ಕರ್ನಾಟಕ

karnataka

ETV Bharat / international

ಸಂಗಾತಿಯ ಒಪ್ಪಿಗೆಯಿಲ್ಲದೆ ಕಾಂಡೋಮ್ ತೆಗೆಯುವುದೂ ಲೈಂಗಿಕ ಅಪರಾಧ: ಕೆನಡಾ ಕೋರ್ಟ್​ - ETV Bharat kannada

ಗರ್ಭನಿರೋಧಕ ಮತ್ತು ಸುರಕ್ಷೆ ನೀಡುವ ಕಾಂಡೋಮ್​ ಅನ್ನು ಅನುಮತಿ ಇಲ್ಲದೇ ಮಹಿಳೆಯೊಂದಿಗೆ ಸಂಧಿಸಿದ ಪ್ರಕರಣದಲ್ಲಿ ವ್ಯಕ್ತಿಯನ್ನು ಆರೋಪಿ ಎಂದು ಪರಿಗಣಿಸಿ ಕೆನಡಾ ಉನ್ನತ ನ್ಯಾಯಾಲಯ ತೀರ್ಪು ನೀಡಿದೆ.

canadas-top-court-on-condom
ಕಾಂಡೋಮ್​ ಬಳಕೆ ಬಗ್ಗೆ ತೀರ್ಪು

By

Published : Jul 31, 2022, 10:05 AM IST

ಒಟ್ಟಾವಾ(ಕೆನಡಾ):ಸಂಗಾತಿಯ ಅನುಮತಿಯಿಲ್ಲದೇ ಸಂಭೋಗದ ವೇಳೆ ಕಾಂಡೋಮ್ ತೆಗೆಯುವುದೂ ಅಪರಾಧ ಎಂದು ಕೆನಡಾದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಲೈಂಗಿಕತೆಯ ವೇಳೆ ತಿಳಿಸದೇ ಕಾಂಡೋಮ್​ ತೆಗೆದು ತಾನು ಹೆಚ್​ಐವಿ ಸೋಂಕಿಗೆ ತುತ್ತಾಗುವಂತೆ ಮಾಡಿದ ವ್ಯಕ್ತಿಯೋರ್ವನ ವಿರುದ್ಧ ಮಹಿಳೆಯೋರ್ವಳು ನೀಡಿದ ದೂರಿನ ವಿಚಾರಣೆ ನಡೆಸಿದ ಕೋರ್ಟ್​ ಮಹತ್ವದ ತೀರ್ಪು ಪ್ರಕಟಿಸಿತು.

2017 ರಲ್ಲಿ ಆನ್‌ಲೈನ್‌ನಲ್ಲಿ ಪರಿಚಯವಾದ ಮಹಿಳೆ ಮತ್ತು ಪುರುಷ ತಾವು ಲೈಂಗಿಕವಾಗಿ ಹೊಂದಿಕೊಳ್ಳುತ್ತೇವೆಯೇ ಎಂಬುದನ್ನು ತಿಳಿಯಲು ಸಂದಿಸಿದ್ದಾರೆ. ಈ ಸಂದರ್ಭದಲ್ಲಿ ವ್ಯಕ್ತಿ ಕಾಂಡೋಮ್​ ಇಲ್ಲದೇ ಆಕೆಯೊಂದಿಗೆ ದೈಹಿಕ ಸಂಪರ್ಕ ಮಾಡಿದ್ದಾನೆ.

ಇದನ್ನು ಪ್ರಶ್ನಿಸಿದ ಮಹಿಳೆ ಆತನ ವಿರುದ್ಧ ಕೋರ್ಟ್​ನಲ್ಲಿ ದಾವೆ ಹೂಡಿದ್ದರು. ಕೆಳಹಂತದ ಕೋರ್ಟ್​ನಲ್ಲಿ ನಡೆದ ವಿಚಾರಣೆಯಲ್ಲಿ​, ಕಾಂಡೋಮ್​ ಇಲ್ಲದೆಯೂ ಲೈಂಗಿಕತೆಗೆ ಆಕೆ ಅನುಮತಿಸಿದ್ದಳು ಎಂದು ಆರೋಪಿ ವಾದಿಸಿದ್ದ. ಇದನ್ನು ಅಂಗೀಕರಿಸಿದ್ದ ಕೋರ್ಟ್​, ಪ್ರಕರಣವನ್ನು ವಜಾಗೊಳಿಸಿತ್ತು.

ಇದರ ವಿರುದ್ಧ ಸುಪ್ರೀಂ ಕೋರ್ಟ್​ ಮೆಟ್ಟಿಲು ಹತ್ತಿದ ಮಹಿಳೆ ಆತನ ತಪ್ಪಿನಿಂದಾಗಿ ತಾನೀಗ ಹೆಚ್​ಐವಿ ಸೋಂಕಿಗೆ ತುತ್ತಾಗಿದ್ದೇನೆ ಎಂದು ಮೇಲ್ಮನವಿ ಸಲ್ಲಿಸಿದ್ದಳು. ವಿಚಾರಣೆ ನಡೆಸಿದ ಕೋರ್ಟ್​, ಇಬ್ಬರ ವೈಯಕ್ತಿಕ ಕ್ರಿಯೆಯಲ್ಲಿ ಪುರುಷ ಮಹಿಳೆಗೆ ತಿಳಿಸದೇ ಕಾಂಡೋಮ್​ ತೆಗೆದಿರುವುದು ಸರಿಯಲ್ಲ. ಇದು ಆಕೆಯ ಅನುಮತಿಯನ್ನು ಪಡೆಯದೇ ಮಾಡಿರುವುದು ಅಪರಾಧ ಎಂದು ಹೇಳಿತು.

ಲೈಂಗಿಕ ಕ್ರಿಯೆಯು ಮೂಲಭೂತವಾಗಿ ಮತ್ತು ಗುಣಾತ್ಮಕವಾಗಿ ವಿಭಿನ್ನ ದೈಹಿಕ ಕ್ರಿಯೆ. ಇದು ಸುರಕ್ಷಿತ ವಿಧಾನವೂ ಹೌದು. ಇದನ್ನು ಮೀರಿ ಅನುಮತಿ ರಹಿತವಾಗಿ ಪಾಲ್ಗೊಂಡಿರುವುದು ಸರಿಯಲ್ಲ. ಇಲ್ಲಿ ಷರತ್ತು ಉಲ್ಲಂಘನೆಯಾಗಿದೆ ಎಂದು ಕೋರ್ಟ್​ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಬ್ರಿಟನ್ ಮತ್ತು ಸ್ವಿಟ್ಜರ್​ಲೆಂಡ್​ನ ಉನ್ನತ ನ್ಯಾಯಾಲಯಗಳು ಕೂಡ ಸಂಭೋಗದ ಸಮಯದಲ್ಲಿ ಕಾಂಡೋಮ್‌ಗಳನ್ನು ತೆಗೆದ ಪ್ರಕರಣದಲ್ಲಿ ಅಂಥವರನ್ನು 'ಅಪರಾಧಿಗಳು' ಎಂದು ತೀರ್ಪಿತ್ತಿರುವುದು ಇಲ್ಲಿ ಉಲ್ಲೇಖಾರ್ಹ.

ಇದನ್ನೂ ಓದಿ:ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌: ಓರ್ವ ಎಲ್‌ಇಟಿ ಉಗ್ರನ ಹತ್ಯೆ

ABOUT THE AUTHOR

...view details