ಬೀಜಿಂಗ್ (ಚೀನಾ):ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ದೇಶಗಳಾದ ಚೀನಾ, ಇರಾನ್ ಮತ್ತು ರಷ್ಯಾ ದೇಶದ ನೌಕಾ ಪಡೆಗಳು ಈ ವಾರ ಓಮನ್ ಕೊಲ್ಲಿಯಲ್ಲಿ ಜಂಟಿ ಸಮರಾಭ್ಯಾಸ ನಡೆಸಲಿವೆ ಎಂದು ಚೀನಾದ ರಕ್ಷಣಾ ಸಚಿವಾಲಯ ಹೇಳಿದೆ.
ನೌಕಾಪಡೆಗಳ ನಡುವೆ ಪ್ರಾಯೋಗಿಕ ಸಹಕಾರ:ಸೆಕ್ಯುರಿಟಿ ಬಾಂಡ್-2023ರ ಸಮರಾಭ್ಯಾಸದ ಅಡಿ ಈ ದೇಶಗಳು ಪಾಲ್ಗೊಳ್ಳಲಿವೆ ಎಂದು ಸಚಿವಾಲಯ ತಿಳಿಸಿದೆ. ಇರಾನ್, ಪಾಕಿಸ್ತಾನ, ಓಮನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪರ್ಷಿಯನ್ ಕೊಲ್ಲಿಯ ಮುಖಭಾಗದ ಉದ್ದಕ್ಕೂ ಕರಾವಳಿ ಪ್ರದೇಶ ಹೊಂದಿವೆ. ಈ ವ್ಯಾಯಾಮದಲ್ಲಿ ಭಾಗವಹಿಸುವ ಈ ದೇಶಗಳ ನೌಕಾಪಡೆಗಳ ನಡುವಿನ ಪ್ರಾಯೋಗಿಕ ಸಹಕಾರವನ್ನು ಗಾಢವಾಗಿಸಲು ಸಹಾಯಕಾರಿಯಾಗಲಿದೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಧನಾತ್ಮಕ ಶಕ್ತಿ ತುಂಬುತ್ತದೆ ಎಂದು ಸಚಿವಾಲಯ ಹೇಳಿಕೆ ಕೊಟ್ಟದೆ.
ರಷ್ಯಾದ ಮೇಲೆ ಶಿಕ್ಷಾರ್ಹ ಆರ್ಥಿಕ ನಿರ್ಬಂಧ:ಬುಧವಾರದಿಂದ ಭಾನುವಾರದವರೆಗೆ ನಿಗದಿಪಡಿಸಲಾದ ಈ ವ್ಯಾಯಾಮಗಳು, ಉಕ್ರೇನ್‌ನ ಮೇಲಿನ ಆಕ್ರಮಣದ ಬಗ್ಗೆ ಮಾಸ್ಕೋವನ್ನು ಟೀಕಿಸಲು ಚೀನಾ ನಿರಾಕರಿಸುವ ಸಾಧ್ಯತೆಯಿದೆ. ರಷ್ಯಾದ ಆರ್ಥಿಕತೆಗೆ ನಿರಂತರ ಬೆಂಬಲ ಸೇರಿದಂತೆ ಹಲವಾರು ವಿಷಯಗಳ ಕುರಿತು ಯುಎಸ್ ಮತ್ತು ಚೀನಾ ನಡುವಿನ ಉದ್ವಿಗ್ನತೆ ಎದುರಾಗಲಿದೆ. ಈಗಾಗಲೇ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಆಕ್ರಮಣವನ್ನು ಖಂಡಿಸಿವೆ. ರಷ್ಯಾದ ಮೇಲೆ ಶಿಕ್ಷಾರ್ಹ ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ. ಅಷ್ಟೇ ಅಲ್ಲ ರಕ್ಷಣಾತ್ಮಕ ಶಸ್ತ್ರಾಸ್ತ್ರಗಳನ್ನು ಉಕ್ರೇನ್ಗೆ ರವಾನಿಸಿ, ಆ ರಾಷ್ಟ್ರದ ಪರ ನಿಂತಿವೆ. ಇದೇ ಕಾರಣದಿಂದ ಯುದ್ಧ ಆರಂಭವಾಗಿ ವರ್ಷ ಪೂರೈಸಿದರೂ ನಿಲ್ಲುವ ಲಕ್ಷಣಗಳು ಕಂಡು ಬರುತ್ತಿಲ್ಲ.