ಬೀಜಿಂಗ್: ಕಳೆದ ಮೂರು ವರ್ಷಗಳಿಂದ ಚೀನಾದಲ್ಲಿ ಮದುವೆ ಪ್ರಮಾಣ ಇಳಿಕೆ ಕಂಡಿದೆ. ಇದಕ್ಕೆ ಪ್ರಮುಖ ಕಾರಣ ನಿರುದ್ಯೋಗ. ಚೀನಾದಲ್ಲಿ ನಿರುದ್ಯೋಗ ದರ ನಿರಂತರ ಏರಿಕೆ ಕಾಣುತ್ತಿದೆ. ಇದರ ಜೊತೆಗೆ ಉದ್ಯೋಗ ವಜಾ, ಕಠಿಣ ಕೋವಿಡ್ ನಿಯಮಗಳು ಅಲ್ಲಿನ ಯುವ ಜನತೆ ಭವಿಷ್ಯದ ಕುಟುಂಬದ ಕನಸಿನ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಅವರು ಮದುವೆ ಮುಂದೂಡುತ್ತಿದ್ದಾರೆ ಎಂದು ವರದಿ ಹೇಳಿದೆ.
ಇನ್ನು ಈ ಕುರಿತು ಮಾತನಾಡಿರುವ ಟೆಕ್ ವರ್ಕ್ ಗ್ರೇಸ್ ಜಾಂಕ್, ತನಗೆ ಸ್ನೇಹಿತನಿದ್ದು, ಮದುವೆಯಾಗಬೇಕು ಎಂಬ ಯೋಚನೆ ಹೊಂದಿದ್ದೆ. ಕಳೆದೆರಡು ವರ್ಷಗಳ ಹಿಂದೆ ಕಠಿಣ ಕೋವಿಡ್ ನೀತಿಯನ್ನು ಶಾಂಘೈ ನಗರದಲ್ಲಿ ಹೇರಲಾಯಿತು. ಕಳೆದ ಡಿಸೆಂಬರ್ನಲ್ಲಿ ಈ ನಿಯಮವನ್ನು ಸಡಿಲಿಸಿದ ಬಳಿಕ ಕೊಂಚ ಸಕಾರಾತ್ಮಕತೆ ಕಂಡು ಬಂದಿತು. ಆದರೆ, ಇದೀಗ ಉದ್ಯೋಗ ವಜಾ ಪ್ರಕ್ರಿಯೆ ನಡೆಯುತ್ತಿದ್ದು, ತಮ್ಮ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ. ಭವಿಷ್ಯದ ಕುಟುಂಬಕ್ಕೆ ತನ್ನ ಕೆಲಸ ಸುರಕ್ಷಿತವೇ ಎಂಬ ಪ್ರಶ್ನೆ ಮೂಡುತ್ತಿದೆ. ಈ ರೀತಿಯ ಜೀವನದ ಅನಿಶ್ಚಿತತೆಗಳಿಂದ ಹೆದರುತ್ತಿದ್ದು, ಹೊಸ ಜೀವನದ ಆರಂಭಕ್ಕೆ ಆಲೋಚಿಸುವಂತೆ ಮಾಡುತ್ತಿದೆ ಎಂದಿದ್ದಾರೆ.
ಚೀನದಾದಲ್ಲಿ ಕಳೆದ 9 ವರ್ಷದಲ್ಲಿ ಮದುವೆ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಕಳೆದ ವರ್ಷ ಕೇವಲ 6.8 ಮಿಲಿಯನ್ ಜೋಡಿಗಳು ಮದುವೆಗೆ ದಾಖಲಾತಿ ನಡೆಸಿದ್ದು, 1986ಕ್ಕೆ ಹೋಲಿಸಿದಾಗ ಇದು ಅತ್ಯಂತ ಕಡಿಮೆ ದರವಾಗಿದೆ. 2023ರ ಹೊತ್ತಿಗೆ ಮದುವೆ ದಾಖಲೆ ಪ್ರಮುಖ ಏರಿಕೆ ಕಾಣುತ್ತಿದೆ ಎಂಬ ನಿರೀಕ್ಷೆ ಮೂಡಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 40,000 ಜೋಡಿಗಳು ಮದುವೆಯಾಗಿದ್ದಾರೆ. ಇದೇ ವೇಳೆ, ಮತ್ತೊಂದು ಕಾಳಜಿ ವಿಷಯ ಎಂದರೆ ವಿಚ್ಛೇದನವಾಗಿದ್ದು, 1,27,000 ಜನರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಸಾಧನೆಯ ಗುರಿಯತ್ತ ಯುವತಿಯರು: ಅಷ್ಟೇ ಅಲ್ಲದೇ, ಶಿಕ್ಷಣದ ವ್ಯವಸ್ಥೆ ಕೂಡ ಹುಡುಗಿಯರನ್ನು ಸಬಲೀಕರಣಗೊಳಿಸಿದೆ. ನಗರದಲ್ಲಿ ಮಹಿಳೆಯರು ಹೊಸ ಸಾಧನೆ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವ ಗುರಿ ಹೊಂದಿದ್ದಾರೆ. ಶಿಕ್ಷಣ, ಆರ್ಥಿಕ ಅಗತ್ಯತೆಗಳಿಗೆ ಹೋಲಿಕೆ ಮಾಡಿದಾಗ ಅವರಿಗೆ ಮದುವೆ ಪ್ರಾಮುಖ್ಯತೆ ಎನಿಸುತ್ತಿಲ್ಲ.