ಶೆಫೀಲ್ಡ್ (ಇಂಗ್ಲೆಂಡ್): ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಕಳೆದ 60 ವರ್ಷಗಳಲ್ಲಿ ಮೊದಲ ಬಾರಿಗೆ ಜನಸಂಖ್ಯೆಯಲ್ಲಿ ಕುಸಿತ ಉಂಟಾಗಿದೆ. ರಾಷ್ಟ್ರೀಯ ಜನನ ದರವು 1,000 ಜನರಿಗೆ 6.77 ಜನನಗಳ ದಾಖಲೆಯ ಕಡಿಮೆಯಾಗಿದೆ. ಇದು ಚೀನಾದ ಋಣಾತ್ಮಕ ಜನಸಂಖ್ಯೆ ಬೆಳವಣಿಗೆಯ ಯುಗವಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಕರೆದಿದ್ದಾರೆ.
ಚೀನಾದಲ್ಲಿ ಗ್ರೇಟ್ ಲೀಪ್ ಫಾರ್ವರ್ಡ್ ಎಂಬ ರಾಜಕೀಯ ಅಭಿಯಾನದಿಂದ ಉಂಟಾದ ಭೀಕರ ಕ್ಷಾಮದ ವರ್ಷಗಳನ್ನು (1959-61) ಹೊರತುಪಡಿಸಿ, ಕಳೆದ ದಶಕಗಳಿಂದಲೂ ಜನಸಂಖ್ಯೆಯು ವೇಗವಾಗಿ ಹೆಚ್ಚುತ್ತಲೇ ಇತ್ತು. ಹೀಗಾಗಿ 1970ರಲ್ಲಿ ಚೀನಾ ಸರ್ಕಾರವು ಅಧಿಕ ಜನಸಂಖ್ಯೆಯ ಭಯದಿಂದ ಕುಟುಂಬ ಯೋಜನೆಗಳನ್ನು ಪರಿಚಯಿಸಿತ್ತು. ಇದರ ಪರಿಣಾಮದಿಂದ ಚೀನಾದ ಜನಸಂಖ್ಯೆ ಬೆಳವಣಿಗೆಯಲ್ಲಿ ತ್ವರಿತವಾಗಿ ಕುಸಿಯಲು ಪ್ರಾರಂಭಿಸಿತ್ತು.
ಇದರಲ್ಲಿ ಅತ್ಯಂತ ದೂರಗಾಮಿ ಕ್ರಮವೆಂದರೆ 1980ರಲ್ಲಿ ಚೀನಾ ಅಳವಡಿಸಿಕೊಂಡ ಒಂದು ಮಗುವಿನ ನೀತಿ. ಅಂದರೆ ಪ್ರತಿ ಕುಟುಂಬದಲ್ಲಿ ಕೇವಲ ಒಂದು ಮಗುವಿಗೆ ಮಾತ್ರ ಇರುವಂತೆ ನೋಡಿಕೊಳ್ಳುವುದು. ಇದಕ್ಕೆ ಜನಾಂಗೀಯ ಅಲ್ಪಸಂಖ್ಯಾತರು, ಗ್ರಾಮೀಣ ಕುಟುಂಬಗಳಿಗೆ ಕೆಲವು ವಿನಾಯಿತಿಗಳನ್ನು ನೀಡಲಾಗಿತ್ತು. ಆದರೆ, ಈ ನೀತಿಯ ಅನುಗುಣವಾಗಿ ಚೀನಾದ ಜನಸಂಖ್ಯೆಯ ಬೆಳವಣಿಗೆಯ ದರವು ಹಲವು ದಶಕಗಳಿಂದ ನಿಯಂತ್ರಣಕ್ಕೆ ಬಂದಿತ್ತು. ಈಗ ಆರು ದಶಕಗಳಲ್ಲಿ ಮೊದಲ ಬಾರಿಗೆ ಜನಸಂಖ್ಯೆಯು ಕುಗ್ಗಲು ಪ್ರಾರಂಭಿಸಿದೆ.
