ಕರ್ನಾಟಕ

karnataka

ETV Bharat / international

ಬಿರುಗಾಳಿಯ ಹೊಡೆತಕ್ಕೆ ಸರಕು ಸಾಗಣೆ ಹಡಗು ಮುಳುಗಡೆ​: ಓರ್ವ ಸಾವು, ಭಾರತೀಯರು ಸೇರಿ 12 ಮಂದಿ ನಾಪತ್ತೆ - Cargo Ship Sinks Greece

Cargo ship sinks in Greece Island: ಗ್ರೀಸ್ ಕರಾವಳಿಯಲ್ಲಿ ಸರಕು ಸಾಗಣೆ ಹಡಗು ಮುಳುಗಿದೆ. ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ನಾಲ್ವರು ಭಾರತೀಯರೂ ಸೇರಿದಂತೆ ಹಲವರು ನಾಪತ್ತೆಯಾಗಿದ್ದಾರೆ.

12 crew members are missing  12 crew members are missing  Greek island in stormy seas  ಸಮುದ್ರದ ಬಿರುಗಾಳಿ  ಬಿರುಗಾಳಿ ಹೊಡೆತಕ್ಕೆ ಮುಳುಗಿದ ಕಾರ್ಗೋ ಶಿಪ್  ಭಾರತೀಯರು ಸೇರಿ 12 ಸಿಬ್ಬಂದಿ ನಾಪತ್ತೆ  Cargo Ship Sinks Greece  ರಕು ಸಾಗಣೆ ಹಡಗು ಮುಳುಗಿ
ಭಾರತೀಯರು ಸೇರಿ 12 ಸಿಬ್ಬಂದಿ ನಾಪತ್ತೆ

By PTI

Published : Nov 27, 2023, 7:19 AM IST

Updated : Nov 27, 2023, 5:13 PM IST

ಅಥೆನ್ಸ್: ಗ್ರೀಸ್ ದ್ವೀಪ ಲೆಸ್ಬೋಸ್‌ನಲ್ಲಿ ಸರಕು ಸಾಗಣೆ ಹಡಗು ಮುಳುಗಿದ್ದು, ನಾಲ್ವರು ಭಾರತೀಯರು ಸೇರಿದಂತೆ 12 ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಹಡಗಿನಲ್ಲಿ ನಾಲ್ವರು ಭಾರತೀಯರು, ಇಬ್ಬರು ಸಿರಿಯಾ ಮತ್ತು ಎಂಟು ಮಂದಿ ಈಜಿಪ್ಟ್‌ ದೇಶದವರು ಸೇರಿ 14 ಮಂದಿ ಸಿಬ್ಬಂದಿ ಇದ್ದರು. ದುರಂತದಲ್ಲಿ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರನ್ನು ರಕ್ಷಿಸಲಾಗಿದೆ. ಸಮುದ್ರದಲ್ಲಿ ಉಂಟಾದ ಪ್ರಕ್ಷುಬ್ಧ ವಾತಾವರಣದಿಂದಾಗಿ ಈ ಹಡಗು​ ಮುಳುಗಿದೆ ಎಂದು ತಿಳಿದುಬಂದಿದೆ.

ಘಟನೆಯ ವಿವರ: ರಾಪ್ಟರ್ ಹೆಸರಿನ ಹಡಗು ಈಜಿಪ್ಟ್‌ನ ಅಲೆಕ್ಸಾಂಡ್ರಿಯಾದಿಂದ 6 ಸಾವಿರ ಟನ್ ಉಪ್ಪು ಹೊತ್ತು ಟರ್ಕಿಯ ಇಸ್ತಾನ್‌ಬುಲ್‌ಗೆ ಸಂಚರಿಸುತ್ತಿತ್ತು. ಮಾರ್ಗಮಧ್ಯೆ ಭಾನುವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸಿಬ್ಬಂದಿ, ತಕ್ಷಣ ಸಮೀಪದ ಕೇಂದ್ರಕ್ಕೆ ಸಂಕಷ್ಟದ ಸೂಚನೆ ರವಾನಿಸಿದರು. ಸ್ವಲ್ಪ ಸಮಯದ ನಂತರ, ಬೆಳಗ್ಗೆ 8.20ರ ಸುಮಾರಿಗೆ ರಕ್ಷಣಾ ಕಾರ್ಯಕ್ಕೆ ತಂಡಗಳು ಆಗಮಿಸಿದ್ದವು. ಅಷ್ಟೊತ್ತಿಗಾಗಲೇ ಹಡಗು ಕಾಣೆಯಾಗಿತ್ತು ಎಂದು ಸ್ಥಳೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಎರಡು ಹೆಲಿಕಾಪ್ಟರ್‌ ಸೇರಿದಂತೆ ಎಂಟು ಹಡಗುಗಳು ಮತ್ತು ಗ್ರೀಸ್‌ನ ಒಂದು ಯುದ್ಧನೌಕೆ ಶೋಧ ಕಾರ್ಯ ನಡೆಸುತ್ತಿದೆ. ಒಬ್ಬ ಈಜಿಪ್ಟ್ ಪ್ರಜೆಯನ್ನು ರಕ್ಷಿಸಲಾಗಿದೆ. ಬಲವಾದ ಗಾಳಿಯೊಂದಿಗೆ ಸಮುದ್ರದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯ ಕಷ್ಟವಾಗಿದೆ ಎಂದು ರಕ್ಷಣಾ ತಂಡ ಹೇಳಿದೆ. ಈ ಪ್ರದೇಶದಲ್ಲಿ ಗಂಟೆಗೆ 80 ಕಿಮೀ (50 mph)ಗೂ ಹೆಚ್ಚಿನ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ರಾಷ್ಟ್ರೀಯ ಹವಾಮಾನ ಸೇವಾ ಇಲಾಖೆ ತಿಳಿಸಿದೆ.

