ಒಟ್ಟಾವಾ(ಕೆನಡಾ): ಚೀನಾದ ತಂತ್ರಜ್ಞಾನ ದಿಗ್ಗಜ ಕಂಪನಿಗಳಾದ ಹುವಾಯಿ ಮತ್ತು ಝೆಡ್ಟಿಇಗೆ ಕೆನಡಾ ಸರ್ಕಾರ ಹೊಡೆತ ನೀಡಿದೆ. ದೇಶದ ಹೈ-ಸ್ಪೀಡ್ 5G ನೆಟ್‌ವರ್ಕ್ ಸೇವೆಯನ್ನು ಚೀನಾ ಕಂಪನಿಗಳು ಬಳಸಲು ಅನುಮತಿಸುವುದಿಲ್ಲ ಎಂದು ತಿಳಿಸಿದೆ.
ಕೆನಡಾದ ಕೈಗಾರಿಕಾ ಸಚಿವ ಫ್ರಾಂಕೋಯಿಸ್-ಫಿಲಿಪ್ ಶಾಂಪೇನ್ ಮತ್ತು ಸಾರ್ವಜನಿಕ ಸುರಕ್ಷತಾ ಸಚಿವ ಮಾರ್ಕೊ ಮೆಂಡಿಸಿನೊ ಸುದ್ದಿಗೋಷ್ಠಿ ನಡೆಸಿ, ರಾಷ್ಟ್ರೀಯ ಭದ್ರತೆಯ ಕಾರಣದಿಂದಾಗಿ ದೇಶದ ದೂರಸಂಪರ್ಕ ವ್ಯವಸ್ಥೆಗಳಲ್ಲಿ ಹುವಾಯಿ ಮತ್ತು ಝಡ್ಟಿಇ ಉತ್ಪನ್ನಗಳು ಮತ್ತು ಸೇವೆಗಳನ್ನು ಸೇರಿಸುವುದನ್ನು ನಿಷೇಧಿಸುವ ನಿರ್ಧಾರವನ್ನು ಪ್ರಕಟಿಸಿದರು.
ಇದನ್ನೂ ಓದಿ:5ಜಿ ನೆಟ್‌ವರ್ಕ್‌ಗಳಿಂದ ಚೀನಾದ ಹುವಾಯಿ ಹಾಗೂ ಝೆಡ್‌ಟಿಇ ಉಪಕರಣಗಳನ್ನು ನಿಷೇಧಿಸಿದ ಸ್ವೀಡನ್
ಹುವಾಯಿ ನಿರ್ಬಂಧಿಸಿದ ರಾಷ್ಟ್ರಗಳಿವು..:ಈಗಾಗಲೇ ರಾಷ್ಟ್ರೀಯ ಭದ್ರತೆಯ ಕಾರಣವೊಡ್ಡಿ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳು ಹುವಾಯಿ ಮತ್ತು ಝಡ್ಟಿಇ ಕಂಪನಿಗಳನ್ನು ನಿಷೇಧಿಸಿವೆ. ಈಗ ಕೆನಾಡ ಮಿತ್ರ ರಾಷ್ಟ್ರಗಳೊಂದಿಗೆ ಕೈ ಜೋಡಿಸಿದೆ.
ಬೇಹುಗಾರಿಕೆ ಪ್ರಶ್ನಿಸಿದ ಕೆನಡಾ: ಹುವಾಯಿ ಮೇಲೆ ಬೇಹುಗಾರಿಕೆಯ ಪ್ರಶ್ನೆಗಳನ್ನು ಕೆನಡಾ ಎತ್ತಿದೆ. ಕೆನಡಿಯನ್ನರ ಮೇಲೆ ಸುಲಭವಾಗಿ ಗೂಢಚಾರಿಕೆ ನಡೆಸಲು ಬೀಜಿಂಗ್‌ಗೆ ಹುವಾಯಿ ನೆರವಾಗುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಚೀನಾದ ಭದ್ರತಾ ಏಜೆನ್ಸಿಗಳು ಭವಿಷ್ಯದಲ್ಲಿ ಕೆನಡಿಯನ್ನರ ವೈಯಕ್ತಿಕ ಮಾಹಿತಿಯನ್ನು ಹಸ್ತಾಂತರಿಸಲು ಹುವಾಯಿಯನ್ನು ಒತ್ತಾಯಿಸಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಚೀನಾ ವಿರುದ್ಧ ಸಮರಕ್ಕಿಳಿದ ರಿಲಯನ್ಸ್ ಜಿಯೋ ನೋಡಿ ಕಲಿಯಿರಿ: ಟೆಲಿಕಾಂ ಆಪರೇಟರ್ಗಳಿಗೆ ಅಮೆರಿಕ ಪಾಠ!
ಆರೋಪ ತಳ್ಳಿ ಹಾಕಿದ ಚೀನಾ: ಬೇಹುಗಾರಿಕೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ಚೀನಾ ಸರ್ಕಾರ ತಳ್ಳಿ ಹಾಕಿದೆ. ನಮ್ಮ ಕಂಪನಿಯು ಯಾವುದೇ ಭದ್ರತಾ ಬೆದರಿಕೆ ಒಡ್ಡುವುದಿಲ್ಲ. ಚೀನಾದ ಪ್ರಮುಖ ದೂರಸಂಪರ್ಕ ಕಂಪನಿಯ ಬೆಳವಣಿಗೆ ತಡೆಯಲು ಯುಎಸ್ ಷಡ್ಯಂತ್ರ ರೂಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.