ಕೆಲವು ಯಕ್ಷ ಪ್ರಶ್ನೆಗಳು: ಆದರೆ, ಚೀನಾದ ಜನಸಂಖ್ಯೆಯು ನಿಜವಾಗಿಯೂ ಉತ್ತುಂಗಕ್ಕೇರಿದೆಯೇ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಜೊತೆಗೆ ಈ ಜನಸಂಖ್ಯೆ ಕುಗ್ಗುವಿಕೆ ಯಾವಾಗ ಮತ್ತು ಎಷ್ಟು ವೇಗವಾಗಿರುತ್ತದೆ ಎಂಬುದು ಸ್ಪಷ್ಟವಾಗಿಲ್ಲ. 2022ರ ವಿಶ್ವಸಂಸ್ಥೆಯ ವಿಶ್ವ ಜನಸಂಖ್ಯೆ ನಿರೀಕ್ಷೆಗಳ ಪ್ರಕಾರ, ಚೀನಾದ ಜನಸಂಖ್ಯೆಯು 2030ರಲ್ಲಿ ಮಾತ್ರ ಕ್ಷೀಣಿಸಲು ಪ್ರಾರಂಭಿಸಲಿದೆ ಎಂಬ ಅಂದಾಜಿತ್ತು.
ಇತ್ತ, ಚೀನಾದ ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋ ಪ್ರಕಾರ, 2022ರ ಅಂತ್ಯದ ವೇಳೆಗೆ ದೇಶವು 141.17 ಕೋಟಿ ಜನರನ್ನು ಹೊಂದಿದೆ. ಇದರ ಒಂದು ವರ್ಷದ ಹಿಂದೆ 141.26 ಕೋಟಿ ಜನಸಂಖ್ಯೆ ಇತ್ತು. ಇದು ಚೀನಾ ಜನಸಂಖ್ಯೆ ಕುಸಿತ ಕುರಿತಾಗಿ ಚೀನಾ ನೀಡಿದ ಅಂಕಿ - ಅಂಶವಾಗಿದೆ. ಆದರೆ, ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯು ಚೀನಾದಲ್ಲಿ 144.85 ಕೋಟಿ ಜನಸಂಖ್ಯೆಯನ್ನು ಅಂದಾಜಿಸಿದೆ. ಮತ್ತೊಂದಡೆ ವಿಶ್ವ ಜನಸಂಖ್ಯೆಯ ವಿಮರ್ಶೆ ಪ್ರಕಾರ ಚೀನಾದ 142.6 ಕೋಟಿ ಜನಸಂಖ್ಯೆ ಇದೆ.
ಜನಸಂಖ್ಯೆಯ ಈ ಅಂಕಿ - ಅಂಶಗಳು ವ್ಯತ್ಯಾಸವು ವಿಭಿನ್ನ ಊಹೆಗಳು ಹಾಗೂ ದತ್ತಾಂಶ ಮೂಲಗಳನ್ನು ಆಧರಿಸಿದೆ. ಹೀಗಾಗಿ ಚೀನಾ ಕಾಲಾನಂತರದಲ್ಲಿ ಹೇಗೆ ಅಭಿವೃದ್ಧಿಗೊಳ್ಳುತ್ತದೆ ಎಂಬುವುದರ ಬಗ್ಗೆ ಚರ್ಚೆ ಆರಂಭವಾಗಿದೆ. ಆದ್ದರಿಂದ 2100ರ ವೇಳೆಗೆ ಚೀನಾದ ಜನಸಂಖ್ಯೆಯು ಅರ್ಧದಷ್ಟು ಕಡಿಮೆಯಾಗಲಿದೆ ಎಂಬ ಭವಿಷ್ಯವಾಣಿಗಳನ್ನು ಸ್ವಲ್ಪ ಎಚ್ಚರಿಕೆಯಿಂದ ಗಮನಿಸಬೇಕಾಗಿದೆ.
ಹೆಚ್ಚು ಮಕ್ಕಳನ್ನು ಹೊಂದಲು ಅವಕಾಶ: ಕೆಲ ದಶಕಗಳಿಂದ ಒಂದೇ ಕುಟುಂಬಕ್ಕೆ ಒಂದೇ ಮಗು ಎಂಬ ನೀತಿಯನ್ನು ಚೀನಾ ಸರ್ಕಾರವು ಸಡಿಲಗೊಳಿಸಿದೆ. ಒಂದು ಮಗುವಿನ ನೀತಿಯು ಚೀನಾದ ಜನನ ದರದಲ್ಲಿ ತ್ವರಿತ ಇಳಿಕೆಗೆ ಕಾರಣವಾದ ನಂತರ ಜನನ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. 2016ರಲ್ಲಿ ಪ್ರತಿ ಕುಟುಂಬಗಳಿಗೆ ಎರಡು ಮಕ್ಕಳು ಮತ್ತು ನಂತರ ಮೂರು ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಟ್ಟಿತ್ತು.