧಿ ಬಣ ಬಹುವಾಗಿ ಟೀಕಿಸಿ ಬಳಿಕ ಜಿನ್‌ಪಿಂಗ್ ಗೃಹಬಂಧನದ ಸುದ್ದಿಯನ್ನು ಹಬ್ಬಿಸಿತ್ತು.

ಓದಿ:ಹಿಜಾಬ್ ವಿರೋಧಿಸಿದ ಯುವತಿ ಹದಿಸ್ ನಜಾಫಿಗೆ ಗುಂಡಿಕ್ಕಿ ಕೊಲೆ

ABOUT THE AUTHOR

...view details