ನವದೆಹಲಿ:ಚೀನಾದಲ್ಲಿ ಕೊರೊನಾ ಅಟ್ಟಹಾಸ ಮೇರೆ ಮೀರಿದೆ ಎಂದು ವರದಿಯಾಗುತ್ತಿದೆ. ಒಂದೇ ದಿನದಲ್ಲಿ ಸುಮಾರು 37 ಮಿಲಿಯನ್ ಜನರು ಅಂದರೆ 3 ಕೋಟಿಗೂ ಹೆಚ್ಚಿನ ಮಂದಿ ಕೋವಿಡ್ -19 ಸೋಂಕಿಗೆ ಒಳಗಾಗಿರಬಹುದು ಸರ್ಕಾರದ ಉನ್ನತ ಆರೋಗ್ಯ ಪ್ರಾಧಿಕಾರದ ಅಂದಾಜು ಮಾಡಿದೆ. ಇದು ವಿಶ್ವದ ಅತಿದೊಡ್ಡ ಸೋಂಕಿನ ಸಂಖ್ಯೆ ಆಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಆಂತರಿಕ ಸಭೆಯಲ್ಲಿ ನಡೆದ ವಿಷಯಗಳ ಪ್ರಕಾರ, 248( 24ಕೋಟಿ) ಮಿಲಿಯನ್ ಜನರು ಅಥವಾ ಜನಸಂಖ್ಯೆಯ ಸುಮಾರು 18 ಪ್ರತಿಶತದಷ್ಟು ಜನರು ವೈರಸ್‌ಗೆ ತುತ್ತಾಗುವ ಇಲ್ಲವೇ ತುತ್ತಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಈ ವಾರಾಂತ್ಯದಲ್ಲಿ ಯಾವುದೇ ರೋಗಲಕ್ಷಣಗಳು ಇಲ್ಲದವರು ಕೆಲಸಕ್ಕೆ ಹೋಗಬಹುದು ಎಂದು ಝೆಜಿಯಾಂಗ್ ಪ್ರಾಂತ್ಯದ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಚೀನಾದ ಅತಿದೊಡ್ಡ ನಗರಗಳಲ್ಲಿ ಒಂದಾದ ಮತ್ತು ಪ್ರಮುಖ ಉತ್ಪಾದನಾ ಕೇಂದ್ರವಾದ ಚಾಂಗ್‌ಕಿಂಗ್ ಒಂದು ಹೆಜ್ಜೆ ಮುಂದೆ ಹೋಗಿದ್ದು, ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವವರಿಗೂ ಪರೀಕ್ಷೆಯಿಲ್ಲದೇ ಕಚೇರಿಗೆ ಮರಳಲು ಅವಕಾಶ ಮಾಡಿಕೊಟ್ಟಿದೆ.