ಕರ್ನಾಟಕ

karnataka

ETV Bharat / international

ಹೊಸ ಕಾನೂನಿಗೆ ಉದ್ಯಮಿಗಳು ತತ್ತರ.. ಪುರುಷರಿಗೆ ಯುವತಿಯರ ಡ್ರೆಸ್​ ಹಾಕಿ ಜಾಹೀರಾತು ಕ್ರಿಯೇಟ್​!

ಚೀನಾದಲ್ಲಿ ಹೊಸ ಕಾನೂನಿಗೆ ಅಂಡರ್​ ಗಾರ್ಮೆಂಟ್ಸ್​ ಉದ್ಯಮಿಗಳು ತತ್ತರ.. ಪುರುಷರಿಗೆ ಯುವತಿಯರ ಡ್ರೆಸ್​ ಹಾಕಿ ಜಾಹೀರಾತು.. ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿರುವ ವಿಡಿಯೋಗಳು

china banned women from modeling lingerie  men are doing modeling  banned women from modeling lingerie  ಹೊಸ ಕಾನೂನಿಗೆ ಉದ್ಯಮಿಗಳು ತತ್ತರ  ಪುರಷರಿಗೆ ಯುವತಿ ಡ್ರೆಸ್​ ಹಾಕಿ ಜಾಹೀರಾತು  ಅಂಡರ್​ ಗಾರ್ಮೆಂಟ್ಸ್​ ಉದ್ಯಮಿಗಳು ತತ್ತರ  ಹೊಸ ಕಾನೂನು ಆದೇಶ  ಯುವತಿಯರೊಂದಿಗೆ ಜಾಹೀರಾತು ಮಾಡುವುದನ್ನು ಚೀನಾ ನಿಷೇಧ
ಹೊಸ ಕಾನೂನಿಗೆ ಉದ್ಯಮಿಗಳು ತತ್ತರ

By

Published : Mar 4, 2023, 1:05 PM IST

ಬೀಜಿಂಗ್(ಚೀನಾ):ಚೀನಾ ಮಹಿಳೆಯರಿಗೆ ಒಳ ಉಡುಪು ಮಾಡೆಲಿಂಗ್ ಮಾಡುವುದನ್ನು ನಿಷೇಧಿಸಿದೆ. ಹೀಗಾಗಿ ಅಲ್ಲಿ ಬಹಳ ವಿಚಿತ್ರ ದೃಶ್ಯಗಳು ಕಂಡುಬರುತ್ತಿವೆ. ಈಗ ಮಹಿಳೆಯರ ಒಳಉಡುಪುಗಳನ್ನು ಧರಿಸುವ ಮೂಲಕ ಪುರುಷರು ರೂಪದರ್ಶಿಗಳಾಗಿ ಮಿಂಚುತ್ತಿದ್ದಾರೆ.

ಆನ್‌ಲೈನ್‌ನಲ್ಲಿ ಒಳ ಉಡುಪುಗಳನ್ನು ಯುವತಿಯರೊಂದಿಗೆ ಜಾಹೀರಾತು ಮಾಡುವುದನ್ನು ಚೀನಾ ನಿಷೇಧಿಸಿರುವ ಹಿನ್ನೆಲೆ ಆನ್‌ಲೈನ್ ವ್ಯಾಪಾರ ನಿರ್ವಾಹಕರು ಹೊಸ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ. ಪ್ರಚಾರದ ವಿಡಿಯೋಗಳಲ್ಲಿ ಯುವತಿಯರ ಬದಲಿಗೆ ಹುಡುಗರಿಗೆ ಹುಡುಗಿಯರ ಒಳ ಉಡುಪುಗಳನ್ನು ಹಾಕಿಸಿ ಚಿತ್ರಿಸಲಾಗಿದೆ. ಆ ವಿಡಿಯೋಗಳು ಆನ್‌ಲೈನ್‌ನಲ್ಲಿ ಪೋಸ್ಟ್ ಜೊತೆಗೆ ಭರ್ಜರಿ ಪ್ರಚಾರ ಸಹ ಪಡೆಯುತ್ತಿರುವುದು ವಿಶೇಷ.

ಆಂಗ್ಲ ಪತ್ರಿಕೆಯೊಂದರ ಪ್ರಕಾರ, ಹುಡುಗಿಯರ ಉಪಸ್ಥಿತಿಯಿಂದ ಅಶ್ಲೀಲತೆ ಹೆಚ್ಚಾಗುವ ಉದ್ದೇಶದಿಂದ ಚೀನಾ ಸರ್ಕಾರವು ಒಳ ಉಡುಪುಗಳ ಆನ್‌ಲೈನ್ ಜಾಹೀರಾತುಗಳನ್ನು ನಿಷೇಧಿಸಿದೆ. ಯಾವುದೇ ಸಂದರ್ಭದಲ್ಲೂ ಆನ್‌ಲೈನ್ ಅಭಿಯಾನಕ್ಕೆ ಮಹಿಳೆಯರನ್ನು ಬಳಸಿಕೊಳ್ಳದಂತೆ ಆದೇಶ ಹೊರಡಿಸಿದೆ. ಇದಕ್ಕಾಗಿ ವಿಶೇಷ ಕಾನೂನು ಸಹ ತರಲಾಗಿದೆ.

