ವಿಧಿಲಿಖಿತ ಮತ್ತು ಆತ್ಮಸ್ಥೈರ್ಯ ಒಗ್ಗೂಡಿದರೆ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಅಮೆರಿಕಾದ ಚಿಕಾಗೋ ವ್ಯಕ್ತಿಯೇ ಮಾದರಿ. ಓಟೋಫೇಶಿಯಲ್ ಸಿಂಡ್ರೋಮ್ಗೆ ತುತ್ತಾದ ದವಡೆಗಳಿಲ್ಲದೇ ಜನಿಸಿದ ಜೋಸೆಫ್ ವಿಲಿಯಮ್ಸ್ ಎಂಬಾತ ನೋಡಲು ಕುರೂಪಿಯಂತೆ ಕಂಡರೂ ಸುಂದರವಾದ ಹೆಂಡತಿಯನ್ನು ಪಡೆದುಕೊಂಡಿದ್ದಾರೆ. ಇವರ ಜೀವನದ ಕತೆ ಈಗ ವೈರಲ್ ಆಗಿದೆ.
ಜೋಸೆಫ್ ವಿಲಿಯಮ್ಸನ್ಗೆ ಅಪರೂಪದ ಕಾಯಿಲೆಯಾದ ಓಟೋಫೇಶಿಯಲ್ ಸಿಂಡ್ರೋಮ್ ದಾಳಿಯಿಂದಾಗಿ ದವಡೆಗಳಿಲ್ಲದೇ ಜನಿಸಿದ್ದ. ಇದರಿಂದ ಈತ ಮಾತನಾಡಲು, ತಿನ್ನಲು, ಉಸಿರಾಡಲೂ ಕಷ್ಟವಾಗಿತ್ತು. ಚಿಕಿತ್ಸೆಯ ಬಳಿಕ ಈತ ನಳಿಕೆಯ ಸಹಾಯದಿಂದ ಉಸಿರಾಟ, ಊಟ ಸೇವಿಸುತ್ತಿದ್ದಾನೆ.
ಅಪರೂಪದ ಜನ್ಮಜಾತನಾದ ಜೋಸೆಫ್ಗೆ ಈಗ 41 ವರ್ಷ. ಒಂಟಿಯಾಗಿ ಇಡೀ ಜೀವನ ಕಳೆಯಬೇಕಿದ್ದ ಈತನಿಗೆ ವಿಧಿಲಿಖಿತ ಬೇರೆಯದೇ ಹಾದಿ ತೋರಿಸಿದೆ. ನೋಡಲು ಕುರೂಪಿಯಂತೆ ಕಾಣುವ ಈತನನ್ನು ಸುಂದರವಾದ ಯುವತಿಯೊಬ್ಬಳು ವಿವಾಹವಾಗಿದ್ದಾರೆ.
ಸುಂದರಿ ವಾನಿಯಾ ಕೈಹಿಡಿದ ಜೋಸೆಫ್ :2020ರಲ್ಲಿ ವಾನಿಯಾ ಎಂಬಾಕೆಯನ್ನು ವಿವಾಹವಾದ ಈತ ಒಂದು ವರ್ಷ ಡೇಟಿಂಗ್ ಮಾಡಿದ್ದನಂತೆ. ಡೇಟಿಂಗ್ ನನಗೆ ಕಷ್ಟಕರವಾಗಿತ್ತು. ಏಕೆಂದರೆ, ನಾನು ಅಸಹಜ ವ್ಯಕ್ತಿಯಾಗಿದ್ದು, ನಿಷ್ಪ್ರಯೋಜಕನೆಂದು ಭಾವಿಸಿದ್ದೆ. ಬಳಿಕ ನನ್ನ ಹೆಂಡತಿಯಾಗಿ ವಾನಿಯಾ ಒಪ್ಪಿದ ಬಳಿಕ ನನ್ನಲ್ಲಿ ನಂಬಿಕೆ, ಆತ್ಮವಿಶ್ವಾಸ ಮೂಡಿತು ಎಂದು ಹೇಳಿಕೊಂಡಿದ್ದಾನೆ.