ಕರ್ನಾಟಕ

karnataka

ETV Bharat / international

ಹೈಟಿ ವಲಸಿಗರ ಹೊತ್ತು ಸಾಗುತ್ತಿದ್ದ ದೋಣಿ ಸಮುದ್ರದಲ್ಲಿ ಮುಳುಗಡೆ, 17 ಸಾವು

ಹೈಟಿ ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದಿಂದ ಬೇಸತ್ತು ಜನರು ಬೇರೆ ದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ. ಹೀಗೆ ಪಲಾಯನ ಮಾಡುತ್ತಿದ್ದ 60 ಜನರಿದ್ದ ಬೋಟ್​ ಸಮುದ್ರದಲ್ಲಿ ಮುಳುಗಿದೆ.

Boat carrying Haitian migrants sinks off Bahamas, Boat sinks off Bahamas, BOAT CAPSIZES in Bahamas, BOAT CAPSIZES news, Etv Bharat Kannada news, Etv Bharat Karnataka news, ಬಹಾಮಾಸ್‌ನಲ್ಲಿ ಮುಳುಗಿದ ಹೈಟಿ ವಲಸಿಗರನ್ನು ಹೊತ್ತೊಯ್ಯುವ ದೋಣಿ, ಬಹಾಮಾಸ್‌ನಲ್ಲಿ ಮುಳುಗಿದ ಬೋಟ್​, ಬೋಟ್ ಮುಳುಗಿದ ಸುದ್ದಿ,  ಬಹಾಮಾಸ್‌ನಲ್ಲಿ ಬೋಟ್​ ಮುಳುಗಿ ಅನೇಕರು ಸಾವು, ಈಟಿವಿ ಭಾರತ ಕನ್ನಡ ಸುದ್ದಿ, ಈಟಿವಿ ಭಾರತ್​ ಕರ್ನಾಟಕ ನ್ಯೂಸ್​,
ಮಗುಚಿ ಬಿದ್ದ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ

By

Published : Jul 25, 2022, 7:40 AM IST

ಮೆಕ್ಸಿಕೊ ಸಿಟಿ:ಹೈಟಿಯ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಭಾನುವಾರ ಮುಂಜಾನೆ ಬಹಾಮಾಸ್‌ ಸಮುದ್ರದಲ್ಲಿ ಮುಳುಗಿದೆ. ದುರಂತದಲ್ಲಿ 15 ಮಹಿಳೆಯರು, ಒಂದು ಶಿಶು ಸೇರಿದಂತೆ 17 ಜನ ಸಾವನ್ನಪ್ಪಿದ್ದಾರೆ. ಬಹಾಮಿಯನ್ ಭದ್ರತಾ ಪಡೆಗಳು 17 ಜನರ ಮೃತದೇಹಗಳನ್ನು ಈಗಾಗಲೇ ಪತ್ತೆ ಮಾಡಿವೆ. ಪ್ರಾಣಾಪಾಯದಲ್ಲಿದ್ದ 25 ಜನರನ್ನು ರಕ್ಷಿಸಲಾಗಿದೆ.

"ನ್ಯೂ ಪ್ರಾವಿಡೆನ್ಸ್‌ನಿಂದ ಸುಮಾರು ಏಳು ಮೈಲಿ ದೂರದಲ್ಲಿ ದೋಣಿ ಮುಳುಗಿದ ನಂತರ ಎಷ್ಟು ಜನ ಕಾಣೆಯಾಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ರಕ್ಷಿಸಲ್ಪಟ್ಟ ಜನರಿಗೆ ಆರೋಗ್ಯ ಕಾರ್ಯಕರ್ತರು ಚಿಕಿತ್ಸೆ ನೀಡುತ್ತಿದ್ದಾರೆ" ಎಂದು ಬಹಾಮಾಸ್‌ ಪ್ರಧಾನಿ ಡೇವಿಸ್ ತಿಳಿಸಿದ್ದಾರೆ.

ಸುಮಾರು 60 ಜನರನ್ನು ಹೊತ್ತೊಯ್ದು ಅವಳಿ-ಎಂಜಿನ್ ಇದ್ದ ದೋಣಿ ರಾತ್ರಿ 1 ಗಂಟೆಗೆ ಬಹಾಮಾಸ್‌ನಿಂದ ಮಿಯಾಮಿಗೆ ಹೊರಟಿತ್ತು. ಮಾನವ ಕಳ್ಳಸಾಗಣೆ ಬಗ್ಗೆ ಅನುಮಾನಗಳಿವೆ. ಈ ಕುರಿತು ತನಿಖೆ ನಡೆಯುತ್ತಿದೆ. ನನ್ನ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಂಥ ಅಪಾಯಕಾರಿ ಪ್ರಯಾಣಗಳ ವಿರುದ್ಧ ಎಚ್ಚರಿಕೆ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

ಹೈಟಿಯಲ್ಲಿ ಕೊಲೆ ಮತ್ತು ಅಪಹರಣ ಕೃತ್ಯಗಳ ತೀವ್ರ ಏರಿಕೆಯ ಮಧ್ಯೆ ಗ್ಯಾಂಗ್ ವಾರ್‌ಗಳೂ ಸಾಮಾನ್ಯವೆಂಬಂತೆ ನಡೆಯುತ್ತಿವೆ. ಉತ್ತಮ ಮತ್ತು ಸುರಕ್ಷಿತ ಜೀವನ ಸಾಗಿಸಲು 11 ಮಿಲಿಯನ್‌ಗಿಂತಲೂ ಹೆಚ್ಚು ಜನರು ಈಗಾಗಲೇ ಬೇರೆಡೆ ವಲಸೆ ಹೋಗಿದ್ದಾರೆ. ಈ ವರ್ಷ ಹೈಟಿ ವಲಸಿಗರನ್ನು ಒಳಗೊಂಡ ಹಲವು ದೋಣಿ ದುರಂತಗಳು ಸಂಭವಿಸಿವೆ. ಇದರಲ್ಲಿ ಮೇ ತಿಂಗಳಲ್ಲಿ ನಡೆದ ದೋಣಿ ದುರಂತದಲ್ಲಿ ಹನ್ನೊಂದು ಜನರು ಸಾವನ್ನಪ್ಪಿದ್ದು, 38 ಮಂದಿಯನ್ನು ರಕ್ಷಿಸಲಾಗಿತ್ತು.

ಇದನ್ನೂ ಓದಿ:ಮಗುಚಿ ಬಿದ್ದ 150 ಜನ ಪ್ರಯಾಣಿಕರಿದ್ದ ದೋಣಿ.. 13 ವಲಸೆಗಾರರು ಸಾವು, 40ಕ್ಕೂ ಹೆಚ್ಚು ನಾಪತ್ತೆ!

ABOUT THE AUTHOR

...view details