ಕರ್ನಾಟಕ

karnataka

ETV Bharat / international

210 ಕೆಜಿ ಭಾರ ಎತ್ತಲು ಹೋಗಿ ಗೋಣು ಮುರಿದುಕೊಂಡು ಬಾಡಿಬಿಲ್ಡರ್​ ದಾರುಣ ಸಾವು: ಭಯಾನಕ ವಿಡಿಯೋ - ಫಿಟ್​​ನೆಸ್​ ಫ್ರೀಕ್​ ಜಸ್ಟಿನ್ ವಿಕ್ಕಿ

ಇಂಡೋನೇಷಿಯಾದ ಉತ್ಸಾಹಿ ಬಾಡಿಬಿಲ್ಡರ್​ 210 ಕೆಜಿ ಭಾರವನ್ನು ಒಮ್ಮೆಲೆ ಎತ್ತಲು ಹೋಗಿ ಕತ್ತು ಮುರಿದುಕೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.

ಬಾಡಿಬಿಲ್ಡರ್​ ದಾರುಣ ಸಾವು
ಬಾಡಿಬಿಲ್ಡರ್​ ದಾರುಣ ಸಾವು

By

Published : Jul 23, 2023, 11:11 AM IST

ಬಾಲಿ (ಇಂಡೋನೇಷಿಯಾ) :ದೇಹವನ್ನು ಹುರಿಗಟ್ಟಿಸಲು ಗರಡಿಯಲ್ಲಿ ಕಸರತ್ತು ಮಾಡಬೇಕು ನಿಜ. ಆದರೆ, ಅದೇ ನಮ್ಮ ಜೀವಕ್ಕೆ ಎರವಾಗಬಾರದಲ್ಲವೇ?. ಇಂಡೋನೇಷಿಯಾದಲ್ಲಿ ಬಾಡಿಬಿಲ್ಡರ್​ವೊಬ್ಬರು ಅತಿಯಾದ ಭಾರ ಎತ್ತಲು ಹೋಗಿ ಗೋಣು ಮುರಿದುಕೊಂಡು ಸಾವನ್ನಪ್ಪಿದ ದುರಂತ ನಡೆದಿದೆ. ಜುಲೈ 15 ರಂದು ಈ ಘಟನೆ ನಡೆದಿದೆ. ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಅಂದು ಏನಾಯ್ತು?:ಸಾಮಾಜಿಕ ಮಾಧ್ಯಮದಲ್ಲಿ ಜಿಮ್​ ವಿಡಿಯೋವನ್ನು ನಿರಂತರವಾಗಿ ಹಂಚಿಕೊಂಡು ಅರಿವು ಮೂಡಿಸುತ್ತಿದ್ದ ಫಿಟ್​​ನೆಸ್​ ಫ್ರೀಕ್​ ಬಾಡಿಬಿಲ್ಡರ್ ಜಸ್ಟಿನ್ ವಿಕ್ಕಿ ಅಕಾಲಿಕ ಸಾವನ್ನಪ್ಪಿದವರು. ಜುಲೈ 15 ರಂದು ವಿಕ್ಕಿ ತಮ್ಮ ಟ್ರೇನರ್​ಗಳ ಜೊತೆಗೆ ಬಾಲಿಯ ಸಾನೂರ್‌ನಲ್ಲಿರುವ ಪ್ಯಾರಡೈಸ್ ಜಿಮ್‌ನಲ್ಲಿ ಎಂದಿನಂತೆ ದೇಹ ಹುರಿಗೊಳಿಸುತ್ತಿದ್ದರು.

ಅಂದು ಅತ್ಯಧಿಕ ಭಾರ ಅಂದರೆ 210 ಕೆಜಿಯನ್ನು ಒಮ್ಮೆಲೆ ಎತ್ತಲು ಪ್ರಯತ್ನಿಸುತ್ತಿದ್ದರು. 33 ವರ್ಷದ ವಿಕ್ಕಿ ತನ್ನ ಶಕ್ತಿಯನ್ನೆಲ್ಲ ಬಳಸಿಕೊಂಡು 2 ಕ್ವಿಂಟಲ್​ಗಿಂತಲೂ ಹೆಚ್ಚು ಭಾರವನ್ನು ಎತ್ತುತ್ತಿದ್ದರು. ವೇಟ್​ ಲಿಫ್ಟಿಂಗ್​ ಅನ್ನು ಭುಜದ ಮೇಲೆ ಇಟ್ಟುಕೊಂಡು ಎತ್ತಲು ಪ್ರಯತ್ನಿಸಿದರು. ಹೆಚ್ಚಿನ ಭಾರ ಎತ್ತಲಾಗದೇ ವಿಕ್ಕಿ ನೆಲದಿಂದ ಮೇಲೇಳಲು ಪರದಾಡಿದರು. ಆಗ ಬಾರ್ಬೆಲ್​ ಭುಜದಿಂದ ಜಾರಿ ಗೋಣಿನ (ಕತ್ತಿನ ಹಿಂಭಾಗ) ಮೇಲೆ ಬಿದ್ದಿದೆ.