ಇತ್ತೀಚಿಗೆ ಘಟನೆಗಳು:ಆಫ್ರಿಕಾ ದೇಶ ನೈಜೀರಿಯಾದಲ್ಲಿ ದೋಣಿ ಮುಳುಗಿ 17 ಜನರು ಸಾವನ್ನಪ್ಪಿದ ಘಟನೆ ಇತ್ತೀಚೆಗೆ ನಡೆದಿತ್ತು. ತಾರಾಬಾ ರಾಜ್ಯದ ಅರ್ಡೋ-ಕೋಲಾ ಜಿಲ್ಲೆಯಲ್ಲಿ ಘಟನೆ ನಡೆದಿತ್ತು. ನದಿಯಲ್ಲಿ ಪ್ರಯಾಣಿಸುತ್ತಿದ್ದಾಗ ದೋಣಿ ಇದ್ದಕ್ಕಿದ್ದಂತೆ ಪಲ್ಟಿಯಾಗಿತ್ತು. ಅಕ್ಬೋಬರ್​ ಕೊನೆಯ ವಾರದಲ್ಲಿ ನಡೆದ ಘಟನೆಯಲ್ಲಿ 70 ಮಂದಿ ನಾಪತ್ತೆಯಾಗಿದ್ದರು. ಈ ದೋಣಿ ದೇಶದ ಅತಿ ದೊಡ್ಡ ನದಿ ಬೆನ್ಯೂನಲ್ಲಿ ಸಂಚರಿಸುತ್ತಿತ್ತು. ಸ್ಥಳೀಯ ಮೀನು ಮಾರುಕಟ್ಟೆಯಿಂದ ವ್ಯಾಪಾರಿಗಳೊಂದಿಗೆ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿತ್ತು. ಇಂತಹದ್ದೇ ಘಟನೆಯೊಂದು ಬಿಹಾರದಮುಜಾಫರ್​ ಜಿಲ್ಲೆಯ ಬಾಗಮತಿ ನದಿಯಲ್ಲಿಯೂ ನಡೆದಿತ್ತು. ಮಕ್ಕಳು ಪ್ರಯಾಣಿಸುತ್ತಿದ್ದ ದೋಣಿ ಇದಾಗಿತ್ತು. 30 ಮಕ್ಕಳನ್ನು ಹೊತ್ತು ಸಾಗುತ್ತಿದ್ದ ದೋಣಿ ಹಠಾತ್ ಮುಳುಗಡೆಯಾಗಿದ್ದರಿಂದ ಹಲವರು ನಾಪತ್ತೆಯಾಗಿದ್ದರು.

ಇದನ್ನೂ ಓದಿ:ಕಾರವಾರ: ಎಂಜಿನ್ ವೈಫಲ್ಯದಿಂದ ಅಪಾಯಕ್ಕೆ ಸಿಲುಕಿದ್ದ ಹಡಗು.. 8 ವಿಜ್ಞಾನಿಗಳ ಸಹಿತ 36 ಮಂದಿ ರಕ್ಷಣೆ

ಇದನ್ನೂ ಓದಿ:ಹೌತಿ ಬಂಡುಕೋರರು 'ಗ್ಯಾಲಕ್ಸಿ ಲೀಡರ್‌ಶಿಪ್' ಹಡಗು​​ ಹೈಜಾಕ್ ಮಾಡಿದ್ದು ಹೇಗೆ? ಭಯಾನಕ ವಿಡಿಯೋ

Last Updated : Nov 27, 2023, 5:13 PM IST

ABOUT THE AUTHOR

...view details