ಕರ್ನಾಟಕ

karnataka

ETV Bharat / international

ಅಸಿಯಾನ್ ಶೃಂಗಸಭೆ ಆಯೋಜಿಸಿದ್ದ ಕಾಂಬೋಡಿಯಾ ಪ್ರಧಾನಿಗೆ ಕೋವಿಡ್ ಪಾಸಿಟಿವ್ - ಪ್ರಧಾನ ಮಂತ್ರಿ ಹುನ್ ಸೇನ್ ಅವರಿಗೆ ಕೋವಿಡ್ ಪಾಸಿಟಿವ್

ಭಾರತದ ಪರವಾಗಿ ಉಪರಾಷ್ಟ್ರಪತಿ ಜಗದೀಪ್ ಧಂಖರ್, ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಆಸಿಯಾನ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಉಪರಾಷ್ಟ್ರಪತಿಯಾಗಿ ಇದು ಧಂಖರ್ ಅವರ ಮೊದಲ ವಿದೇಶ ಪ್ರವಾಸ.

ಅಸಿಯಾನ್ ಶೃಂಗಸಭೆ ಆಯೋಜಿಸಿದ್ದ ಕಾಂಬೋಡಿಯಾ ಪ್ರಧಾನಿಗೆ ಕೋವಿಡ್ ಪಾಸಿಟಿವ್
cambodia-prime-minister-who-hosted-the-asean-summit-tested-positive-for-covid-19

By

Published : Nov 15, 2022, 1:13 PM IST

ನಾಮ್ ಪೆನ್‌ (ಕಾಂಬೋಡಿಯಾ): ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ಶೃಂಗಸಭೆ ಆಯೋಜಿಸಿ, ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಸೇರಿದಂತೆ ಇನ್ನೂ ಹಲವಾರು ವಿಶ್ವ ನಾಯಕರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಬೋಡಿಯಾದ ಪ್ರಧಾನ ಮಂತ್ರಿ ಹುನ್ ಸೇನ್ ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ಮಂಗಳವಾರ ಪತ್ತೆಯಾಗಿದೆ. ಹುನ್ ಸೇನ್ ಸ್ವತಃ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಜಿ20 ಶೃಂಗಸಭೆಗಾಗಿ ಇಂಡೋನೇಷ್ಯಾ ತಲುಪಿದ ತಮಗೆ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ತಾನು ಮಂಗಳವಾರ ಸಂಜೆಯೇ ಕಾಂಬೋಡಿಯಾಗೆ ಮರಳಲಿದ್ದೇನೆ ಎಂದು ತಿಳಿಸಿದ್ದಾರೆ.

ನವೆಂಬರ್ 10 ರಿಂದ 13 ರವರೆಗೆ ನಾಮ್ ಪೆನ್‌ನಲ್ಲಿ ನಡೆದ ಆಸಿಯಾನ್ ಶೃಂಗಸಭೆಯ ಮುಕ್ತಾಯದ ಎರಡು ದಿನಗಳ ನಂತರ ಈ ಸುದ್ದಿ ಬಂದಿದೆ. ಭಾರತದ ಪರವಾಗಿ ಉಪರಾಷ್ಟ್ರಪತಿ ಜಗದೀಪ್ ಧಂಖರ್, ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಆಸಿಯಾನ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಉಪರಾಷ್ಟ್ರಪತಿಯಾಗಿ ಇದು ಧಂಖರ್ ಅವರ ಮೊದಲ ವಿದೇಶ ಪ್ರವಾಸ. ಅಸಿಯಾನ್​​ನ ಪ್ರಸ್ತುತ ಅಧ್ಯಕ್ಷನಾಗಿರುವ ಕಾಂಬೋಡಿಯಾ ಈ ಶೃಂಗಸಭೆಗಳನ್ನು ಆಯೋಜಿಸಿದೆ.

ಈ ವರ್ಷ ಅಸಿಯಾನ್ ಹಾಗೂ ಭಾರತದ ಸಂಬಂಧಕ್ಕೆ 30 ವರ್ಷ ತುಂಬಲಿದೆ. ಹೀಗಾಗಿ ಈ ವರ್ಷವನ್ನು ಅಸಿಯಾನ್-ಭಾರತ ಮೈತ್ರಿವರ್ಷವಾಗಿ ಆಚರಿಸಲಾಗುತ್ತಿದೆ. ಅಸಿಯಾನ್​ನಲ್ಲಿ ಭಾಗವಹಿಸಿದ್ದ ಭಾರತದ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಸಿಯೆಮ್ ರೀಪ್‌ನಲ್ಲಿರುವ ತಾ ಪ್ರೋಮ್ ದೇವಾಲಯ ಮತ್ತು ಐತಿಹಾಸಿಕ ಅಂಕೋರ್ ವಾಟ್ ದೇವಾಲಯಕ್ಕೆ ಭೇಟಿ ನೀಡಿದರು.

ಇದನ್ನೂ ಓದಿ: ನಮಗೂ ಕೋವಿಡ್ ವ್ಯಾಕ್ಸಿನ್ ನೀಡಿ ಎಂದ ಕಾಂಬೋಡಿಯಾ ಪ್ರಧಾನಿ ಹುನ್​ಸೇನ್

ABOUT THE AUTHOR

...view details