ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಕಾರ್ಟೆ ಪರ್ವಾನ್ ಗುರುದ್ವಾರ ಸಾಹಿಬ್ ಬಳಿ ಮತ್ತೊಂದು ಬಾಂಬ್ ಸ್ಫೋಟ ನಡೆದಿದೆ. ಇದರ ದೃಶ್ಯಗಳು ಸೆರೆಯಾಗಿದ್ದು, ವಿಡಿಯೋ ಹರಿದಾಡುತ್ತಿವೆ.
ಗುರುದ್ವಾರದ ಮುಂಭಾಗದ ಅಂಗಡಿಯೊಂದರಲ್ಲಿ ಈ ದಾಳಿ ನಡೆದಿದ್ದು, ಅಂಗಡಿಗೆ ಸಾಕಷ್ಟು ಹಾನಿಯಾಗಿದೆ. ಜೊತೆಗೆ ಗುರುದ್ವಾರದ ಕಟ್ಟಡಕ್ಕೂ ಭಾರಿ ಹಾನಿಯಾಗಿದೆ. ಸದ್ಯ ಮಾಹಿತಿ ಪ್ರಕಾರ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಈ ಬಗ್ಗೆ ಇಂಡಿಯನ್ ವರ್ಲ್ಡ್ ಫೋರಂ ಅಧ್ಯಕ್ಷ ಪುನೀತ್ ಸಿಂಗ್ ಚಾಂಧೋಕ್ ಪ್ರತಿಕ್ರಿಯಿಸಿ, ಸಿಖ್ ಮತ್ತು ಹಿಂದೂ ಸಮುದಾಯದ ಜನರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕಳೆದ ತಿಂಗಳ ಹಿಂದೆಯಷ್ಟೇ ಇದೇ ಗುರುದ್ವಾರದಲ್ಲಿ ದೊಡ್ಡ ಸ್ಫೋಟ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ಇದೀಗ ಎರಡನೇ ಸ್ಫೋಟದಿಂದಾಗಿ ಇಲ್ಲಿ ವಾಸಿಸುವ ಸಿಖ್ ಸಮುದಾಯದ ಜನರಿಗೆ ಸಾಕಷ್ಟು ಆತಂಕ ಉಂಟಾಗಿದೆ.
ಇದನ್ನೂ ಓದಿ:ಫಿಲಿಪ್ಪೀನ್ಸ್ನಲ್ಲಿ ಗಢಗಢ ನಡುಗಿದ ಭೂಮಿ; 7.3 ತೀವ್ರತೆಯ ಭಾರಿ ಭೂಕಂಪ