ಕರ್ನಾಟಕ

karnataka

ETV Bharat / international

ಮಗುಚಿ ಬಿದ್ದ 150 ಜನ ಪ್ರಯಾಣಿಕರಿದ್ದ ದೋಣಿ.. 13 ವಲಸೆಗಾರರು ಸಾವು, 40ಕ್ಕೂ ಹೆಚ್ಚು ನಾಪತ್ತೆ! - ಸೆನೆಗಲ್‌ ಮುಗುಚಿ ಬಿದ್ದ ದೋಣಿಯಲ್ಲಿ ವಲಸಿಗರ ಸಾವು

150 ಜನರನ್ನು ಹೊತ್ತು ಸಾಗಿಸುತ್ತಿದ್ದ ಹಡಗೊಂದು ಸಮುದ್ರದಲ್ಲಿ ಮಗುಚಿ ಬಿದ್ದ ಹಿನ್ನೆಲೆ 13 ಜನ ಸಾವನ್ನಪ್ಪಿದ್ದು, 91 ಜನರನ್ನು ರಕ್ಷಿಸಲಾಗಿದೆ. ಅಷ್ಟೇ ಅಲ್ಲದೇ 40ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

Boat capsizes off Senegal coastline, migrants killed in Senegal Boat capsizes, Senegal Boat capsizes news, ಸೆನೆಗಲ್ ಕರಾವಳಿಯಲ್ಲಿ ಮುಳುಗಿದ ದೋಣಿ, ಸೆನೆಗಲ್‌ ಮುಗುಚಿ ಬಿದ್ದ ದೋಣಿಯಲ್ಲಿ ವಲಸಿಗರ ಸಾವು, ಸೆನೆಗಲ್ ಬೋಟ್ ಮುಳುಗಿದ ಸುದ್ದಿ,
ಮುಗುಚಿ ಬಿದ್ದ 150 ಜನ ಪ್ರಯಾಣಿಕರಿದ್ದ ದೋಣಿ

By

Published : Jun 30, 2022, 10:04 AM IST

ಡಾಕರ್(ಸೆನೆಗಲ್​): ಆಫ್ರಿಕಾದ ಸೆನೆಗಲ್‌ನಲ್ಲಿ ದೊಡ್ಡ ದುರಂತವೊಂದು ಸಂಭವಿಸಿದೆ. ಯುರೋಪ್​ಗೆ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಸಮುದ್ರದಲ್ಲಿ ಮಗುಚಿ ಬಿದ್ದಿದೆ. ಈ ಅಪಘಾತದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ರೆಡ್‌ಕ್ರಾಸ್ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕ್ಯಾಸಮನ್ ಪ್ರದೇಶದ ಕಫೌಂಟೇನ್ ಬಳಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ದುರಂತದ ವೇಳೆ ದೋಣಿಯಲ್ಲಿ ಸುಮಾರು 150 ಮಂದಿ ಇದ್ದರು ಎನ್ನಲಾಗಿದೆ. 150 ಜನರಲ್ಲಿ 91 ಮಂದಿಯನ್ನು ರಕ್ಷಿಸಲಾಗಿದ್ದು, 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆ ಕೈಗೊಂಡಿರುವ ಸಿಬ್ಬಂದಿ ತಿಳಿಸಿದ್ದಾರೆ. ಅವರ ಪತ್ತೆಗಾಗಿ ಶೋಧ ಮುಂದುವರಿಸಲಾಗಿದೆ ಎಂದು ಗಲ್ಲಿಂಥನ್ ತಿಳಿಸಿದ್ದಾರೆ.

ಓದಿ:ಬೋಟ್ ದುರಂತ: ಇಬ್ಬರು ಅಪ್ರಾಪ್ತರು ನಾಪತ್ತೆ, 10 ಮಂದಿ ರಕ್ಷಣೆ

ದೋಣಿಯಲ್ಲಿ ಬೆಂಕಿ ಹರಡಿದ್ದರಿಂದ ಮಗುಚಿ ಬಿದ್ದಿದೆ ಎಂದು ಸ್ಥಳೀಯ ಸುದ್ದಿ ವರದಿಗಳು ತಿಳಿಸಿವೆ. ಈ ದುರಂತಕ್ಕೆ ಕಾರಣವಾದ ಕಾರಣಗಳೇನು? ಈ ದೋಣಿ ಮತ್ತು ವಲಸೆ ಕಾರ್ಯಾಚರಣೆಯ ಉಸ್ತುವಾರಿ ಯಾರು? ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಪ್ರತಿ ವರ್ಷ ಅನೇಕ ಜನರು ಪಶ್ಚಿಮ ಆಫ್ರಿಕಾದ ಕರಾವಳಿ ಉದ್ದಕ್ಕೂ ಈ ಅಪಾಯಕಾರಿ ಸಮುದ್ರ ಮಾರ್ಗದಲ್ಲಿ ಸಣ್ಣ ದೋಣಿಗಳನ್ನು ತೆಗೆದುಕೊಂಡು ಹೋಗುವ ಮೂಲಕ ಯುರೋಪ್​ಗೆ ವಲಸೆ ಹೋಗಲು ಪ್ರಯತ್ನಿಸುತ್ತಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿಯೂ ಸೆನೆಗಲ್‌ನ ಉತ್ತರದಲ್ಲಿರುವ ಸೇಂಟ್ ಲೂಯಿಸ್‌ನಲ್ಲಿ 60 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮಗುಚಿ ಬಿದ್ದಿತ್ತು.

ABOUT THE AUTHOR

...view details