ಒಟ್ಟಾವಾ:ಕೆನಡಾದಲ್ಲಿ ಕೋವಿಡ್ ಲಸಿಕೆ ಪಡೆಯಲು ಜನರು ನಿರಾಕರಣೆ ಮತ್ತು ಹೊರದೇಶಗಳಿಂದ ಬೇಡಿಕೆ ಬಾರದ ಕಾರಣ ದಾಸ್ತಾನಿಟ್ಟಿದ್ದ 1.30 ಕೋಟಿಗೂ ಅಧಿಕ ಡೋಸ್ ಆಸ್ಟ್ರಾಜೆನಿಕಾ ಲಸಿಕೆಯ ಅವಧಿ ಮುಗಿದು ವ್ಯರ್ಥವಾಗಿದೆ. ಇದನ್ನು ನಾಶ ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ.
ಕೊರೊನಾ ವೇಳೆ ಕೆನಡಾ ಸರ್ಕಾರ ಆಕ್ಸ್‌ಫರ್ಡ್-ಆಸ್ಟ್ರಾಜೆನಿಕಾ ಕಂಪನಿಯೊಂದಿಗೆ 20 ಮಿಲಿಯನ್ ಡೋಸ್ ಲಸಿಕೆ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ 2.3 ಮಿಲಿಯನ್ ಡೋಸ್ ಲಸಿಕೆಯನ್ನು ಮೊದಲ ಡೋಸ್ ಆಗಿ ಕಳೆದ ವರ್ಷದ ಜೂನ್ ಅಂತ್ಯದ ವೇಳೆಗೆ ಪಡೆದುಕೊಂಡಿದ್ದಾರೆ. ಇನ್ನುಳಿದ ಲಸಿಕೆ ಹಾಗೆಯೇ ದಾಸ್ತಾನಿಡಲಾಗಿದ್ದು, ಇದೀಗ ಅವಧಿ ಮೀರಿ ಹಾಳಾಗಿದೆ.