ಬೀಜಿಂಗ್: ಚೀನಾದ ಹೆನಾನ್ ಪ್ರಾಂತ್ಯದಲ್ಲಿ ಬರ್ಡ್ ಫ್ಲೂ ಕಾಣಿಸಿಕೊಂಡಿದ್ದು, ಮೊದಲ ಮಾನವ ಸೋಂಕು ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಈ ಮಾಹಿತಿ ನೀಡಿದ್ದು, ಈ ಸೋಂಕು ಮಾನವನ ಮೇಲೆ ಅಷ್ಟೊಂದು ಪ್ರಭಾವ ಬೀರುವುದಿಲ್ಲ ಎಂದು ಎನ್‌ಎಚ್‌ಸಿ ತಿಳಿಸಿದೆ ಎಂದು ವರದಿಯಾಗಿದೆ.
ಜ್ವರ ಸೇರಿದಂತೆ ಹಲವು ರೋಗಲಕ್ಷಣಗಳನ್ನು ಹೊಂದಿದ್ದ ಬಾಲಕನಿಗೆ ಈ ಸೋಂಕು ತಗುಲಿರುವುದು ಕಂಡುಬಂದಿದೆ. NHC ಹೇಳಿಕೆ ಪ್ರಕಾರ, ಬಾಲಕನೊಂದಿಗೆ ನಿಕಟ ಸಂಪರ್ಕದಲ್ಲಿದ್ದವರಿಗೆ ಸೋಂಕು ತಗುಲಿಲ್ಲ ಎಂದು ಹೇಳಲಾಗಿದೆ.