ಕರ್ನಾಟಕ

karnataka

ETV Bharat / international

ರಾಯಲ್​ ಮೇಲ್​ ಉದ್ಯೋಗಿಯಿಂದ ಬೆದರಿಕೆ ಪ್ರಕರಣ; ಭಾರತೀಯ ಮೂಲದ ಬ್ರಿಟಿಷ್​ ಪ್ರಜೆಗೆ 24 ಕೋಟಿ ರೂ. ಪರಿಹಾರಕ್ಕೆ ಕೋರ್ಟ್​ ಸೂಚನೆ - ರಾಯಲ್​ ಮೇಲ್

ಸಂಸ್ಥೆಯ ವ್ಯವಹಾರದಲ್ಲಿ ನಡೆಯುತ್ತಿದ್ದ ತಪ್ಪುಗಳನ್ನು ಎತ್ತಿ ತೋರಿಸಿದ ಹಿನ್ನಲೆ ಬೆದರಿಕೆ ಎದುರಿಸಿದ ಜೂಥಿ ನ್ಯಾಯಾಲಯ ಹೋರಾಟದಲ್ಲಿ ಯಶ ಪಡೆದಿದ್ದಾರೆ.

british-indian-employee-gets-over-2-dot-3-mn-pounds-from-royal-mail
ರಾಯಲ್​ ಮೇಲ್

By

Published : Jul 8, 2023, 1:28 PM IST

ಲಂಡನ್​: ಬೋನಸ್​ಗೆ​ ಸಂಬಂಧಿಸಿದಂತೆ ವಂಚನೆ ಬಯಲಿಗೆಳೆದು ಬೆದರಿಕೆ ಎದುರಿಸಿದ್ದ ಭಾರತೀಯ ಮೂಲದ ಬ್ರಿಟಿಷ್​ ಮಾಜಿ ಉದ್ಯೋಗಿಗೆ ರಾಯಲ್​ ಮೇಲ್ ಕೊನೆಗೂ ಪರಿಹಾರ ನೀಡಬೇಕಿದೆ. ತನ್ನ ಸಂಸ್ಥೆ ವಂಚನೆ ಬಯಲಿಗೆಳೆದ ಇವರು ಬೆದರಿಕೆ ಸೇರಿದಂತೆ ದೌರ್ಜನ್ಯಕ್ಕೆ ಒಳಗಾಗಿದ್ದರು. ಈತನ ಪ್ರಕರಣವನ್ನು ಆಲಿಸಿದ ನ್ಯಾಯಾಲಯ ಕೊನೆಗೂ ಆ ಮಹಿಳೆಗೆ ನ್ಯಾಯ ಒದಗಿಸಿದೆ. ಅಲ್ಲದೇ ಬ್ರಿಟನ್​ನ ರಾಯಲ್​ ಮೇಲ್​ 2.3 ಮಿಲಿಯನ್​ ಪೌಂಡ್​ (ಅಂದಾಜು 24 ಕೋಟಿ)ಯನ್ನು ಪರಿಹಾರವಾಗಿ ನೀಡುವಂತೆ ಸೂಚಿಸಿದೆ.

ಏನಿದು ಪ್ರಕರಣ: ಕಾಮ್​ ಜೂತಿ ರಾಯ್​ ಮೇಲ್​ನಲ್ಲಿ ಮೀಡಿಯಾ ಸ್ಪೆಷಲಿಸ್ಟ್​​ ಆಗಿ ಸೇವೆ ಸಲ್ಲಿಸುತ್ತಿದ್ದರು. ಈ ವೇಳೆ ಅವರು ತಮ್ಮ ಬಾಸ್​​ ಮೈಕ್​ ವಿಡ್ಮೆರ್​​ರಿಂದ ದೌರ್ಜನ್ಯಕ್ಕೆ ಒಳಗಾಗಿದ್ದರು. ಈ ವೇಳೆ ಸಹೋದ್ಯೋಗಿಯೊಬ್ಬರು ತಮ್ಮ ಬೋನಸ್ ಅನ್ನು ಕಾನೂನುಬಾಹಿರವಾಗಿ ಪಡೆದುಕೊಂಡಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು ಎಂದು ಟೆಲಿಗ್ರಾಫ್​ ವರದಿ ಮಾಡಿದೆ.

ಎಂಟು ವರ್ಷಗಳ ದೀರ್ಘ ನ್ಯಾಯಾಲಯದ ಹೋರಾಟದ ಬಳಿಕ 2019ರಲ್ಲಿ ಸುಪ್ರೀಂ ಕೋರ್ಟ್​​, ಜೂಥಿಯನ್ನು ಅನ್ಯಾಯವಾಗಿ ವಜಾಗೊಳಿಸಲಾಗಿತ್ತು. ಇದರಿಂದ ಆಘಾತ ಉಂಟಾಗಿ, ಒತ್ತಡದ ಅಸ್ವಸ್ಥತೆ ಮತ್ತು ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು.

ಇನ್ನು 2022ರಲ್ಲಿ ನ್ಯಾಯಮಂಡಳಿ ರಾಯಲ್​ ಮೇಲ್​ ಅಂಚೆ ಸೇವೆ ಹೇಗೆ ಪ್ರಕರಣವನ್ನು ಮುನ್ನಡೆಸಿತು ಎಂದು ತನಿಖೆ ನಡೆಸಿದಾಗ ಇದು ದುರುದ್ದೇಶಪೂರಿತ, ಅವಮಾನಕರ ಮತ್ತು ದಬ್ಬಾಳಿಕೆಯಿಂದ ನಡೆದಿದೆ ಎಂಬ ತೀರ್ಮಾನಕ್ಕೆ ಬಂದಿತು.

