ಕೇಪ್ಟೌನ್( ದಕ್ಷಿಣ ಆಫ್ರಿಕಾ) :ಶುಕ್ರವಾರ ಕೇಪ್ಟೌನ್ನಲ್ಲಿ ನಡೆದ 'ಫ್ರೆಂಡ್ಸ್ ಆಫ್ ಬ್ರಿಕ್ಸ್' ಸಭೆಯಲ್ಲಿ ಭಯೋತ್ಪಾದನೆ ಹತ್ತಿಕ್ಕಲು ಬ್ರಿಕ್ಸ್ ರಾಷ್ಟ್ರಗಳು ಪ್ರತಿಜ್ಞೆ ಮಾಡಿದವು. ಇದಕ್ಕೂ ಮುನ್ನ ಸಭೆಯಲ್ಲಿ ಭಾಗಿಯಾಗಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಕೂಟದಲ್ಲಿ ಬ್ರೆಜಿಲ್, ಇರಾನ್ ಮತ್ತು ಯುಎಇಯ ಸದಸ್ಯರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಕುರಿತು ಚರ್ಚಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬ್ರಿಕ್ಸ್ ಸಭೆಯಲ್ಲಿ ಬ್ರೆಜಿಲ್‌ನ ಎಫ್‌ಎಂ ಮೌರೊ ವಿಯೆರಾ ಅವರನ್ನು ಭೇಟಿಯಾಗಿ ಅವರೊಂದಿಗೆ ಬ್ರಿಕ್ಸ್, ಐಬಿಎಸ್‌ಎ, ಜಿ 20 ಮತ್ತು ಯುಎನ್ ಚೌಕಟ್ಟಿನಲ್ಲಿ ನಮ್ಮ ಸಹಕಾರವನ್ನು ಮುಂದುವರಿಸುವ ಕುರಿತು ಚರ್ಚಿಸಲಾಗಿದೆ. ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಟ್ಟಿಗೊಳಸಲು ಒಟ್ಟಿಗೆ ಕೆಲಸ ಮಾಡಲು ಎದುರು ನೋಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ಬಳಿಕ ಇರಾನ್‌ನ ವಿದೇಶಾಂಗ ಸಚಿವ ಅಮಿರಾಬ್ದೋಲಾಹಿಯಾನ್ ಅವರನ್ನು ಭೇಟಿ ಮಾಡಿದ ಅವರು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿರುವ ಬ್ರಿಕ್ಸ್ ಬಣ ಮತ್ತು ಶಾಂಘೈ ಸಹಕಾರ ಸಂಘಟನೆಯ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಫ್ರೆಂಡ್ಸ್ ಆಫ್ ಬ್ರಿಕ್ಸ್ ಕೂಟದ ಹಿನ್ನೆಲೆಯಲ್ಲಿ ಇರಾನ್‌ನ ಅಮಿರಾಬ್ದೋಲಾಹಿಯಾನ್ ಅವರೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ನಮ್ಮ ದ್ವಿಪಕ್ಷೀಯ ಸಂಬಂಧಗಳ ವೃದ್ಧಿ ಬಗ್ಗೆ ಪರಿಶೀಲಿಸಲಾಯಿತು. ಚಾಬಹಾರ್ ಬಂದರಿಗೆ ನಿರ್ದಿಷ್ಟವಾಗಿ ಒತ್ತು ನೀಡುವ ಮೂಲಕ ಅವುಗಳನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತೂ ಚರ್ಚೆ ನಡೆಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.