ಕರ್ನಾಟಕ

karnataka

ETV Bharat / international

ಬ್ರಿಟನ್ - ಚೀನಾ ಸುವರ್ಣ ಯುಗ ಮುಗಿದ ಅಧ್ಯಾಯ: ಪಿಎಂ ಸುನಕ್

ವ್ಯಾಪಾರವು ಸ್ವಯಂಚಾಲಿತವಾಗಿ ಸಾಮಾಜಿಕ ಮತ್ತು ರಾಜಕೀಯ ಸಂಬಂಧಗಳ ಸುಧಾರಣೆಗೆ ಕಾರಣವಾಗುತ್ತದೆ ಎಂಬ ಕಲ್ಪನೆಯು ಕೊನೆ ಆಗುವುದರೊಂದಿಗೆ ಸುವರ್ಣ ಯುಗ ಎಂದು ಕರೆಯಲ್ಪಡುತ್ತಿದ್ದ ಯುಗ ಕೊನೆಯಾಗಿದೆ. ಆದರೆ, ಹಾಗಂತ ನಾವು ಶೀತಲಸಮರದ ಮಾತುಗಳ ಮೇಲೆ ಅವಲಂಬಿತವಾಗಿರಬಾರದು. ಇದನ್ನು ಸ್ಪಷ್ಟಪಡಿಸಲು ಬಯಸುವೆ ಎಂದು ಸುನಕ್ ಹೇಳಿದರು.

ಬ್ರಿಟನ್ - ಚೀನಾ ಸುವರ್ಣ ಯುಗ ಮುಗಿದ ಅಧ್ಯಾಯ: ಪಿಎಂ ಸುನಕ್
Britain China golden age ends chapter PM Sunak

By

Published : Nov 29, 2022, 4:45 PM IST

ಲಂಡನ್:ಚೀನಾ ಮತ್ತು ಬ್ರಿಟನ್ ಸಂಬಂಧಗಳ ಸುವರ್ಣ ಯುಗ ಮುಗಿದ ಅಧ್ಯಾಯವಾಗಿದೆ. ನಾವು ನಮ್ಮ ದೃಷ್ಟಿಕೋನವನ್ನು ಬದಲಾಯಿಸಬೇಕಿದೆ ಎಂದು ಯುಕೆ ಪ್ರಧಾನಿ ರಿಷಿ ಸುನಕ್ ಹೇಳಿದರು. ಲಂಡನ್‌ನಲ್ಲಿ ಸೋಮವಾರ ನಡೆದ ಲಾರ್ಡ್ ಮೇಯರ್ ಔತಣಕೂಟವನ್ನು ಉದ್ದೇಶಿಸಿ ಅವರು ಈ ವಿಷಯ ತಿಳಿಸಿದರು.

ವ್ಯಾಪಾರವು ಸ್ವಯಂಚಾಲಿತವಾಗಿ ಸಾಮಾಜಿಕ ಮತ್ತು ರಾಜಕೀಯ ಸಂಬಂಧಗಳ ಸುಧಾರಣೆಗೆ ಕಾರಣವಾಗುತ್ತದೆ ಎಂಬ ಕಲ್ಪನೆಯು ಕೊನೆಯಾಗುವುದರೊಂದಿಗೆ ಸುವರ್ಣ ಯುಗ ಎಂದು ಕರೆಯಲ್ಪಡುತ್ತಿದ್ದ ಯುಗ ಕೊನೆಯಾಗಿದೆ. ಆದರೆ, ಹಾಗಂತ ನಾವು ಶೀತಲಸಮರದ ಮಾತುಗಳ ಮೇಲೆ ಅವಲಂಬಿತವಾಗಿರಬಾರದು. ಇದನ್ನು ಸ್ಪಷ್ಟಪಡಿಸಲು ಬಯಸುವೆ ಎಂದು ಸುನಕ್ ಹೇಳಿದರು.

ಚೀನಾವು ನಮ್ಮ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ವ್ಯವಸ್ಥಿತ ಸವಾಲನ್ನು ಒಡ್ಡುತ್ತದೆ ಎಂಬುದನ್ನು ನಾವು ಗುರುತಿಸಿದ್ದೇವೆ. ಇನ್ನೂ ಹೆಚ್ಚಿನ ನಿರಂಕುಶಾಧಿಕಾರ ಬೆಳೆದಂತೆ ಇದು ನಮಗೆ ಮತ್ತಷ್ಟು ತೀವ್ರವಾಗುವ ಸವಾಲಾಗಿದೆ ಎಂದರು.

ಚೀನಾದ 'ಶೂನ್ಯ-ಕೋವಿಡ್ ನೀತಿ'ಯ ವಿರುದ್ಧ ಚೀನಾದಾದ್ಯಂತ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಚೀನಾ ತನ್ನ ಪ್ರಜೆಗಳ ಪ್ರತಿಭಟನೆಗಳಿಗೆ ಕಿವಿಗೊಡುವ ಬದಲು ಬಿಬಿಸಿ ಪತ್ರಕರ್ತನ ಮೇಲೆ ಹಲ್ಲೆ ನಡೆಸಿ ಮತ್ತಷ್ಟು ದಮನಕಾರಿ ನೀತಿಯನ್ನು ಅನುಸರಿಸಲು ನಿರ್ಧರಿಸಿದೆ ಎಂದು ಸುನಕ್ ತಿಳಿಸಿದರು.

ಮಾಧ್ಯಮಗಳು ಮತ್ತು ನಮ್ಮ ಸಂಸದರು ಕ್ಸಿನ್‌ಜಿಯಾಂಗ್‌ನಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು ನಿಂದನೆಗಳನ್ನು ಯಾವುದೇ ಅಳುಕಿಲ್ಲದೇ ಖಂಡಿಸಬೇಕಿದೆ. ಹಾಂಕಾಂಗ್‌ನಲ್ಲಿ ಸ್ವಾತಂತ್ರ್ಯ ಮೊಟಕುಗೊಳಿಸುವುದು ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಅವರು ಎತ್ತಿ ತೋರಿಸಬೇಕಿದೆ. ಜಾಗತಿಕ ಆರ್ಥಿಕ ಸ್ಥಿರತೆ ಅಥವಾ ಹವಾಮಾನ ಬದಲಾವಣೆಯಂತಹ ಸಮಸ್ಯೆಗಳಿಗೆ ಜಾಗತಿಕ ಮಟ್ಟದ ವ್ಯವಹಾರಗಳಲ್ಲಿ ಚೀನಾದ ಮಹತ್ವವನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಸುನಕ್ ಒತ್ತಿ ಹೇಳಿದರು.

ಇದನ್ನೂ ಓದಿ: ಕೋವಿಡ್ ಲಾಕ್‌ಡೌನ್: ಚೀನಾದಲ್ಲಿ ತೀವ್ರಗೊಂಡ ಪ್ರತಿಭಟನೆ, ಅಧ್ಯಕ್ಷರ ರಾಜೀನಾಮೆಗೆ ಒತ್ತಾಯ

ABOUT THE AUTHOR

...view details