ಜೂಥಿ ಭಾರತೀಯ ಮೂಲದ ಪೋಷಕರಿಗೆ ಜನಿಸಿದ್ದು, ಅವರು ಬ್ರಿಟನ್​ನಲ್ಲಿ ನೆಲೆಸಿದ್ದಾರೆ. ಅವರು ರಾಯಲ್​ ಮೇಲ್​ನಲ್ಲಿ ಮಾರ್ಕೆಟ್​ರೀಚ್​ ಘಟಕದಲ್ಲಿ ಲಂಡನ್​ನಲ್ಲಿ ಸೆಪ್ಟೆಂಬರ್​ 2013 ರಿಂದ ಸೇವೆ ಸಲ್ಲಿಸುತ್ತಿದ್ದರು.

ಎಂಟು ವರ್ಷದ ಹೋರಾಟಕ್ಕೆ ಜಯ: ತಂಡದ ಸದಸ್ಯರೊಬ್ಬರು ಸಂಸ್ಥೆಯ ಬೋನಸ್​ ಪಾಲಿಸಿಯನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆಕೆ ಅನುಮಾನ ವ್ಯಕ್ತಪಡಿಸಿದಾಗ ಆಕೆ ಈ ವಿಷಯದ ಕುರಿತು ವಿಡ್ಮೆರ್​ ಜೊತೆ ಪ್ರಸ್ತಾಪಿಸಿದರು. ಬಳಿಕ ವಿಡ್ಮೆರ್​ ಬೆದರಿಸಲು ಆರಂಭಿಸಿದರು. ಸಹೋದ್ಯೋಗ ಸಂಸ್ಥೆಯ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ. ಅವರ ಬೋನಸ್​ ಅನ್ನು ಪರೋಕ್ಷವಾಗಿ ವಿಡ್ಮೆರ್​ ಪಡೆಯುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದೀಗ ಪ್ರಕರಣ ಇತ್ಯರ್ಥ ಪಡಿಸಿರುವ ನ್ಯಾಯಾಲಯ ಮೂರು ತಿಂಗಳ ವೇತನ ಜೊತೆಗೆ ವರ್ಷದ ವೇತನವನ್ನು ನೀಡುವಂತೆ ರಾಯಲ್​ ಮೇಲ್​ಗೆ ಆದೇಶಿಸಿದೆ.

2014ರಲ್ಲಿ ಜೂಥಿ ರಾಯಲ್​ ಮೇಲ್​ ತೊರೆದ ಬಳಿಕ ಅವರು ಆಘಾತ ಮತ್ತು ಒತ್ತಡವನ್ನು ಅನುಭವಿಸಿದ್ದು, ಮಾನಸಿಕ ಸ್ಥಿತಿಯಿಂದಾಗಿ ಮತ್ತೆ ಕೆಲಸಕ್ಕೆ ಮರಳಲು ಸಾಧ್ಯವಾಗಲಿಲ್ಲ ಎಂದು ನ್ಯಾಯಮಂಡಳಿ ಮುಂದೆ ತಿಳಿಸಿದ್ದಾರೆ.

2015ರಲ್ಲಿ ಜೂಥಿ ಮೊದಲ ಬಾರಿಗೆ ರಾಯಲ್​ ಮೇಲ್​ ಅನ್ನು ಉದ್ಯೋಗ ನ್ಯಾಯಮಂಡಳಿ ಮುಂದೆ ಕರೆತಂದರು. ಸುದೀರ್ಘ ಹೋರಾಟದ ಬಳಿಕ ಸುಪ್ರೀಂ ಕೋರ್ಟ್​ ಇದೀಗ ಅವಳ ಪರವಾಗಿ ನ್ಯಾಯ ನೀಡಿದೆ. ಬ್ಯುಸಿನೆಸ್​ ಎಕ್ಸ್​ಪರ್ಟ್​ ಆಗಿರುವ ಟೈಲರ್ಮೇ ಜೂಥಿ ಅವರ ಬೋನಸ್​ ವಿಚಾರದಲ್ಲಿ ಮಾಡಿರುವ ಆರೋಪಗಳು ಸರಿಯಾಗಿವೆ ಎಂದು ದೃಢಪಡಿಸಿದರು.

ಪ್ರಕರಣದ ಬಳಿಕ ರಾಯಲ್​ ಮೇಲ್​ ತಮ್ಮ ಸಂಸ್ಥೆ ಯಾವುದೇ ರೀತಿಯ ಬೆದರಿಸುವಿಕೆ, ಕಿರುಕುಳ ಅಥವಾ ತಾರತಮ್ಯವನ್ನು ನಾವು ಸಹಿಸುವುದಿಲ್ಲ. ನಮ್ಮ ವ್ಯವಹಾರದಲ್ಲಿ ಕೆಲಸ ಮಾಡುವ ಎಲ್ಲ ವ್ಯಕ್ತಿಗಳ ಕೆಲಸ ಮತ್ತು ಬದ್ಧತೆಯನ್ನು ನಾವು ಗೌರವಿಸುತ್ತೇವೆ ಎಂದಿದೆ.

ಇದನ್ನೂ ಓದಿ: ಯುಕೆ ಸರ್ಕಾರದಲ್ಲಿ ನಾಗರಿಕ ಸೇವಾ ಹುದ್ದೆ ಅಲಂಕರಿಸಿದ ಶ್ರೀನಗರದ ಫೈಜಾನ್ ನಜೀರ್..!

ABOUT THE AUTHOR

...view details