ಹೊಸ ಕಾನೂನಿಗೆ ಉದ್ಯಮಿಗಳು ತತ್ತರ

ಹೊಸ ಆದೇಶದಿಂದ ಆನ್‌ಲೈನ್ ವ್ಯವಹಾರ ನಡೆಸುವವರು ಭಾರೀ ನಷ್ಟ ಅನುಭವಿಸಬೇಕಾಯಿತು. ಇದನ್ನು ಹೋಗಲಾಡಿಸಲು ಕೆಲವು ಆನ್‌ಲೈನ್ ಏಜೆನ್ಸಿಗಳು ಹುಡುಗಿಯರ ಬದಲು ಹುಡುಗರನ್ನು ನೇಮಿಸಿ ಅವರೊಂದಿಗೆ ಮಾಡೆಲಿಂಗ್ ಮಾಡುತ್ತವೆ. ಸ್ವಲ್ಪ ಮಟ್ಟಿಗೆ ಇದು ಉತ್ತಮ ಫಲಿತಾಂಶವನ್ನು ನೀಡಿತು ಮತ್ತು ಇತರರು ಅದೇ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಪುರುಷ ಮಾಡೆಲ್‌ಗಳು ಹುಡುಗಿಯರ ಒಳಉಡುಪು ಧರಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಇದನ್ನು ನೋಡಿ ಹೌಹಾರುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿವಿಧ ಕಾಮೆಂಟ್‌ಗಳು ಹರಿದು ಬರುತ್ತಿವೆ ಎಂದು ಆಂಗ್ಲ ಪತ್ರಿಕೆಯಲ್ಲಿ ಹೇಳಲಾಗಿದೆ. ಆ ವಿಡಿಯೋದಲ್ಲಿ ಮಹಿಳಾ ಮಾಡೆಲ್ ಇದ್ದಿದ್ದರೆ ಕಂಪನಿಯ ಪರಿಸ್ಥಿತಿಯೇ ಬೇರೆ ಇರುತ್ತಿತ್ತು. ಏಕೆಂದ್ರೆ ನೆಕ್ಸ್ಟ್​ ಮಿನಿಟ್​ಗೆ ಆ ಕಂಪನಿಯನ್ನು ಮುಚ್ಚಲಾಗುತ್ತಿತ್ತು. ಅದಕ್ಕಾಗಿಯೇ ಅವರು ಪುರುಷ ಮಾಡೆಲ್‌ಗಳ ಜೊತೆ ವಿಡಿಯೋ ಮಾಡುತ್ತಿದ್ದಾರೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ಹುಡುಗಿಯರಿಗಿಂತ ಹುಡುಗರು ಆ ಡ್ರೆಸ್ ಧರಿಸಿದರೆ ಉತ್ತಮ.. ಶೇಕ್ಸ್‌ಪಿಯರ್‌ನ ಕಾಲದಲ್ಲೂ ಮಹಿಳೆಯರಿಗೆ ಜಾಹೀರಾತುಗಳಲ್ಲಿ ನಟಿಸಲು ಅವಕಾಶವಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಹೊಸ ಕಾನೂನು ಆದೇಶಕ್ಕೆ ವ್ಯಾಪಾರಸ್ಥರು ಮಾಡಿದ್ದು ಹೀಗೆ:ಚೀನಾ ಯಾವಾಗಲೂ ತನ್ನ ದೇಶದಲ್ಲಿ ವಿವಿಧ ವಿಚಿತ್ರ ಕಾನೂನುಗಳನ್ನು ಪರಿಚಯಿಸುತ್ತಿರುತ್ತದೆ. ಒಳ ಉಡುಪುಗಳನ್ನು ಧರಿಸಿರುವ ಮಹಿಳಾ ಮಾಡೆಲ್‌ಗಳ ಆನ್‌ಲೈನ್ ಜಾಹೀರಾತುಗಳ ಪ್ರದರ್ಶನವನ್ನು ಚೀನಾ ನಿಷೇಧಿಸಿರುವುದು ಒಂದು ರೀತಿಯಲ್ಲಿ ಒಳ್ಳೆಯದು. ಆದ್ರೆ ಈಗ ಮಹಿಳಾ ಒಳ ಉಡುಪುಗಳನ್ನು ಮಾರಾಟ ಮಾಡುವ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಜಾಹೀರಾತು ಮಾಡಲು ತೊಂದರೆಗಳನ್ನು ಎದುರಿಸುತ್ತಿವೆ. ಹೊಸ ಕಾನೂನು ಆದೇಶಕ್ಕೆ ಪ್ರತಿಕ್ರಿಯೆಯಾಗಿ ಚೀನಿ ಲೈವ್‌ಸ್ಟ್ರೀಮ್ ಫ್ಯಾಷನ್ ಕಂಪನಿಗಳು ತಮ್ಮ ವಿಡಿಯೋಗಳಲ್ಲಿ ಪುರುಷ ಮಾಡೆಲ್‌ಗಳಿಗೆ ಹುಡುಗಿಯರ ಒಳಉಡುಪುಗಳನ್ನು ಧರಿಸಿ ತೋರಿಸಲು ಯೋಚಿಸಿದವು. ನಂತರ ಪುರುಷ ಮಾಡೆಲ್‌ಗಳು ಹುಡುಗಿಯರ ಒಳಉಡುಪುಗಳನ್ನು ಧರಿಸಿರುವುದು ಕಂಡುಬಂತು.

ಓದಿ:ಒಳ ಉಡುಪು ಧರಿಸದೇ ಮಲಗುವುದು ಪ್ರಯೋಜನಕಾರಿ... ಯಾಕೆ ಗೊತ್ತಾ?

ABOUT THE AUTHOR

...view details