ಲಂಡನ್: ಬ್ರಿಟನ್ನಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ಪ್ರತಿ ವರ್ಷ 3000 ವೀಸಾಗಳನ್ನು ನೀಡಲು ಪ್ರಧಾನಿ ರಿಷಿ ಸುನಕ್ ಮುಂದಾಗಿದ್ದಾರೆ. ಇಂತಹ ಯೋಜನೆಯಿಂದ ಲಾಭ ಪಡೆಯುತ್ತಿರುವ ದೇಶ ಭಾರತ ಎಂದು ಬ್ರಿಟಿಷ್ ಸರ್ಕಾರ ಹೇಳಿದೆ. ಕಳೆದ ವರ್ಷ ಒಪ್ಪಿಕೊಂಡ ಯುಕೆ-ಭಾರತ ವಲಸೆ ಮತ್ತು ಸವಲತ್ತು ಪಾಲುದಾರಿಕೆಯ ಬಲವನ್ನು ಇದು ಎತ್ತಿ ತೋರಿಸುತ್ತದೆ.
ಯುಕೆ ಇಂಡಿಯಾ ಯಂಗ್ ಪ್ರೊಫೆಷನಲ್ಸ್ ಸ್ಕೀಮ್ ಯೋಜನೆ ಅಡಿ ಇದನ್ನು ದೃಢೀಕರಿಸಲಾಗಿದೆ. ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ರಿಷಿ ಸುನಿಕ್ ಭೇಟಿ ಬಳಿಕ ಬ್ರಿಟನ್ ಕಚೇರಿಯಲ್ಲಿ ಈ ಬೆಳವಣಿಗೆ ನಡೆದಿದೆ. ಹೊಸ ಯುಕೆ - ಇಂಡಿಯಾ ಯಂಗ್ ಪ್ರೊಫೆಷನಲ್ಸ್ ಯೋಜನೆ ಅಡಿ, ಯುಕೆ ಎರಡು ವರ್ಷಗಳವರೆಗೆ ಬ್ರಿಟನ್ನಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು 18-30 ವರ್ಷ ವಯಸ್ಸಿನ ಪದವೀಧರರಿಗೆ 3,000 ಸ್ಥಳಗಳನ್ನು ನೀಡುತ್ತದೆ
ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧ ಮತ್ತು ನಮ್ಮ ಎರಡೂ ಆರ್ಥಿಕತೆಗಳನ್ನು ಬಲಪಡಿಸಲು ಇಂಡೋ-ಪೆಸಿಫಿಕ್ ಪ್ರದೇಶ ಬಲವಾದ ಸಂಪರ್ಕಗಳ ವ್ಯಾಪಕ ಬದ್ಧತೆಗೆ ಈ ಯೋಜನೆಯ ಮಹತ್ವದ್ದಾಗಿದೆ ಎಂದು ಡೌನಿಂಗ್ ಸ್ಟ್ರೀಟ್ ಪ್ರಕಟಣೆಯಲ್ಲಿ ತಿಳಿಸಿದೆ.