ಚೆನ್ನೈ (ತಮಿಳುನಾಡು):ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಚಂದ್ರಯಾನ-2 ಮಿಷನ್ ನಿರ್ದೇಶಕ ಮಾಯಿಲ್ಸಾಮಿ ಅಣ್ಣಾದೊರೈ ಮತ್ತು ಚಂದ್ರಯಾನ-3 ಯೋಜನಾ ನಿರ್ದೇಶಕ ವೀರಮುತ್ತುವೇಲ್ ಪಿ ಅವರು ತಮಿಳುನಾಡಿನ ವ್ಯಕ್ತಿಗಳು ಇಸ್ರೋ ಕಾರ್ಯಾಚರಣೆಗಳಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಇದರೊಂದಿಗೆ ತಮಿಳುನಾಡಿನ ಮಣ್ಣು ಕೂಡಾ ಚಂದ್ರಯಾನ-3 ಮಿಷನ್‌ಗೆ ಕೊಡುಗೆ ನೀಡಿದೆ.
ಚಂದ್ರನ ಮೇಲ್ಮೈಯಲ್ಲಿರುವ ಮಣ್ಣಿನ ಗುಣಲಕ್ಷಣಗಳನ್ನು ಹೋಲುತ್ತೆ ನಾಮಕ್ಕಲ್ನ ಮಣ್ಣು:2012 ರಿಂದ, ತಮಿಳುನಾಡು ರಾಜಧಾನಿ ಚೆನ್ನೈನಿಂದ ಸುಮಾರು 400 ಕಿಮೀ ದೂರದಲ್ಲಿರುವ ನಾಮಕ್ಕಲ್, ಆ ಜಿಲ್ಲೆಯ ಭೂಮಿಯು ಚಂದ್ರನ ಮೇಲ್ಮೈಯನ್ನು ಹೋಲುವುದರಿಂದ, ಚಂದ್ರಯಾನ ಮಿಷನ್ ಸಾಮರ್ಥ್ಯದ ಪರೀಕ್ಷೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ(ಇಸ್ರೋ) ಮಣ್ಣನ್ನು ಪೂರೈಸಿದೆ. ನಾಮಕ್ಕಲ್ ಮಣ್ಣಿನ ಗುಣಲಕ್ಷಣಗಳು ಒಂದೇ ಆಗಿರುವುದರಿಂದ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯಲು ಲ್ಯಾಂಡರ್ ಮಾಡ್ಯೂಲ್‌ನ ಸಾಮರ್ಥ್ಯವನ್ನು ಪರೀಕ್ಷಿಸಲು ಮತ್ತು ಪರಿಷ್ಕರಿಸಲು ಇದು ಇಸ್ರೋಗೆ ಸಹಾಯಕವಾಗಿದೆ.
ಇಸ್ರೋಗೆ ಮೂರು ಮಣ್ಣನ್ನು ಪೂರೈಸಿದ ತಮಿಳುನಾಡು:ಆದ್ದರಿಂದ ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲೆ ಯಶಸ್ವಿಯಾಗಿ ಮೃದುವಾಗಿ ಇಳಿಯುವ ಉದ್ದೇಶವನ್ನು ಸಾಧಿಸಿದರೆ, ಅದು ತಮಿಳುನಾಡು ರಾಜ್ಯಕ್ಕೂ ಹೆಚ್ಚು ಖುಷಿಯನ್ನು ನೀಡುತ್ತದೆ. ದಕ್ಷಿಣ ರಾಜ್ಯವು ತನ್ನ ಮಹತ್ವಾಕಾಂಕ್ಷೆಯ ಚಂದ್ರನ ಮಿಷನ್‌ಗಳಿಗೆ ಪರೀಕ್ಷೆಗಳನ್ನು ನಡೆಸಲು ಬೆಂಗಳೂರು ಕೇಂದ್ರ ಕಚೇರಿಯ ಇಸ್ರೋಗೆ ಅಗತ್ಯವಾದ ಮಣ್ಣನ್ನು ಪೂರೈಸುತ್ತಿರುವುದು ಇದು ಮೂರನೇ ಬಾರಿಯಾಗಿದೆ.
ಪ್ರೊಫೆಸರ್ ಎಸ್. ಅನ್ಬಳಗನ್ ಮಾಹಿತಿ:ಪೆರಿಯಾರ್ ವಿಶ್ವವಿದ್ಯಾನಿಲಯದ ಭೂವಿಜ್ಞಾನ ವಿಭಾಗದ ನಿರ್ದೇಶಕ, ಪ್ರೊಫೆಸರ್ ಎಸ್ ಅನ್ಬಳಗನ್ ಅವರು, ''ನಾಮಕ್ಕಲ್ ಪ್ರದೇಶದಲ್ಲಿ ಮಣ್ಣು ಹೇರಳವಾಗಿ ಲಭ್ಯವಿದ್ದು, ಇಸ್ರೋಗೆ ಅಗತ್ಯವಿರುವ ಸಂದರ್ಭಕ್ಕೆ ಮಣ್ಣನ್ನು ಕಳುಹಿಸಿ ಕೊಡಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ. ‘ನಾವು ಭೂವಿಜ್ಞಾನದಲ್ಲಿ ಸಂಶೋಧನೆ ನಡೆಸುತ್ತಿದ್ದೇವೆ. ತಮಿಳುನಾಡು ಚಂದ್ರನ ಮೇಲ್ಮೈಯಲ್ಲಿ ಇರುವಂತಹ ಮಣ್ಣನ್ನು ಹೊಂದಿದೆ. ವಿಶೇಷವಾಗಿ ದಕ್ಷಿಣ ಧ್ರುವದಲ್ಲಿರುವ (ಚಂದ್ರನ) ಮಣ್ಣನ್ನು ಹೋಲುತ್ತದೆ. ಚಂದ್ರನ ಮೇಲ್ಮೈಯು 'ಅನಾರ್ತೊಸೈಟ್' ಮಣ್ಣಿನ ಪ್ರಕಾರವಾಗಿದೆ. ಚಂದ್ರ ಪರಿಶೋಧನಾ ಕಾರ್ಯಕ್ರಮವನ್ನು ಘೋಷಿಸಿದ ಕೂಡಲೇ ನಾವು ಇಸ್ರೋಗೆ ಮಣ್ಣನ್ನು ಕಳುಹಿಸಿಕೊಟ್ಟಿದ್ದೇವೆ'' ಎಂದು ಪ್ರೊಫೆಸರ್ ಎಸ್. ಅನ್ಬಳಗನ್ ಹೇಳಿದ್ದಾರೆ.