ಕರ್ನಾಟಕ

karnataka

ಕಾಬೂಲ್‌ ಮಸೀದಿಯಲ್ಲಿ ಸ್ಫೋಟ: 14 ಮಂದಿ ಸಾವು

By

Published : May 26, 2022, 10:06 AM IST

ಬುಧವಾರ ನಡೆದ ಸರಣಿ ಸ್ಫೋಟ ಅಫ್ಘಾನಿಸ್ತಾನವನ್ನು ಬೆಚ್ಚಿ ಬೀಳಿಸಿದೆ. ಒಟ್ಟು 14 ಮಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಹೇಳಿದೆ.

Blast
Blast

ಅಫ್ಘಾನಿಸ್ತಾನದಲ್ಲಿ ಬುಧವಾರ ಸರಣಿ ಸ್ಫೋಟಗಳು ಸಂಭವಿಸಿವೆ. ರಾಜಧಾನಿ ಕಾಬೂಲ್‌ನ ಮಸೀದಿಯೊಳಗೆ ನಡೆದ ಸ್ಫೋಟದಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ದೇಶದ ಉತ್ತರ ಭಾಗದಲ್ಲಿ ಮಿನಿವ್ಯಾನ್​ಗಳನ್ನು ಗುರಿಯಾಗಿಸಿ ನಡೆಸಿದ ಇನ್ನೊಂದು ಬಾಂಬ್ ದಾಳಿಯಲ್ಲಿ 9 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇಸ್ಲಾಮಿಕ್ ಸ್ಟೇಟ್(ಐಎಸ್‌) ಗುಂಪಿನ ಸ್ಥಳೀಯ ಗುಂಪು ಮಿನಿವ್ಯಾನ್ ಬಾಂಬ್ ಸ್ಫೋಟದ ಹೊಣೆ ವಹಿಸಿಕೊಂಡಿದೆ. ಕಾಬೂಲ್​ನ ಹಜರತ್ ಝಕಾರಿಯಾ ಮಸೀದಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಐವರು ಸಾವನ್ನಪ್ಪಿದ್ದು, 22 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾಬೂಲ್ ಎಮರ್ಜೆನ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಾಬೂಲ್‌ನ ತಾಲಿಬಾನ್ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ಹೇಳಿದ್ದಾರೆ.

ಬಾಲ್ಖ್ ಪ್ರಾಂತ್ಯದ ತಾಲಿಬಾನ್ ವಕ್ತಾರ ಮೊಹಮ್ಮದ್ ಆಸಿಫ್ ವಾಜಿರಿ ಪ್ರಕಾರ, ಉತ್ತರದ ನಗರವಾದ ಮಝರ್-ಇ-ಶರೀಫ್‌ನಲ್ಲಿ ಮಿನಿವ್ಯಾನ್​ಗಳನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಯಿತು. ವಾಹನಗಳ ಒಳಗೆ ಸ್ಫೋಟಕ ಸಾಧನಗಳನ್ನು ಇರಿಸಲಾಗಿತ್ತು. ಸರಣಿ ಸ್ಫೋಟದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಇಲ್ಲಿ ಮೃತಪಟ್ಟವರು ಶಿಯಾ ಸಮುದಾಯಕ್ಕೆ ಸೇರಿದ ಮುಸ್ಲಿಮರು ಎಂದಿದ್ದಾರೆ.

2014 ರಿಂದ ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಸ್ ಬೆಂಬಲಿತ ಸಂಘಟನೆಯು ತಾಲಿಬಾನ್ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಇನ್ನೊಂದೆಡೆ, ಕಳೆದ ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಮತ್ತಷ್ಟು ದಮನಕಾರಿ ನೀತಿಯನ್ನು ಮುಂದುವರೆಸಿದೆ.

ಇದನ್ನೂ ಓದಿ:ಕೊಪ್ಪಳ: ತಡರಾತ್ರಿ ಊಟ ಇಲ್ಲ ಎಂದಿದ್ದಕ್ಕೆ ಹೋಟೆಲ್​ಗೆ ಬೆಂಕಿ ಹಚ್ಚಿದರು!

ABOUT THE AUTHOR

...view details