ಇದರಿಂದ ಗೋಣು ಮುರಿದುಕೊಂಡಿದೆ. ತಕ್ಷಣವೇ ಆತ ನೆಲಕ್ಕೆ ಹಾಗೆಯೇ ಕುಸಿದು ಬಿದ್ದಿದ್ದಾನೆ. ಆತನ ಹಿಂದೆ ಜಿಮ್​ ಟ್ರೇನರ್​ಗಳು ಇರುವುದನ್ನು ವಿಡಿಯೋದಲ್ಲಿ ಕಾಣಬಹುದು. ಪ್ರಜ್ಞೆತಪ್ಪಿ ಬಿದ್ದ ಬಾಡಿಬಿಲ್ಡರ್​ ವಿಕ್ಕಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಆತನ ಪ್ರಾಣ ಕಳೆದುಕೊಂಡಿದ್ದಾನೆ.

"ಅತಿಯಾದ ಭಾರದ ಗೋಣಿನ ಮೇಲೆ ಬಿದ್ದ ಕಾರಣ ಅದು ಮುರಿದಿದೆ. ಹೃದಯ ಮತ್ತು ಶ್ವಾಸಕೋಶಗಳಿಗೆ ಸಂಪರ್ಕಿಸುವ ಪ್ರಮುಖ ನರಗಳು ಛಿದ್ರವಾಗಿದೆ. ಇದರಿಂದಾಗಿ ಆತ ಸಾವನ್ನಪ್ಪಿದ್ದಾನೆ" ಎಂದು ವೈದ್ಯರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ದೇಹದಾರ್ಢ್ಯ ಬೆಳೆಸಲು ಪ್ರೇರಣೆಯಾಗಿದ್ದ ಯುವ ಬಾಡಿಬಿಲ್ಡರ್​ ಅಕಾಲಿಕ ಮರಣ ಹೊಂದಿದ್ದಾನೆ. ಈತ ಕಸರತ್ತು ಮಾಡುತ್ತಿದ್ದ ಜಿಮ್​ ಮಾಲೀಕರು ಘಟನೆಗೆ ಸಂತಾಪ ಸೂಚಿಸಿದ್ದಾರೆ. ಜಸ್ಟಿನ್​ ವಿಕ್ಕಿ ನಮಗೆಲ್ಲ ಸ್ಫೂರ್ತಿ, ಪ್ರೇರಣೆ ಮತ್ತು ದಾರಿದೀಪವಾಗಿದ್ದ ಎಂದು ಇನ್​​​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದೆ.

ಹೃದಯಾಘಾತದಿಂದ ಜೋ ಲಿಂಡ್ನರ್​ ಸಾವು:ಸಾಮಾಜಿಕ ಜಾಲತಾಣಗಳಲ್ಲಿ ಫಿಟ್ನೆಸ್​ ಸಲಹೆಯ ಮೂಲಕ ಖ್ಯಾತಿ ಗಳಿಸಿದ್ದ, ಕನ್ನಡದ ನಟ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದಲ್ಲಿ ನಟಿಸಿದ್ದ ಜರ್ಮನಿಯ ಖ್ಯಾತ ಬಾಡಿಬಿಲ್ಡರ್​ ಜೋ ಲಿಂಡ್ನರ್​ ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ಇದನ್ನೂ ಓದಿ:NIA Raids: ತಮಿಳುನಾಡಿನ 24 ಕಡೆಗಳಲ್ಲಿ ಎನ್​​ಐಎ ದಾಳಿ, ದಾಖಲೆಗಳ ಶೋಧ

ABOUT THE AUTHOR

...view details